ಮನೆ ಸುದ್ದಿ ಜಾಲ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು; PUCಯಲ್ಲೇ ಫೇಲ್ ಆಗಿದ್ದ ಭಾಗ್ಯಶ್ರೀ,...

ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು; PUCಯಲ್ಲೇ ಫೇಲ್ ಆಗಿದ್ದ ಭಾಗ್ಯಶ್ರೀ, Marks Cardನಲ್ಲಿ ಬಹಿರಂಗವಾದ ಸತ್ಯ..!

0

ಕಲಬುರಗಿ: ನೀಟ್ ಪರೀಕ್ಷೆ ಬರೆದ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಭಾಗ್ಯಶ್ರೀ ಪ್ರಕರಣಕ್ಕೆ ಇದೀಗ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೇ ಅನುತ್ತೀರ್ಣಳಾಗಿದ್ದಳು ಎಂಬ ಶಾಕಿಂಗ್ ಮಾಹಿತಿ ಇದೀಗ ಹೊರಬಿದ್ದಿದೆ.

18 ವರ್ಷದ ಭಾಗ್ಯಶ್ರೀ ಕಳೆದ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಳು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ರದ್ದು ವಿಚಾರದಿಂದ ಮನನೊಂದು ಈ ನಿರ್ಧಾರ ಕೈಗೊಂಡಿದ್ದಾಳೆ ಎಂದು ಕುಟುಂಬದವರು ಹೇಳಿಕೆ ನೀಡಿದ್ದರು.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ, ತಾನು ಶೇ.92 ಅಂಕ ಪಡೆದು ಪಾಸ್ ಆಗಿದ್ದೇನೆ ಎಂದು ಭಾಗ್ಯಶ್ರೀ ಮನೆಯವರ ಬಳಿ ಹೇಳಿಕೊಂಡಿದ್ದಳು. ಮಗಳ ಮಾತನ್ನು ನಂಬಿದ ಪೋಷಕರು, ವೈದ್ಯಕೀಯ ಶಿಕ್ಷಣ ಪಡೆಯುವ ಕನಸಿಗೆ ಸಂಪೂರ್ಣ ಬೆಂಬಲ ನೀಡಿ ನೀಟ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದರು.ಇತ್ತೀಚೆಗೆ ಭಾಗ್ಯಶ್ರೀ ನೀಟ್ ಪರೀಕ್ಷೆಯನ್ನೂ ಬರೆದಿದ್ದಳು. ಆದರೆ ಇದೀಗ ಲಭ್ಯವಾಗಿರುವ Marks Card ಪ್ರಕಾರ, ದ್ವಿತೀಯ ಪಿಯುಸಿಯ ಗಣಿತ ಹಾಗೂ ಭೌತಶಾಸ್ತ್ರ ವಿಷಯಗಳಲ್ಲಿ ಆಕೆ ಅನುತ್ತೀರ್ಣಳಾಗಿದ್ದಳು ಎಂಬುದು ತಿಳಿದು ಬಂದಿದೆ.

ನಂತರ ಭಾಗ್ಯಶ್ರೀ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳಿಗೆ ಮರು ಪರೀಕ್ಷೆ ಬರೆದಿದ್ದಳು. ಭೌತಶಾಸ್ತ್ರದಲ್ಲಿ 51 ಅಂಕ ಪಡೆದು ಪಾಸ್ ಆಗಿದ್ದರೆ, ಗಣಿತದಲ್ಲಿ ಕೇವಲ 24 ಅಂಕ ಗಳಿಸಿ ಮತ್ತೆ ಫೇಲ್ ಆಗಿದ್ದಳು.ಕಾಲೇಜಿನಿಂದ ನೀಡಲಾಗುವ 20 Internal Marks ಸೇರಿಸಿದರೂ ಗಣಿತ ವಿಷಯದಲ್ಲಿ ಆಕೆ 24 ಅಂಕ ಮಾತ್ರ ಪಡೆದಿದ್ದಳು ಎಂದು ತಿಳಿದು ಬಂದಿದೆ.ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಮೇ 21 ರಂದು ಪ್ರಕಟವಾಗಿತ್ತು. ತಾನು ಫೇಲ್ ಆಗಿರುವ ವಿಷಯ ಮನೆಯವರಿಗೆ ತಿಳಿದರೆ ಬೈಯಬಹುದು ಎಂಬ ಭಯ, ಜೊತೆಗೆ ಪೋಷಕರ ನಿರೀಕ್ಷೆ ಈಡೇರಿಸಲಿಲ್ಲ ಎಂಬ ಮನಸ್ತಾಪದಿಂದಲೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.