ಶ್ಲೋಕ :
ತಕ್ರಂ ತೈಲಾಭಿಷಿಕ್ತಂ | ಮನುಜ ಮಘ ಮುಖಿಂ ವಾನರಂ ಕಾಷ್ಟಭಾರಂ||
ರಿಕ್ತ ಸ್ತ್ರೀರಿಕ್ತಕುಂಭಂ ಪ್ರತಿಮುಖ ಕಲಹಂ |ಮುಕ್ತ ಕೇಶೀಚ ನಗ್ನಂ||
ಕಾರ್ಪಾಸಂ ಛಿನ್ನನಾಸಂ ಸಜಟ ಮುಕುಟಾರಕ್ತ ಮಾಲ್ಯಾರ್ದ್ರ ವಸ್ತ್ರಂ|
ಪ್ರಸ್ಥಾನೇ ಪ್ರಸ್ಥಿತಾನಾಂ ಅಶುಭಫಲಕರಂ ಬ್ರಹ್ಮಚಾರ್ಮೈಕ ವಿಪ್ರಂ|
ಮಾರ್ಜಾಲ ಯುದ್ಧಂ ಕಲಹಂ ಕುಟುಂಬಂ ರಜಸ್ವಲಾಸ್ತ್ರೀ ಶಶಕಾಷಭಾರಂ|
ಅಕಾಲವೃಷ್ಟಿಶ್ಚ ಭುಜಂಗದರ್ಶನಂ ಪಶುಕ್ಷತಂ ದುಃಖಕರ ಪ್ರಯಾಂತುಂ|
ಅರ್ಥ : ಮಜ್ಜಿಗೆ, ಎಣ್ಣೆ ಹೊತ್ತುಕೊಂಡಿರುವ ಮನುಷ್ಯ, ವಿಧವೆ, ಬರಿಯ ಕೊಡ, ಜಗಳವಾಡುತ್ತಿರುವ ದಂಪತಿಗಳು, ಕಪಿಗಳು, ಸೌದೆಹೊರೆ, ಮೂಗಿಲ್ಲದವನು, ಸನ್ಯಾಸಿ, ಬೈರಾಗಿ,ಕೆಂಪುಹೂ, ಒದ್ದೆ ಬಟ್ಟೆ, ಬ್ರಹ್ಮಚಾರಿ, ಒಂಟಿ ಬ್ರಾಹ್ಮಣ, ಬೆಕ್ಕುಗಳ ಜಗಳ, ಋತುವಾದ ಸ್ತ್ರೀ, ಕಟ್ಟಿಗೆ, ಮೊಲ, ಹಾವು, ಅಕಾಲವೃಷ್ಟಿ, ಹಸುಗಳು ಸೀನುವಿಗೆ ಇವುಗಳನ್ನು ನೋಡಿದರೆ ಪ್ರಯಾಣಿಕರಿಗೆ ಅಶುಭವಾಗುವುದರಿಂದ ಪಯಣವನ್ನು ನಿಲ್ಲಿಸಬೇಕು.ಪ್ರಯಾಣ ಮಾಡುವವರನ್ನು “ನೀನು ಎಲ್ಲಿಗೆ ಹೋಗುವಿ? ಯಾತಕ್ಕೆ ಹೋಗುವೆ?” ಎಂದು ಹೀಗೆಲ್ಲ ಕೇಳಿದರೆ ಕಾರ್ಯದಲ್ಲಿ ತೊಂದರೆ ಪ್ರಯಾಣದಲ್ಲಿ ತೊಂದರೆಗಳಾಗುತ್ತವೆ. ಏನಾದರೂ ಮರೆತು ಹೋಗೋಣ,ಚಕ್ಕಡಿ,ವಾಹನ ಬಿಡುವಿಕೆ, ತಲೆಯ ಮೇಲಿನ ರುಮಾಲು ಟೋಪಿಗೆ ಜಾರಿ ಬೀಳೋಣ ಇವು ಸಹ ದುಷ್ಟ ಫಲಗಳು.
ವಿಶೇಷ : ಇಂತಹ ದುಷ್ಟ ಶಕುನಗಳು ಅಕಸ್ಮಾತ್ ಕಂಡರೆ ಪ್ರಯಾಣವನ್ನು ನಿಲ್ಲಿಸಿ ಮನೆಗೆ ಬಂದು ತುಪ್ಪದ ದೀಪವನ್ನು ಹಚ್ಚಿ,ತನ್ನ ಮನೆಯ ದೇವರ ದರ್ಶನ ತೆಗೆದುಕೊಂಡು ಪ್ರಾರ್ಥನೆ ಮಾಡಿಕೊಂಡು,ಬಿಕ್ಷುಕರಿಗೆ ದಾನ ಧರ್ಮ ಮಾಡಿ ಪುನಃ ಪಯಣ ಮಾಡುವವರು ಉತ್ತಮ. ಹೀಗೆ ಮಾಡಿದರೆ ಅಶುಭ ಶಕುನಗಳ ಪೀಡೆ ನಿವಾರಣೆಯಾಗುವುದು.
ದುರ್ನಿಮಿತ್ಯ ದೋಷಾವಾದ :
ಶ್ಲೋಕ :
*ದೇವತಾದರ್ಶನೇ ಚೈವ ಸ್ವಯೋಷಿತ್ಸಂಗ ಮೇಪಿಚ |
ಭೋಜನೇ ಶಯನೇಭ್ಯಂಗೇ ನಿತ್ಯಕರ್ಮಣೀ ಪೈತೃಕೇ||
ಶ್ರಾದ್ಧೆ ದಾನೇ ನಿತ್ಯಯಾನೇ ದುರ್ನಿಮಿತ್ಯಂನ ಭಾವಯೇತ್|
ಅರ್ಥ : ದೇವತಾ ದರ್ಶನ, ಸ್ವ- ಸ್ತ್ರೀ ಸಂಗ ಭೋಜನ, ಮಲಗುವ,ಅಭ್ಯಂಗನ ಕಾಲ ಪ್ರತಿದಿನದ ಕೆಲಸ, ಶ್ರದ್ಧ ದಾನ ಮಾಡುವ ಕಾಲ, ಪ್ರತಿದಿನದ ಸಂಚಾರ ಇಂಥಾ ಸಮಯದಲ್ಲಿ ಶಕುನಗಳನ್ನು ಎಣಿಸಬಾರದು.
ಪ್ರಯಾಣ ಮಾಡುವಾಗ ಕಾಗೆ ಎಡಕ್ಕೆ ಹಾರಿ ಬಂದರೆ ಒಳ್ಳೆಯದು.ಮಾಂಸ ಕಚ್ಚಿಕೊಂಡು ಎದುರಿಗೆ ಬಂದರೆ ಶುಭವು. ಕಾಗಿಗಳ ಕೂಟವನ್ನು ನೋಡಿದರೆ ಆರು ತಿಂಗಳಲ್ಲಿ ಮರಣ ಸಂಭವಿಸುತ್ತದೆ.ಕಾರಣ ಕಾಗೆಗಳ ಕೂಟವನ್ನು ನೋಡಿದ ಕೂಡಲೇ ಮನೆಗೆ ಬಂದು ಸ್ನಾನ ಮಾಡಿ ದೇವರಿಗೆ ತುಪ್ಪದಾರುತಿಯನ್ನು ಬೆಳಗಿ, ದೇವರನ್ನು ಪ್ರಾರ್ಥಿಸಬೇಕು ನಂತರ ಭಿಕ್ಷುಕರಿಗೆ ದಾನ ಧರ್ಮ ಮಾಡಿ ಅವರನ್ನು ಶಾಂತ ಪಡಿಸಬೇಕು. ನಂತರ ಪರಗ್ರಾಮದಲ್ಲಿ ರತಕ್ಕ ತೀರ ಆಪ್ತ ಬಂದು ಮಿತ್ರರಿಗೆ ಸುಳ್ಳು ವರ್ತಮಾನ ಕಳಿಸಬೇಕು. ಇದರಿಂದ ದೋಷವು ನಿವಾರಣೆಯಾಗುವುದು. ಕಾಗೆಗಳು ಗುಂಪು ಗುಂಪಾಗಿ ಮನೆಯ ಮೇಲೆ ಕುಳಿತು ಒಂದರಿದರೆ ಕೆಡುಕಾಲ ಸೂಚನೆ ಕಂಡುಬಂದಿತ್ತು ಕಾಗೆಯೂ ಮನೆ ಯೊಳಗೆ ಹೋದರೆ ಕನಿಷ್ಠ ಆರು ತಿಂಗಳಾದರೂ ಮನೆಯನ್ನು ಬಿಡಬೇಕು. ಕಾಗೆಯು ಮುಟ್ಟಿದರೂ ಅರಿಷ್ಟ ತಗಲುವುದು.