ಮನೆ ಸುದ್ದಿ ಜಾಲ ಅಪ್ಪುಸಮಾಧಿಗೆ ನಟ ಅಲ್ಲು ಅರ್ಜುನ್ ಭೇಟಿ

ಅಪ್ಪುಸಮಾಧಿಗೆ ನಟ ಅಲ್ಲು ಅರ್ಜುನ್ ಭೇಟಿ

0

ಬೆಂಗಳೂರು:  ಪುನೀತ್​ ರಾಜ್​ಕುಮಾರ್​ ನಿಧನ ಬಳಿಕೆ ಚಿತ್ರರಂಗದ ತಾರೆಯರು ಅವರ ಮನೆಗೆ ಭೇಟಿ ನೀಡುತ್ತಿದ್ದು, ಇಂದು ಪುನೀತ್​ ಸ್ನೇಹಿತರಲ್ಲಿ ಒಬ್ಬರಾದ ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಅವರು ಅಪ್ಪು ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಖಾಸಗಿ ವಿಮಾನದಲ್ಲಿ ಬೆಂಗಳೂರಿನ ಹೆಚ್​ಎಎಲ್ ಏರ್​ಪೋರ್ಟ್​ಗೆ ಬಂದಿಳಿದ ಅಲ್ಲು ಅರ್ಜುನ್​ ಮೊದಲಿಗೆ ನಾಗಾವರದಲ್ಲಿರುವ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿದರು. ಬಳಿಕ ಶಿವಣ್ಣನ​ ಜೊತೆ ಸೇರಿ ನೇರ ಸದಾಶಿವ ನಗರದಲ್ಲಿರುವ ಅಪ್ಪು ಮನೆಗೆ ಭೇಟಿ ನೀಡಿದರು. ಮನೆಯಲ್ಲಿ ಅಪ್ಪು ಫೋಟೋಗೆ ನಮಿಸಿದ ಅಲ್ಲು ಅರ್ಜುನ್​ ಪುನೀತ್​ ಪತ್ನಿ ಅಶ್ವಿನಿ ಅವರೊಂದಿಗೆ ಮಾತುಕತೆ ನಡೆಸಿ, ಸಮಾಧಾನ ಹೇಳಿದರು.

ಪುನೀತ್ ಸಮಾಧಿಗೆ ನಮಿಸಿದ ಬಳಿಕ ಮಾಧ್ಯಮದವರೊಂದಿಗೆ ಅಲ್ಲು ಅರ್ಜುನ್​ಪುನೀತ್ ರಾಜ್‍ಕುಮಾರ್​ ಸಮಾಧಿಗೂ ಭೇಟಿ ನೀಡಿದ್ದಲ್ಲದೇ  ರಾಜ್ ಕುಮಾರ್, ಪಾರ್ವತಮ್ಮ ರಾಜ್‍ಕುಮಾರ್ ಹಾಗು ಅಂಬರೀಶ್ ಅವರ ಸಮಾಧಿಗೆ ನಮಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಲ್ಲು ಅರ್ಜುನ್, ಬೆಂಗಳೂರಿಗೆ ಬಂದು ಪುನೀತ್​ ರಾಜ್​ಕುಮಾರ್​ ಕುಟುಂಬವನ್ನ ಭೇಟಿ ಮಾಡಬೇಕೆಂದು ನಾನು ತುಂಬಾ ದಿನದಿಂದ ಎದುರು ನೋಡುತ್ತಿದ್ದೆ. ‘ಪುಷ್ಪ’ ಸಿನಿಮಾದ ಗಜಿಬಿಜಿ ಮುಗಿದು ಶಾಂತವಾಗಿ ಬಂದು ಮೀಟ್​ ಮಾಡಬೇಕು ಅಂದುಕೊಂಡಿದ್ದೆ. ಇಂದು ಬಂದು ಭೇಟಿ ಮಾಡಿದ್ದೇನೆ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇತ್ತು. ನಾನು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಆಗ್ತಾ ಇದ್ದೆ. ಅವರು ಹೈದರಾಬಾದ್​ಗೆ ಬಂದಾಗ ನನ್ನ ಭೇಟಿ ಆಗ್ತಾ ಇದ್ರು” ಎಂದರು.

‘ಅಲಾ ವೈಕುಂಟಪುರಮುಲೋ ಸಿನಿಮಾ ನೋಡಿದ ಬಳಿಕ ಪುನೀತ್​ ನನಗೆ ಕರೆ ಮಾಡಿ, ‘ಬುಟ್ಟಾ ಬೊಮ್ಮಾ’ ಸೇರಿದಂತೆ ಎಲ್ಲಾ ಹಾಡುಗಳು ಚೆನ್ನಾಗಿದೆ ಎಂದು ಹೇಳಿದ್ರು. ಆ ಬಳಿಕ ನಾವು ಭೇಟಿ ಆಗಬೇಕು ಅಂದುಕೊಂಡಿದ್ವಿ. ಆದ್ರೆ ಕೋವಿಡ್​ ಲಾಕ್​ಡೌನ್​ನಿಂದ ಸಾಧ್ಯವಾಗಿರಲಿಲ್ಲ. ನನಗೆ ಪುನೀತ್ ಡ್ಯಾನ್ಸ್ ಇಷ್ಟವಾಗುತ್ತಿತ್ತು. ಪುನೀತ್ ನೆನಪೇ ಇಂದು ಶಾಶ್ವತ. ಶಿವಣ್ಣನನ್ನ ಭೇಟಿಯಾಗಿ ಸಮಾಧಾನವಾಯ್ತು. ನಮಗೆ ಅಪ್ಪು ಯಾವಾಗಲೂ ಮಾದರಿಯಾಗಿರ್ತಾರೆ ಎಂದು ಅಲ್ಲು ಅರ್ಜುನ್​ ಭಾವುಕರಾದರು.