ಮನೆ ರಾಜ್ಯ ಬೆಂಗಳೂರು: ಹೆಡ್‌ ಕಾನ್‌ ಸ್ಟೇಬಲ್‌ ಅನುಮಾನಾಸ್ಪದ ಸಾವು

ಬೆಂಗಳೂರು: ಹೆಡ್‌ ಕಾನ್‌ ಸ್ಟೇಬಲ್‌ ಅನುಮಾನಾಸ್ಪದ ಸಾವು

0

ಬೆಂಗಳೂರು: ಹೆಡ್‌ ಕಾನ್‌ ಸ್ಟೇಬಲ್‌ ವೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಚಂದ್ರಾಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನ ಮೂಲದ ನವೀನ್‌ ಕುಮಾರ್‌(35) ಮೃತ ಹೆಡ್‌ಕಾನ್‌ ಸ್ಟೇಬಲ್‌.

2009ನೇ ಬ್ಯಾಚ್‌ ನ ನವೀನ್‌ ಕುಮಾರ್‌ ನಗರದ ವಿವಿಧೆಡೆ ಹೆಡ್‌ ಕಾನ್‌ ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇತ್ತೀಚೆಗಷ್ಟೇ ಹೆಡ್‌ ಕಾನ್‌ ಸ್ಟೇಬಲ್‌ ಆಗಿ ಮುಂಬಡ್ತಿ ಪಡೆದುಕೊಂಡು, ವಿಜಯನಗರ ಸಂಚಾರ ಠಾಣೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದು, ಚಂದ್ರಾ ಲೇಔಟ್‌ ನ ಬಿಸಿಸಿ ಲೇಔಟ್‌ ನಲ್ಲಿ ವಾಸವಾಗಿದ್ದರು.

ಈ ಮಧ್ಯೆ ನವೀನ್‌ ಕುಮಾರ್‌ ಗೆ ಇದೇ ಆ.23, 24ರಂದು ಮದುವೆ ಕೂಡ ನಿಶ್ಚಯವಾಗಿತ್ತು. ಶುಕ್ರವಾರ ರಾತ್ರಿ ಕರ್ತವ್ಯ ಮುಗಿಸಿ ಕೊಂಡು ಮನೆಗೆ ತೆರಳಿದ ನವೀನ್‌ ಕುಮಾರ್‌ ಶನಿವಾರ ಮುಂಜಾನೆ ಎಚ್ಚರಗೊಂಡಿಲ್ಲ. ಸಹೋದರ ಪದೇ ಪದೆ ಕರೆ ಮಾಡಿದರೂ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅನುಮಾನಗೊಂಡು ಆತ ಶನಿವಾರ ಬೆಳಗ್ಗೆ 8 ಗಂಟೆಗೆ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಬಳಿಕ ಸ್ಥಳೀಯ ಪೊಲೀಸರ ಸಹಾಯ ಪಡೆದು ಒಳ ಹೋಗಿ ನೋಡಿದಾಗ ಹಾಸಿಗೆ ಮೇಲೆ ಮಲಗಿದಲ್ಲೇ ಮೃತಪಟ್ಟಿದ್ದು, ಅನುಮಾನಕ್ಕೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ಕಳುಹಿಸಿದ್ದು, ವರದಿ ಬರಬರಬೇಕಿದೆ. ಕೌಟುಂಬಿಕ ವಿಚಾರಗಳಿಗೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಅಂತಿಮವಾಗಿ ಮರಣೋತ್ತರ ವರದಿ ಬಂದ ಬಳಿಕ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ. ಚಂದ್ರಾಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನRITES: 18 ಮ್ಯಾನೇಜರ್, ಇಂಜಿನಿಯರ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ಮುಂದಿನ ಲೇಖನಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಗೆ ಚಾಕು ಇರಿದು ಹತ್ಯೆ