ಮನೆ ಅಪರಾಧ ಬೆಳಗಾವಿ: ಕಲಕಾಂಬ ಗ್ರಾಪಂ ಕಟ್ಟಡದೊಳಗೆ ಪೆಟ್ರೋಲ್‌ ಬಾಂಬ್‌ ಎಸೆದ ದುಷ್ಕರ್ಮಿಗಳು

ಬೆಳಗಾವಿ: ಕಲಕಾಂಬ ಗ್ರಾಪಂ ಕಟ್ಟಡದೊಳಗೆ ಪೆಟ್ರೋಲ್‌ ಬಾಂಬ್‌ ಎಸೆದ ದುಷ್ಕರ್ಮಿಗಳು

0

ಬೆಳಗಾವಿ: ತಾಲ್ಲೂಕಿನ ಕಲಕಾಂಬ ಗ್ರಾಮ ಪಂಚಾಯಿತಿ ಕಟ್ಟಡದೊಳಗೆ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಎಸೆದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಕಚೇರಿಯೊಳಗಿನ ಕೆಲ ಪೀಠೋಪಕರಣಗಳಿಗೆ ಹಾನಿಯಾಗಿದೆ. ಸಿಸಿಟಿವಿ ಕ್ಯಾಮೆರಾ ಕೂಡ ಕಿತ್ತುಕೊಂಡು ಹೋಗಿದ್ದಾರೆ.

Join Our Whatsapp Group

ಘಟನೆ ಶನಿವಾರ ಬೆಳಿಗ್ಗೆಯೇ ಜನರಿಗೆ ಗೊತ್ತಾಗಿದೆ. ಬಿಯರ್‌ ಬಾಟಲಿಯಲ್ಲಿ ಪೆಟ್ರೋಲ್‌ ತುಂಬಿ, ಅದಕ್ಕೆ ಬೆಂಕಿ ಹಚ್ಚಿ ಗ್ರಾಮ ಪಂಚಾಯಿತಿ ಕಟ್ಟಡದ ಕಿಟಕಿಗೆ ಎಸೆಯಲಾಗಿದೆ. ಕಿಟಕಿಗೆ ಹೊತ್ತಿಕೊಂಡ ಬೆಂಕಿ ಕೆಲ ನಿಮಿಷಗಳ ಬಳಿಕ ತಾನಾಗಿಯೇ ನಂದಿದೆ. ಅದರ ಪಕ್ಕದಲ್ಲಿ ಟೇಬಲ್‌, ಕುರ್ಚಿಗಳೊಗೆ ಹಾನಿಯಾಗಿದೆ. ಯಾವುದೇ ದಾಖಲೆಗಳು ಸುಟ್ಟಿಲ್ಲ.

ಈ ಗ್ರಾಮ ಸಚಿವ ಸತೀಶ ಜಾರಕಿಹೊಳಿ ಅವರು ಪ್ರತಿನಿಧಿಸುವ ಯಮಕನಮರಡಿ ವಿಧಾನಸಭಾ ಕ್ಷೇತ್ರ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಅವರ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ.

ಮಾರಿಹಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.