ಮನೆ ಕಾನೂನು ಬೆಂಗಳೂರು: ಭಿಕ್ಷಾಟನೆಯಲ್ಲಿ ತೊಡಗಿದ್ದ 47 ಅಪ್ರಾಪ್ತ ಮಕ್ಕಳ ರಕ್ಷಣೆ

ಬೆಂಗಳೂರು: ಭಿಕ್ಷಾಟನೆಯಲ್ಲಿ ತೊಡಗಿದ್ದ 47 ಅಪ್ರಾಪ್ತ ಮಕ್ಕಳ ರಕ್ಷಣೆ

0

ಬೆಂಗಳೂರು: ನಗರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 47 ಅಪ್ರಾಪ್ತ ಮಕ್ಕಳನ್ನು ಸಿಸಿಬಿ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

Join Our Whatsapp Group

ರಂಜಾನ್ ಹಿನ್ನೆಲೆಯಲ್ಲಿ ಅಪ್ರಾಪ್ತ ಮಕ್ಕಳು ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಮಸೀದಿಯ ಬಳಿ ಭಿಕ್ಷಾಟನೆಯಲ್ಲಿ ತೊಡಗಿದ್ದರು. ಈ ವೇಳೆ ಸಿಸಿಬಿ ಪೊಲೀಸರು ಮತ್ತು ಮಹಿಳಾ ಮಕ್ಕಳ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ರಕ್ಷಣೆ ಮಾಡಿದ್ದಾರೆ.

ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು 36 ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ಪೊಲೀಸರು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ನೀಡಿದ್ದಾರೆ.

1 ತಿಂಗಳಿಂದ 12 ತಿಂಗಳು ವಯಸ್ಸಿನ 4 ಗಂಡು ಹಾಗೂ 2 ಹೆಣ್ಣು ಸೇರಿದಂತೆ 6 ಮಕ್ಕಳು, 1-3 ವರ್ಷದ ಒಳಗಡೆ ಇರುವ 6 ಗಂಡು ಮತ್ತು 6 ಹೆಣ್ಣು ಸೇರಿದಂತೆ 12 ಮಕ್ಕಳ‌, 3-6 ವರ್ಷ ವಯಸ್ಸಿನ 4 ಹೆಣ್ಣು ಮತ್ತು 2 ಗಂಡು ಸೇರಿದಂತೆ 6 ಮಕ್ಕಳು ಮತ್ತು 6 ವರ್ಷ ಮೇಲ್ಪಟ್ಟ 5 ಹೆಣ್ಣು 18 ಗಂಡು ಸೇರಿದಂತೆ 23 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

ಹಿಂದಿನ ಲೇಖನಬೀದರ್ ಡಿಸಿಸಿ ಬ್ಯಾಂಕ್ ಮೇಲೆ ಐಟಿ ದಾಳಿ
ಮುಂದಿನ ಲೇಖನಲೋಕಸಭೆ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ.ಎಸ್ ಈಶ್ವರಪ್ಪ