ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
40750 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಮೈಸೂರು: ಹಿರಿಯ ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

0
ಮೈಸೂರು:- ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸೆಯಲ್ಲಿನ ಎ.ಆರ್.ಟಿ ವಿಭಾಗಕ್ಕೆ ಒಂದು ವರ್ಷದ ಅವಧಿಗೆ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ಹಿರಿಯ ವೈದ್ಯಾಧಿಕಾರಿಯ ಹುದ್ದೆಗೆ ಅನುಭವ ಮತ್ತು ಅರ್ಹತೆಗನುಸಾರವಾಗಿ ನಿಗದಿತ ವಯೋಮಾನದಡಿಯಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಹಿರಿಯ ವೈದ್ಯಾಧಿಕಾರಿ ಹುದ್ದೆಗೆ ವಿದ್ಯಾರ್ಹತೆ:  ಔಷಧ ಅಥವಾ ಯಾವುದೇ ವಿಭಾಗದಲ್ಲಿ ಎಂಡಿ ಮಾಡಿರಬೇಕು ಅಥವಾ ಕನಿಷ್ಟ ಮೂರು ವರ್ಷ ಅನುಭವ ಹೊಂದಿರುವ ಯಾವುದೇ ಕ್ಲಿನಿಕಲ್ ವಿಭಾಗದಲ್ಲಿ ಡಿಪ್ಲೊಮಾದೊಂದಿಗೆ ಎಂ.ಬಿ.ಬಿ.ಎಸ್ ಪೂರ್ಣಗೊಂಡಿರಬೇಕು ಅಥವಾ ಹೆಚ್.ಐ.ವಿ ಮೆಡಿಸಿನ್‌ನಲ್ಲಿ ಫೆಲೋಶಿಪ್‌ನೊಂದಿಗೆ ಎಂ.ಬಿ.ಬಿ.ಎಸ್ ಅಥವಾ ಸಾರ್ವಜನಿಕ ಆರೋಗ್ಯ ಡಿಪ್ಲೊಮಾದಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಅಭ್ಯರ್ಥಿಗೆ  69  ವರ್ಷ ಮೀರಿರಬಾರದು. ಆರ್ಹ ಅಭ್ಯರ್ಥಿಗಳು ಮಾ.25 ರಂದು ಬೆಳಿಗ್ಗೆ 9 ಗಂಟೆಯಿOದ 10.30 ಗಂಟೆಯೊಳಗೆ ವೈಯಕ್ತಿಕ ವಿವರ (ಬಯೋಡೆಟಾ) ಮತ್ತು ವಿದ್ಯಾರ್ಹತೆ, ಅನುಭವ ಪ್ರಮಾಣ ಪತ್ರ, ಭಾವಚಿತ್ರ ಹಾಗೂ ಇತರೆ ಸಂಬoಧಿಸಿದ ದಾಖಲಾತಿಗಳ ಜೆರಾಕ್ಸ್ ಪ್ರತಿ ಹಾಗೂ ಮೂಲ ದಾಖಲಾತಿಗಳೊಂದಿಗೆ ಎ.ಆರ್.ಟಿ. ಕೇಂದ್ರ ಕೊಠಡಿ ಸಂ. 18 ರಲ್ಲಿ ನೇರ ಸಂದರ್ಶನಕ್ಕೆ (ವಾಕ್ ಇನ್ ಇಂಟರ್‌ವ್ಯೂ) ಹಾಜರಾಗಬೇಕೆಂದು ಕೆ.ಆರ್ ಆಸ್ಪತ್ರೆಯ ಎಂಎoಸಿ ಮತ್ತು ಆರ್‌ಐನ ವೈದ್ಯಕೀಯ ಅಧೀಕ್ಷಕರಾದ ಡಾ.ಶೋಭಾ ಎಚ್.ಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆಗೆ ನಡೆಸಲು ರಾಜ್ಯ ಸರ್ಕಾರಕ್ಕೆ...

0
ರಾಜ್ಯ ಪಠ್ಯಕ್ರಮವಿರುವ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಕರ್ನಾಟಕ ಹೈಕೋರ್ಟ್‌ ಗುರುವಾರ ಅನುಮತಿಸಿದೆ. ಹೀಗಾಗಿ, ಪರೀಕ್ಷೆಯನ್ನು ನಡೆಸುವ ಕುರಿತು ಉಂಟಾಗಿದ್ದ ಅನಿಶ್ಚಿತತೆ ದೂರವಾಗಿದೆ. ಕಳೆದ ವರ್ಷದ...

ಚಿತ್ರದುರ್ಗ: ಚಾಕೋಲೇಟ್ ಎಂದು ಮಾತ್ರೆ ಸೇವಿಸಿ 4 ವರ್ಷದ ಮಗು ಸಾವು

0
ಚಿತ್ರದುರ್ಗ: ಚಾಕೊಲೇಟ್​ ಎಂದು ಮಾತ್ರೆ ಸೇವಿಸಿ ನಾಲ್ಕು ವರ್ಷದ ಮಗು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ತಾಲೂಕಿನ ಕಡಬನಕಟ್ಟೆ ಗ್ರಾಮದಲ್ಲಿ ನಡೆದಿದೆ. ಹೃತ್ವಿಕ್(4) ಮೃತ ರ್ದುದೈವಿ. ಕಳೆದ 4 ದಿನಗಳ ಹಿಂದೆ ಮನೆಯಲ್ಲಿದ್ದ ಮಾತ್ರೆ ಸೇವಿಸಿದ್ದ ಮಗುವನ್ನು...

160 ಮಂದಿ ಶರಣ ಸ್ವಾಮೀಜಿಗಳು, ಗುರುಗಳು ಹಾಗೂ ವೀರಶೈವ- ಲಿಂಗಾಯತ ಮಠಾಧೀಶರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ...

0
ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬಸವಕಲ್ಯಾಣದಲ್ಲಿ ಬೃಹತ್ ಸನ್ಮಾನ ಸ್ವೀಕರಿಸಿದರು ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ - ಬಸವಕಲ್ಯಾಣ,...

2- 3 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ

0
ಬೀದರ್: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇನ್ನೊಂದು 2-3 ದಿನಗಳಲ್ಲಿ ಸಿದ್ಧವಾಗಲಿದೆ. ಇಂದು ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ವಿಷಯ  ಚರ್ಚೆ ಆಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೀದರ್...

ಕೇಂದ್ರ ಪುರಸ್ಕೃತ ಪ್ರಸಾದ್ ಮತ್ತು ಸ್ವದೇಶ್ ದರ್ಶನ್ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ

0
ಮೈಸೂರು: ಪ್ರವಾಸೋದ್ಯಮ ಮಂತ್ರಾಲಯ ಭಾರತ ಸರ್ಕಾರ ಮತ್ತು ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಜರುಗಿದ ಕಾರ್ಯಕ್ರಮದಲ್ಲಿ ಇಂದು ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಅಭಿವೃದ್ಧಿ, ಇಕೋಲಾಜಿಕಲ್ ಎಕ್ಸ್ಪೀರಿಯನ್ಸ್ ಜೋನ್, ಟಾಂಗ ರೈಡ್...

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ: ಆರೋಪಿಯ ʻರೇಖಾಚಿತ್ರʼ ಬಿಡುಗಡೆ ಮಾಡಿದ ಎನ್ ಐಎ

0
ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಪೋಟ ಪ್ರಕರಣ ಸಂಬಂಧ ತನಿಕೆ ನಡೆಸುತ್ತಿರುವ ಎನ್‌ ಐಎ ಇದೀಗ ಬಾಂಬ್‌ ಸ್ಪೋಟದ ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಿದೆ. ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ...

ಧಾರವಾಡ: ಸರ್ಕಾರಿ ಅಧಿಕಾರಿ ಪುತ್ರನ ಮದುವೆಯಲ್ಲಿ ವಜ್ರ,‌ಚಿನ್ನ ನಗದು ಕಳವು

0
ಧಾರವಾಡ: ಸರ್ಕಾರಿ ಇಲಾಖೆ ಅಧಿಕಾರಿಯೊಬ್ಬರ ಪುತ್ರನ ಮದುವೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ, ಚಿನ್ನ, ನಗದು ಹಣವನ್ನು ಕಳ್ಳರು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ಧಾರವಾಡದ ಸರ್ಕಾರಿ ಇಲಾಖೆ ಅಧಿಕಾರಿಯೊಬ್ಬರ ಪುತ್ರನ ಮದುವೆ ಹುಬ್ಬಳ್ಳಿಯ...

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

0
ಬೆಂಗಳೂರು : ಅಪ್ರಾಪ್ತೆ ಮೇಲೆ ಎರಡು ವರ್ಷಗಳಿಂದ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಆರೋಪ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ತುಮಕೂರು ಜಿಲ್ಲೆಯ...

ನೀರಿನ ಸಮಸ್ಯೆ ಬಗೆಹರಿಸಿದರೆ ಕರ್ನಾಟಕಕ್ಕೆ ಸೇರುತ್ತೇವೆ: ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ ಮಹಾರಾಷ್ಟ್ರದ ರೈತರು

0
ಬೆಳಗಾವಿ: ಮಹಾರಾಷ್ಟ್ರದ ಜತ್ತ ತಾಲೂಕಿನ ರೈತ ಮುಖಂಡರ ನಿಯೋಗವು ಬೆಳಗಾವಿಯ ಅಥಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಭೇಟಿಯಾಗಿ ನೀರಿನ ಸಮಸ್ಯೆ ಸರಿಪಡಿಸುವಂತೆ ಮನವಿ ಪತ್ರವನ್ನು...

EDITOR PICKS