ಬೀದರ್: ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿರುವ ಬಸವತೀರ್ಥ ವಿದ್ಯಾ ಪೀಠದ ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ವಾಂತಿ-ಭೇದಿಯಿಂದ ಬಳಲಿದ್ದಾರೆ.
ಕೂಡಲೆ ಮಕ್ಕಳನ್ನು ಹುಮ್ನಾಬಾದ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು (ನ.13) ಬೆಳಗ್ಗೆ ಮಕ್ಕಳು ಉಪಹಾರಕ್ಕೆ ಚಿತ್ರಾನ್ನ ಸೇವಿಸಿದ್ದಾರೆ. ಬಳಿಕ, ವಿದ್ಯಾರ್ಥಿಗಳು ವಾಂತಿ-ಭೇದಿಯಿಂದ ನರಳಾಡುತ್ತಿದ್ದಂತೆ, ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು, ರಾತ್ರಿ ಉಳಿದ ಅನ್ನಕ್ಕೆ ಬೆಳಗ್ಗೆ ಒಗ್ಗರಣೆ ಹಾಕಿ, ಮಕ್ಕಳಿಗೆ ತಿನ್ನಲು ನೀಡಿದ್ದಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಗೆ ಎಂಎಲ್ ಸಿ ಭೀಮರಾವ್ ಪಾಟೀಲ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.