ಮನೆ ರಾಜ್ಯ ಡಾಕ್ಟರ್​​ ನಿರ್ಲಕ್ಷ್ಯಕ್ಕೆ, ಮರ್ಮಾಂಗದ ಭಾದೆ ತಾಳಲಾರದೆ, ವ್ಯಕ್ತಿಯೋರ್ವ ಸಾವು..!

ಡಾಕ್ಟರ್​​ ನಿರ್ಲಕ್ಷ್ಯಕ್ಕೆ, ಮರ್ಮಾಂಗದ ಭಾದೆ ತಾಳಲಾರದೆ, ವ್ಯಕ್ತಿಯೋರ್ವ ಸಾವು..!

0

ಬೆಂಗಳೂರು : ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಎಂತಹ ಸ್ಥಿತಿಯಲ್ಲೂ ರೋಗಿಯನ್ನು ಪ್ರಾಣಾಪಾಯದಿಂದ ಪಾರುಮಾಡುವ ಕಾರಣ ದೇವರಿಗೆ ಅವರನ್ನು ಹೋಲಿಸಲಾಗುತ್ತದೆ. ಆದರೆ ಕೆಲವೊಮ್ಮೆ ಇದೇ ವೈದ್ಯರು ರೋಗಿಗಳ ಪಾಲಿಗೆ ಯಮನಾದ ಉದಾಹರಣೆಗಳೂ ಇವೆ.

ಇಂತಹುದ್ದೇ ಆರೋಪವೊಂದು ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ (ಶಾಂತವೇರಿ ಗೋಪಾಲಗೌಡ ಆಸ್ಪತ್ರೆ) ವೈದ್ಯರ ವಿರುದ್ಧ ಕೇಳಿಬಂದಿದೆ. ಡಾಕ್ಟರ್​​ ನಿರ್ಲಕ್ಷ್ಯಕ್ಕೆ ಮರ್ಮಾಂಗದ ಭಾದೆ ತಾಳಲಾರದೆ ವ್ಯಕ್ತಿಯೋರ್ವ ನರಳಿ ಪ್ರಾಣಬಿಟ್ಟಿದ್ದಾನೆ ಎಂದು ದೂರಲಾಗಿದ್ದು, ಇದು ಇಡೀ ವೈದ್ಯ ಲೋಕವೇ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ ಎಂಬ ಮಾತುಗಳು ಕೇಳಿಬಂದಿವೆ.

ಹೌದು, ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದ 45 ವರ್ಷದ ಶಾ ನವಾಜ್ ಎಂಬ ವ್ಯಕ್ತಿ ಮರ್ಮಾಂಗದಲ್ಲಿ ಗಡ್ಡೆ ಬೆಳೆದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆ ಎಮರ್ಜೆನ್ಸಿ ವಿಭಾಗಕ್ಕೆ ಅವರನ್ನು ಎಡ್ಮಿಟ್​​ ಮಾಡಿಕೊಳ್ಳಲಾಗಿತ್ತು. ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಹೇಳಿದ್ದು, ಬಳಿಕ ಚಿಕಿತ್ಸೆಗಾಗಿ ಆತನ ಮರ್ಮಾಂಗವನ್ನು ಆಸ್ಪತ್ರೆ ಸಿಬ್ಬಂದಿ ಕೊಯ್ದಿದ್ದರು. ಅದಾದ ಕೆಲ ದಿನಗಳ ಬಳಿಕ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ತಿಳಿಸಿದ್ದರು.

ಆದರೆ, ಗಾಯ ಇನ್ನೂ ಆರಿಲ್ಲ ಎಂದು ಈ ವೇಳೆ ಸರ್ಜರಿ ವಿಭಾಗ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಆಪರೇಷನ್ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಿಬ್ಬಂದಿ ಸಮನ್ವಯತೆ ಕೊರತೆ ಕಾರಣ ರೋಗಿ ಗಂಭೀರ ಸ್ಥಿತಿಯಲ್ಲಿ ಇರುವಾಗಲೇ ಡಿಸ್ಚಾರ್ಜ್ ಆಗುವಂತೆ ಒತ್ತಡ ಹೇರಲಾಗಿದೆ. ಕೊನೆಗೆ ಕೊಯ್ದಿದ್ದ ಮರ್ಮಾಂಗಕ್ಕೆ ಹೊಲಿಗೆ ಕೂಡ ಮಾಡದೇ ಸಿಬ್ಬಂದಿ ಕಳುಹಿಸಿರುವ ಆರೋಪ ಕೇಳಿಬಂದಿದೆ.