ಮನೆ ಪ್ರವಾಸ ಇಂದಿನಿಂದ ಮೂರು ದಿನಗಳ ಕಾಲ ನೇತ್ರಾಣಿ ದ್ವೀಪದಲ್ಲಿ ಮೀನುಗಾರರು, ಪ್ರವಾಸಿಗರಿಗೆ ನಿರ್ಬಂಧ

ಇಂದಿನಿಂದ ಮೂರು ದಿನಗಳ ಕಾಲ ನೇತ್ರಾಣಿ ದ್ವೀಪದಲ್ಲಿ ಮೀನುಗಾರರು, ಪ್ರವಾಸಿಗರಿಗೆ ನಿರ್ಬಂಧ

0

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನೇತ್ರಾಣಿ ದ್ವೀಪದಲ್ಲಿ ನೌಕಾನೆಲೆ ಸಮರಾಭ್ಯಾಸ ಹಿನ್ನೆಲೆ ಮೂರು ದಿನಗಳ ಕಾಲ ಮೀನುಗಾರರು ಹಾಗೂ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

Join Our Whatsapp Group

ಅ.14ರಿಂದ 16ರವರೆಗೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನೇತ್ರಾಣಿ ದ್ವೀಪದಿಂದ 10 ನಾಟಿಕಲ್​​ ಮೈಲು ದೂರದವರೆಗೆ ನಿಷೇಧ ಹೇರಲಾಗಿದೆ. ಆಗಸದಿಂದ ಯುದ್ಧ ಫೈಟರ್ ಮೂಲಕ ನೌಕಾದಳದಿಂದ ಸಮರಾಭ್ಯಾಸ ನಡೆಯಲಿದೆ.

ಆಗಸದಿಂದ ನೇತ್ರಾಣಿ ದ್ವೀಪದಲ್ಲಿ ಫೈರಿಂಗ್ ನಡೆಯುವುದರಿಂದ ನೇತ್ರಾಣಿ ದ್ವೀಪದಲ್ಲಿ ಮೀನುಗಾರರು, ಪ್ರವಾಸಿಗರಿಗೆ 3 ದಿನ ನಿರ್ಬಂಧ ಹೇರಲಾಗಿದೆ.