ಮನೆ ಜ್ಯೋತಿಷ್ಯ ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ

0

ನಿಮಗಿಂದು ಶುಭ ದಿನವೇ ಅಥವಾ ಅಶುಭ ದಿನವೇ ಎಂದು ನಿಮ್ಮ ರಾಶಿ ಭವಿಷ್ಯವನ್ನು ನೋಡಿ ತಿಳಿದುಕೊಳ್ಳಿ.

ಮೇಷ ರಾಶಿ

ಸಹೋದರಿಯರಿಂದ ಸಹಾಯ ಇದೆ. ಸ್ಥಳ ಬದಲಾವಣೆ ಯೋಗ ಇದೆ. ವಾಹನದಿಂದ ಲಾಭ ಇದೆ. ವಾಹನ ವ್ಯಾಪಾರಿಗಳಿಗೆ ಶುಭದಿನ. ನಿಮ್ಮ ರಾಶಿಯ ಅಧಿಪತಿ ಕುಜ ಶತ್ರುವಾದ ರಾಹುವಿನ ಜೊತೆ ಇರುವುದರಿಂದ ಮುಖ್ಯವಾದ ನಿರ್ಧಾರಗಳನ್ನು ಮಾಡುವಾಗ ಎಚ್ಚರ ವಹಿಸಿ. ರಿಯಲ್ ಎಸ್ಟೇಟ್ ವ್ಯವಹಾರಿಗಳಿಗೆ ನಷ್ಟವಿದೆ.

ವೃಷಭ ರಾಶಿ

ಭೂಮಿಯ ಮೇಲೆ ಅಥವಾ ಷೇರುಗಳ ಮೇಲೆ ಹಾಕಿದ ಹಣಕ್ಕೆ ಈ ದಿನ ಯಾವುದೇ ಶುಭಸುದ್ದಿ ಇಲ್ಲ. ಅದನ್ನು ಹಾಗೆಯೇ ಬಿಡಿ. ಈ ದಿನದ ಖರ್ಚುವೆಚ್ಚಗಳು ಏರುಪೇರಾಗುತ್ತದೆ. ಗಮನ ಇರಲಿ. ಬಾಕಿಯಾಗಿದ್ದ ಹಣ ಈ ದಿನ ಬರುವ ಸಾಧ್ಯತೆ ಇದೆ.

ಮಿಥುನ ರಾಶಿ

ನೀವು ನಿರೀಕ್ಷಿಸುತ್ತಿರುವ ಶುಭ ಸುದ್ದಿಯೊಂದು ಈ ದಿನ ನಿಮ್ಮ ಕಿವಿಗೆ ಬೀಳಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಈ ದಿನ ಲಾಭವನ್ನು ನಿರೀಕ್ಷಿಸಬಹುದು. ಯಾವುದೋ ಗೊತ್ತಿಲ್ಲದ ಮೂಲದಿಂದ ಧನಲಾಭ ಆಗಲಿದೆ. ವಿದ್ಯಾರ್ಥಿಗಳಿಗೆ ಈ ದಿನ ಹಿನ್ನಡೆ ಇದೆ.

ಕರ್ಕಾಟಕ ರಾಶಿ

ಕಚೇರಿಯಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ಮನಸ್ಸಿಗೂ ಉಲ್ಲಾಸ ಇರುತ್ತದೆ. ಈ ದಿನ ಸಂಗಾತಿಯಿಂದ ಧನನಷ್ಟ. ಈ ದಿನ ಸುಖಭೊಜನ ಪ್ರಾಪ್ತಿ ಇದೆ. ಅಲಂಕಾರ ಸಾಮಗ್ರಿಗಳ ವ್ಯಾಪಾರಿಗಳಿಗೆ ಹೇಳಿಕೊಳ್ಳುವಂತಹ ಲಾಭ ಇಲ್ಲ.

ಸಿಂಹ ರಾಶಿ

ಈ ದಿನ ಸಮ್ಮಿಶ್ರ ದಿನ. ಲಾಭದಾಯಕವಾಗಿದ್ದರೂ ಖರ್ಚುಗಳು ಸಹ ಇವೆ. ಸರ್ಕಾರಿ ನೌಕರರಿಗೆ ಹೊಸ ಕಾಯ್ದೆ ಕಾನೂನುಗಳಿಂದ ಮನಸ್ಸಿಗೆ ಕಿರಿಕಿರಿ ಎನಿಸುತ್ತದೆ. ಧೈರ್ಯದಿಂದ ಮುನ್ನುಗ್ಗಿ ಕಾರ್ಯ ಸಾಧಿಸಬೇಕು. ಯಾವುದೋ ಒಂದು ಮರೆತುಹೋದ ವ್ಯವಹಾರ ಕುದುರಿ ಧನಲಾಭ ಒದಗಿಬರುತ್ತದೆ.

ಕನ್ಯಾ ರಾಶಿ

ಸಂಗಾತಿಯಿಂದ ಲಾಭ ಇದೆ. ಅವಿವಾಹಿತರು ಈ ದಿನ ಪ್ರಪೋಸ್ ಮಾಡಲು ಶುಭದಿನ. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಯಾರೊಂದಿಗೂ ವಾದ ಮಾಡಲು ಹೋಗಬೇಡಿ. ನಿಮ್ಮ ನೇರ ಮಾತು ನಿಮ್ಮನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತದೆ.

ತುಲಾ ರಾಶಿ

ತಾಯಿಯೊಂದಿಗೆ ಮನಸ್ತಾಪ ಇದೆ. ತಾಯಿಯ ಮನಸ್ಸು ನೋಯಿಸಲು ಹೋಗಬೇಡಿ. ಮನಸ್ಸಿನಲ್ಲಿ ಯಾವುದೋ ಅರಿಯದ ಭೀತಿ ಇರುತ್ತದೆ. ಭಯ ಬೇಡ. ನಿಮ್ಮ ರಾಶಿಯ ಅಧಿಪತಿ ಶುಕ್ರ ಒಂಬತ್ತನೇ ಮನೆಯಲ್ಲಿ ಇದ್ದು ನಿಮ್ಮ ರಕ್ಷಣೆ ಮಾಡುತ್ತಾನೆ.

ವೃಶ್ಚಿಕ ರಾಶಿ

ಆಕಸ್ಮಿಕ ಧನಲಾಭ ಇದೆ. ನಿಮಗೆ ಪ್ರಿಯವಾದ ವಾರ್ತೆಯೊಂದು ನಿಮ್ಮ ಕಿವಿಗೆ ಬೀಳಲಿದೆ. ನಿಮ್ಮ ಮಕ್ಕಳ ಪ್ರಗತಿಯಿಂದ ಸಂತೋಷ ಇದೆ. ಸರ್ಕಾರಿ ಕೆಲಸಗಳಲ್ಲಿ ಲಾಭ ಇದೆ. ಈ ದಿನ ಯಾವುದಾದರೂ ಸರ್ಕಾರದ ಕೆಲಸಗಳು ಬಾಕಿಯಿದ್ದರೆ ನೆರವೇರುತ್ತದೆ.

ಧನಸ್ಸು ರಾಶಿ

ಮನೆಯಲ್ಲಿ ವಿನಾಕಾರಣ ಕಲಹದವಾತಾವರಣ. ನೀವು ಮೌನವಹಿಸಿದಷ್ಟೂ ನಿಮ್ಮ ಮೇಲೆ ಆಪಾದನೆ ಇಲ್ಲ. ಯಾರೊಂದಿಗೂ ಹೆಚ್ಚು ಚರ್ಚೆ ಮಾಡಬೇಡಿ. ಸ್ನೇಹಿತರೊಡನೆ ಕಿರಿಕಿರಿಯಾಗುವ ಸಂಭವ ಇದೆ. ಹಣಕಾಸಿನ ಸ್ಥಿತಿ ಈ ದಿನ ಸುಗಮ. ಸಂಜೆಯ ವೇಳೆಗೆ ಪ್ರತಿಕೂಲ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿ ಪರಿವರ್ತನೆ ಆಗುತ್ತದೆ.

ಮಕರ ರಾಶಿ

ಹಣಕಾಸಿನ ಸ್ಥಿತಿ ಉತ್ತಮವಿಲ್ಲ. ಯಾವುದೋ ಹಣ ಬರುವ ನಿರೀಕ್ಷೆ ಅಂತೂ ಇದೆ. ಸಹೋದರರಿಂದ ಸಹಾಯ ನಿರೀಕ್ಷೆ ಮಾಡಬಹುದು. ದಿಢೀರ್ ಖರ್ಚು ಎದುರಾಗುತ್ತದೆ. ಮಕ್ಕಳ ಹಠದಿಂದ ಕೊಂಚ ಅಸಮಾಧಾನ ಆಗುತ್ತದೆ. ಮಕ್ಕಳಿಂದ ಖರ್ಚೂ ಇದೆ. ಒಟ್ಟಾರೆಯಾಗಿ ಖರ್ಚು ಹೆಚ್ಚು ಇದೆ ಗಮನವಹಿಸಿ.

ಕುಂಭ ರಾಶಿ

ಮನೆಯಲ್ಲಿ ಸಂತಸದ ವಾತಾವರಣ ಇದೆ. ಹಣಕಾಸು ಸ್ಥಿತಿ ಉತ್ತಮವಾಗಿದೆ. ನೌಕರಿಯಲ್ಲಿ ಪ್ರಮೋಷನ್ ಬಗ್ಗೆ ಸಿಹಿಸುದ್ದಿ ಕಿವಿಗೆ ಬೀಳಬಹುದು. ಕುಂಭರಾಶಿ ಮಹಿಳೆಯರಿಗೆ ಸೀರೆ ಒಡವೆ ಈ ದಿನ ಖರೀದಿಮಾಡುವ ಯೋಗ ಇದೆ. ಆಭರಣ ವ್ಯಾಪಾರಿಗಳಿಗೂ ಈ ದಿನ ಲಾಭ ಇದೆ. ಶತ್ರುಗಳ ಉಪಟಳ ಕಡಿಮೆ ಆಗುತ್ತದೆ.

ಮೀನ ರಾಶಿ

ದೇಹಕ್ಕೆ ಸ್ವಲ್ಪ ಇರಿಸುಮುರಿಸು ಅನಾರೋಗ್ಯ ಲಕ್ಷಣ ಕಾಣಿಸಬಹುದು (ಅನ್ ಈಸಿನೆಸ್). ಮಾತಿನಿಂದ ತೊಂದರೆ ಇದೆ. ಬಂಧು ಸ್ನೇಹಿತರೊಂಡನೆ ಮಾತನಾಡುವಾಗ ಎಚ್ಚರಿಕೆ ಇರಲಿ. ನಿಮ್ಮವರೇ ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಯಾವುದಾದರೂ ಬಾಕಿಯಾಗಿದ್ದ ಹಣ ಈದಿನ ನಿಮಗೆ ಸಿಗಬಹುದು.

ಹಿಂದಿನ ಲೇಖನಹಿರಿಯ ಚಿಂತಕ ಜಿ.ರಾಜಶೇಖರ್‌ ನಿಧನ
ಮುಂದಿನ ಲೇಖನಪ್ರತಿ ಬಡವನ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾನೂನು ರೂಪಿಸಲು ತೀರ್ಮಾನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ