ಮನೆ ರಾಜ್ಯ ಬೆಳಗಾವಿ: ಗೊಂದಲ ಮೂಡಿಸಿದ 2 ಹೆಚ್ಚುವರಿ ಮತಗಳು

ಬೆಳಗಾವಿ: ಗೊಂದಲ ಮೂಡಿಸಿದ 2 ಹೆಚ್ಚುವರಿ ಮತಗಳು

0

ಬೆಳಗಾವಿ(Belagavi): ನಗರದ ಜ್ಯೋತಿ ಕಾಲೇಜಿನಲ್ಲಿ ನಡೆದಿರುವ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಎರಡು ಮತಗಳು ಹೆಚ್ಚುವರಿಯಾಗಿ ದೊರೆತಿದ್ದು, ಗೊಂದಲಕ್ಕೆ ಕಾರಣವಾಗಿತ್ತು.

ಮತ ಎಣಿಕೆ ಕಾರ್ಯ ಬೆಳಿಗ್ಗೆ 8ಕ್ಕೆ ಆರಂಭಗೊಂಡಿತು. ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ 77 ಮತಗಟ್ಟೆಗಳ ಮತ ಪೆಟ್ಟಿಗೆಯನ್ನು ತೆರೆದು ಎಣಿಸಲಾಯಿತು.

ಈ ಸಂದರ್ಭದಲ್ಲಿ ಹುಬ್ಬಳ್ಳಿಯ ರೋಟರಿ ಶಾಲೆ ಮತಗಟ್ಟೆಯ ಪೆಟ್ಟಿಗೆಯಲ್ಲಿ 2 ಹೆಚ್ಚುವರಿ ಮತಗಳು ಸಿಕ್ಕವು. ಈ ಮತಗಟ್ಟೆಯಲ್ಲಿ ಒಟ್ಟು 757 ಮತಗಳು ಚಲವಣೆಗೊಂಡಿದ್ದವು. ಎಣಿಕೆಯಲ್ಲಿ 759 ಮತಗಳು ಸಿಕ್ಕಿದ್ದು ಗೊಂದಲಕ್ಕೆ ಕಾರಣವಾಯಿತು.

ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ನಾಲ್ಕು ಬಾರಿ ಮತಗಳ ಎಣಿಕೆ ಮಾಡಿದರೂ 2 ಮತಗಳು ಹೆಚ್ಚಿಗೆ ಬಂದಿದ್ದರಿಂದ ಚುನಾವಣಾ ಅಧಿಕಾರಿಗಳು ಅಲ್ಲಿನ ಮತಗಳ ಸಂಖ್ಯೆಯನ್ನು 759 ಎಂದು ದಾಖಲಿಸಿದರು.

ಹೀಗಾಗಿ ಈಗ ಒಟ್ಟು ಚಲಾಯಿತ ಮತಗಳ ಸಂಖ್ಯೆ 15,577ರ ಬದಲು 15,579 ಆಗಿದೆ.

ಹಿಂದಿನ ಲೇಖನಕರ್ನಾಟಕ ಲೋಕಾಯುಕ್ತರಾಗಿ ನ್ಯಾ. ಭೀಮನಗೌಡ ಸಂಗನಗೌಡ ಪಾಟೀಲ್‌ ಪ್ರಮಾಣ ವಚನ ಸ್ವೀಕಾರ
ಮುಂದಿನ ಲೇಖನಸಿದ್ದರಾಮಯ್ಯ, ಹೆಚ್.ಸಿ.ಮಹದೇವಪ್ಪ ಅವರ ಪಂಥಾಹ್ವಾನ ಸ್ವೀಕಾರ: ಸಂಸದ ಪ್ರತಾಪ ಸಿಂಹ