ಮನೆ ಶಿಕ್ಷಣ ಮೇ 10ರ ನಂತರ ಎಸ್ಎಸ್ಎಲ್’ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಮೇ 10ರ ನಂತರ ಎಸ್ಎಸ್ಎಲ್’ಸಿ ಪರೀಕ್ಷೆ ಫಲಿತಾಂಶ ಪ್ರಕಟ

0

ಬೆಂಗಳೂರು: ಮೇ.10ರ ರಾಜ್ಯ ವಿಧಾನಸಭಾ ಚುನಾವಣೆ ಬಳಿಕ ಎಸ್ಎಸ್ಎಲ್’ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.

Join Our Whatsapp Group

ಈಗಾಗಲೇ ಮೌಲ್ಯಮಾಪನ ಪೂರ್ಣಗೊಂಡಿದ್ದು, ಮೌಲ್ಯಮಾಪನದ ನಂತರದ ಕಾರ್ಯ ಪ್ರಗತಿಯಲ್ಲಿದೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌’ಇಎಬಿ)ಯ ಮೂಲಗಳು ತಿಳಿಸಿವೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಲೆಗಳನ್ನು ಮತಗಟ್ಟೆಗಳಾಗಿ ಗುರುತಿಸಿರುವುದರಿಂದ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಆಡಳಿತ ಮಂಡಳಿ ಕಾಯಬೇಕಾಗಿದೆ. ಹೀಗಾಗಿ ಫಲಿತಾಂಶ ಸಿದ್ಧವಾಗಿದ್ದರೂ ಮತದಾನ ಪೂರ್ಣಗೊಳ್ಳುವವರೆಗೆ ಕಾಯಬೇಕಿದೆ.

ಈ ನಡುವೆ ಚುನಾವಣೆ ಪೂರ್ಣಗೊಂಡ ಬಳಿಕ ಮೇ.11 ಅಥವಾ 12 ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹಿಂದಿನ ಲೇಖನ2012ರಲ್ಲಿ ಕಾಂಗ್ರೆಸ್ ಕದ ತಟ್ಟಿದ್ದ ಬೊಮ್ಮಾಯಿ: ಜಗದೀಶ್ ಶೆಟ್ಟರ್ ಆರೋಪ
ಮುಂದಿನ ಲೇಖನಬಾರಾಮುಲ್ಲಾ, ರಜೌರಿಯಲ್ಲಿ ಸೇನೆ, ಉಗ್ರರ ನಡುವೆ ಗುಂಡಿನ ಕಾಳಗ: ಇಬ್ಬರು ಉಗ್ರರ ಹತ್ಯೆ