ಮನೆ ದೇವರ ನಾಮ ಏನಿತು ರೂಪವೋ ನಿನದು

ಏನಿತು ರೂಪವೋ ನಿನದು

0

 ಬಾಲು : ಏನಿದು ರೂಪವೋ ನಿನದು ಎನಿತು ಭಾವವೋ ಗಣಪ

 ಎನಿತು ನೋಡಲು ನನ್ನ ಕಣ್ಣು ತುಂಬದು

 ಏನಿತು ಹಾಡಲು ತೃಪ್ತಿ ಬಾರದು ||

 ವೃಂದ : ಜೈ ಗಣೇಶ ಜೈ ಗಣೇಶ ಜೈ ಗಣೇಶ ಪಾಯಿಮ

 ಜೈ ಗಣೇಶ ಜೈ ಗಣೇಶ ಜೈ ಗಣೇಶ ರಕ್ಷಾಮ ||

 ಬಾಲು : ಅಭಯ ಹಸ್ತ ತೋರುತಿರುವ ಐಶ್ವರ್ಯ ಗಣಪತಿ

 ಎದ್ದು ನಿಂತು ಅರಿಸುತ್ತಿರುವ ಉತ್ತಿಷ್ಠ ಗಣಪತಿ ||

 ನಂದಿದೇವನ ಮದ್ದಳೆ ನಾದಕೆ ||

 ನಾಟ್ಯವಾಡುವ ನರ್ಥನ ಗಣಪತಿ|| ||ಏನಿದು ||

 ಪಂಚಹಸ್ತ ನಾಮ ಪಡೆದ ಪಂಚಮೂಖ ಗಣಪತಿ

 ತೊಡೆಯ ಮೇಲೆ ಪತ್ನಿಸಹಿತ ಅಷ್ಟ ಸಿದ್ದಿ ಗಣಪತಿ ||

 ಮೂಷಿಕ ವಾಹನ ಮೋದಕ ಹಸ್ತ |

 ಬಲಗಡೆ ಸೊಂಡಿಲ ಗಣಪತಿ |

 ಬಲಮುರಿ ಗಣಪತಿ ಬಲಗಡೆ ಸೊಂಡಿಲ ಗಣಪತಿ || ಎನಿತು||