ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಜ್ಯೋತಿ : ರೀ ರಾತ್ರಿ ನಾನೊಂದು ಕನಸು : ಕಂಡೆ.
ವಾಸು : ಏನದು ಕನಸು?
ಜ್ಯೋತಿ : ನೀವು ನನಗೆ ವಜ್ರದ ಹಾರ ತಂದುಕೊಟ್ಟ ಹಾಗೆ ಕನಸು ಕಂಡೆ.
ವಾಸು : (ಸಂಜೆ ಒಂದು ಪರ್ಸಲ್ ತಂದು ಕೊಡುತ್ತಾ )ತಗೋ ಇದನ್ನ.
ಜ್ಯೋತಿ : ರೀ!ನನ್ನ ಕನಸು ನಿಜವಾಯ್ತು
ವಾಸು : ಪರ್ಸನಲ್ ಬಿಚ್ಚಿ ನೋಡು.
ಜ್ಯೋತಿ : ರೀ ಇದೇನ್ರಿ,“ಕನಸಿನ ಅರ್ಥ ”ಅನ್ನೋ ಪುಸ್ತಕ ತಂದು ಕೊಟ್ರೀ.

Join Our Whatsapp Group

ಜ್ಯೋತಿ : ರೀ, ಮದುವೆಗೆ ಮುಂಚೆ ನನ್ನ ಅಷ್ಟು ಹೊಗಳ್ತಾ ಇದ್ದೋರು ಈಗ ನನ್ನ ಬಗ್ಗೆ ಏನೂ ಹೇಳೋದೇ ಇಲ್ಲಾ.?
ವಾಸು : ಮದುವೆಯಾದ್ಮೇಲೆ ಸುಳ್ಳು ಹೇಳಬಾರದು ಅಂತ ಶಾಪಥ ಮಾಡಿಬಿಟ್ಟೆ.

ಗಿರಾಕಿ : ಏನಯ್ಯಾ ಈ ಕಾಫಿ ಕಲಗಚ್ಚಿಗಿಂತ ಕಡೆಯಾಗಿದೆ.ಎಲ್ಲಿ ಈ ಹೋಟೆಲ್ ಮಾಲೀಕರನ್ನು ಕರಿ.
ಸಪ್ಲೆಯರ್ : ಅವರು ಕಾಫಿ ಕುಡಿಯಲು ಬೇರೆ ಹೋಟೆಲ್ಗೆ ಹೋಗಿದ್ದಾರೆ ಸರ್.