ಮನೆ ಮನರಂಜನೆ ‘ಆದಿಪುರುಷ’ ಚಿತ್ರ ತಂಡ ‘ಹನುಮಂತನ‘ ಫಸ್ಟ್ ಲುಕ್ ಬಿಡುಗಡೆ

‘ಆದಿಪುರುಷ’ ಚಿತ್ರ ತಂಡ ‘ಹನುಮಂತನ‘ ಫಸ್ಟ್ ಲುಕ್ ಬಿಡುಗಡೆ

0

ಹನುಮ ಜಯಂತಿಯ ಪ್ರಯುಕ್ತ ‘ಆದಿಪುರುಷ’ ಚಿತ್ರ ತಂಡ ‘ಹನುಮಂತನ‘ ಫಸ್ಟ್  ಲುಕ್ ಬಿಡುಗಡೆ ಮಾಡಿದ್ದು, ಮರಾಠಿ ನಟ ದೇವದತ್ತ ನಾಗೆ ಹನುಮನಾಗಿ ಕಾಣಿಸಿಕೊಂಡಿದ್ದಾರೆ.

Join Our Whatsapp Group

ತಪಸ್ಸು ಮಾಡುತ್ತಿರುವ ಭಂಗಿಯಲ್ಲಿ ಕುಳಿತಿರುವ ಹನುಮಂತನ ಫಸ್ಟ್ ಲುಕ್ ಪೋಸ್ಟರ್ ಅನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ನಟ ಪ್ರಭಾಸ್, ‘ರಾಮನ ಭಕ್ತ ಮತ್ತು ರಾಮಾಯಣದ ಪ್ರಾಣ‘ ಎಂದು ಬರೆದುಕೊಂಡಿದ್ದಾರೆ.

ಹನುಮ ಪಾತ್ರಧಾರಿ ದೇವದತ್ತ ನಾಗೆ ಮೊದಲು ಮರಾಠಿ ಕಿರುತರೆಯಲ್ಲಿ ನಟಿಸುತ್ತಿದ್ದರು. ಮರಾಠಿ ಧಾರವಾಹಿ ‘ಜೈ ಮಲ್ಹಾರ್‘ನಲ್ಲಿ ಭಗವಾನ್ ಖಂಡೋಬಾ ಪಾತ್ರದಲ್ಲಿ ನಟಿಸಿ ಹೆಸರುವಾಸಿಯಾಗಿದ್ದರು. 2013ರಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಅವರು ಅನೇಕ ಚಿತ್ರಗಳಲ್ಲಿ ನಟಿಸಿ ಭರವಸೆಯ ನಟ ಎನಿಸಿಕೊಂಡಿದ್ದಾರೆ.

ಬ್ಲಾಕ್ ಬ್ಲಾಸ್ಟರ್ ‘ತನ್ಹಾಜಿ:ದಿ ಅನ್ ಸಂಗ್ ವಾರಿಯರ್‘ ಚಿತ್ರದ ನಿರ್ದೇಶಕ ಓಂ ರಾವುತ್ ಆದಿಪುರುಷ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಾಮಾಯಣ ಕಥೆಯಾಧಾರಿತ ಚಿತ್ರ ಇದಾಗಿದ್ದು, ಬಾಹುಬಲಿ ಖ್ಯಾತಿಯ ಪ್ರಭಾಸ್ ಈ ಚಿತ್ರದಲ್ಲಿ ರಾಘವ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಬಾಲಿವುಡ್ ನಟಿ ಕೃತಿ ಸನೂನ್ ಸೀತೆಯಾಗಿ ಕಾಣಿಸಿಕೊಂಡರೆ, ನಟ ಸನ್ನಿ ಲಕ್ಷಣನಾಗಿ ಕಾಣಿಸಿಕೊಂಡಿದ್ದಾರೆ. ಜೂನ್ 16ರಂದು ಚಿತ್ರ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.

ಹಿಂದಿನ ಲೇಖನಕರಗ ಮಹೋತ್ಸವದ ವೇಳೆ ಅಗ್ನಿ ಅವಘಡ: ದ್ವಿಚಕ್ರ ವಾಹನಗಳು ಬೆಂಕಿಗಾಹುತಿ
ಮುಂದಿನ ಲೇಖನಬೈಕ್’ಗೆ ಕೆಎಸ್’ಆರ್’ಟಿಸಿ ಬಸ್ ಢಿಕ್ಕಿ: ಹೂ ಬೆಳೆಗಾರ ಸಾವು