ಮನೆ ಮನರಂಜನೆ ಏ.25 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟಿ ರಶ್ಮಿ ಪ್ರಭಾಕರ್

ಏ.25 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟಿ ರಶ್ಮಿ ಪ್ರಭಾಕರ್

0

ಬೆಂಗಳೂರು (Bengaluru)-ಕನ್ನಡದ ಕಿರುತೆರೆ ನಟಿ ರಶ್ಮಿ ಪ್ರಭಾಕರ್ ಅವರ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ.
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಿಂದ ಕನ್ನಡಿಗರ ಮನೆ ಮನ ಗೆದ್ದ ಬೆಡಗಿ ರಶ್ಮಿ ಪ್ರಭಾಕರ್. ‘ಲಚ್ಚಿ’ ರಶ್ಮೀ ಪ್ರಭಾಕರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಏ. 25 ರಂದು ರಶ್ಮಿ ಪ್ರಭಾಕರ್ ಅವರು ತಮ್ಮ ದೀರ್ಘಕಾಲದ ಗೆಳೆಯ ನಿಖಿಲ್ ಭಾರ್ಗವ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಏಪ್ರಿಲ್ 25 ರಂದು ಬೆಳಗ್ಗೆ 9.21 ರಿಂದ 10.19 ರವರೆಗೆ ಇರುವ ಶುಭ ಮುಹೂರ್ತದಲ್ಲಿ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಭಾರ್ಗವ್ ಅವರ ಕಲ್ಯಾಣ ಜರುಗಲಿದೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಭಾರ್ಗವ್ ಅವರ ಮದುವೆ ನಡೆಯಲಿದೆ.
ಈಗಾಗಲೇ ವಿವಾಹ ಪೂರ್ವ ಶಾಸ್ತ್ರಗಳು ವಧು ರಶ್ಮಿ ಪ್ರಭಾಕರ್ ಮನೆಯಲ್ಲಿ ಪ್ರಾರಂಭವಾಗಿದೆ. ವರಪೂಜೆ ನೆರವೇರಿದೆ. ಅರಿಶಿನ ಶಾಸ್ತ್ರ, ಮೆಹೆಂದಿ ಶಾಸ್ತ್ರ ಸದ್ಯದಲ್ಲೇ ನಡೆಯಲಿದೆ.
ನಟಿ ರಶ್ಮಿ ಪ್ರಭಾಕರ್ ಸಾಂಪ್ರದಾಯಿಕವಾಗಿ, ಶಾಸ್ತ್ರೋಕ್ತವಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ಹೀಗಾಗಿ, ಆರತಕ್ಷತೆ ಕಾರ್ಯಕ್ರಮ ಇರುವುದಿಲ್ಲ ಎಂದು ನಟಿ ರಶ್ಮಿ ಪ್ರಭಾಕರ್ ತಿಳಿಸಿದ್ದಾರೆ.
ನಿಖಿಲ್ ಭಾರ್ಗವ್ ಮತ್ತು ರಶ್ಮಿ ಪ್ರಭಾಕರ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಪರಸ್ಪರ ಪ್ರೀತಿಸುತ್ತಿದ್ದ ನಿಖಿಲ್ ಭಾರ್ಗವ್ ಹಾಗೂ ರಶ್ಮಿ ಪ್ರಭಾಕರ್ ಅವರ ಪ್ರೀತಿಗೆ ಮನೆಯವರು ಸಮ್ಮತಿ ನೀಡಿದ್ದಾರೆ.
ಶುಭ ವಿವಾಹ, ಜೀವನ ಚೈತ್ರ, ಮನಸೆಲ್ಲಾ ನೀನೇ, ಮಹಾಭಾರತ ತಮಿಳಿನ ಅರುಂಧತಿ, ತೆಲುಗಿನ ಪೌರ್ಣಮಿ, ಕಾವ್ಯಾಂಜಲಿ ಸೇರಿದಂತೆ ಹಲವಾರು ಸೀರಿಯಲ್‌ಗಳಲ್ಲಿ ರಶ್ಮಿ ಪ್ರಭಾಕರ್ ನಟಿಸಿದ್ದಾರೆ. ಸೀರಿಯಲ್‌ಗಳ ಜೊತೆಗೆ ಮಹಾಕಾವ್ಯ, ಬಿಬಿ5 ಸಿನಿಮಾಗಳಲ್ಲೂ ನಟಿ ರಶ್ಮಿ ಪ್ರಭಾಕರ್ ಮಿಂಚಿದ್ದಾರೆ.

ಹಿಂದಿನ ಲೇಖನಕೊರೊನಾ: ರಾಜ್ಯದಲ್ಲಿ 100 ಪ್ರಕರಣಗಳು ಪತ್ತೆ
ಮುಂದಿನ ಲೇಖನ5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ‘ಬಯೋಲಾಜಿಕಲ್ ಇ ಲಸಿಕೆ ಕಾರ್ಬೆವಾಕ್ಸ್’