ಮನೆ ರಾಜಕೀಯ ಗುಂಡು ಹಾರಿಸಿ ಮಕ್ಕಳನ್ನು ಹೆದರಿಸಿದ ಸಚಿವರ ಮಗನನ್ನು ಥಳಿಸಿದ ಗ್ರಾಮಸ್ಥರು

ಗುಂಡು ಹಾರಿಸಿ ಮಕ್ಕಳನ್ನು ಹೆದರಿಸಿದ ಸಚಿವರ ಮಗನನ್ನು ಥಳಿಸಿದ ಗ್ರಾಮಸ್ಥರು

0

ಪಾಟ್ನಾ: ತೋಟದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಓಡಿಸಲು ಗುಂಡು ಹಾರಿಸಿದ ಆರೋಪ ಕೇಳಿಬಂದ ಬೆನ್ನಲ್ಲೆ ಬಿಹಾರದ ಸಚಿವರ ಮಗನಿಗೆ ಗ್ರಾಮಸ್ಥರು ಥಳಿಸಿರುವ ವಿಡಿಯೋ ಗ ವೈರಲ್ ಆಗಿದೆ.

ಸದರಿ ವಿಡಿಯೋದಲ್ಲಿ ಗ್ರಾಮಸ್ಥರು ಸಚಿವರ ಮಗನಿಗೆ ಯದ್ವಾತದ್ವಾ ಥಳಿಸಿದ್ದಾರೆ. ಗುಂಡು ಹಾರಿಸಿದ್ದಾರೆ ಎನ್ನಲಾದ ಬಂದೂಕನ್ನು ಸಹ ಸಚಿವರ ಮಗನಿಂದ ಕಸಿದುಕೊಂಡಿರುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ. ಬಿಜೆಪಿ ನಾಯಕ ಹಾಗೂ ರಾಜ್ಯ ಪ್ರವಾಸೋದ್ಯಮ ಸಚಿವರಾಗಿರುವ ನಾರಾಯಣ್​ ಶಾ ಅವರ ಮಗ ಬಬ್ಲು ಕುಮಾರ್ ಗ್ರಾಮಸ್ಥರಿಂದ ಹಲ್ಲೆಗೊಳಗಾದ ವ್ಯಕ್ತಿ. ಇವರು ತೋಟದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಎದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಮಕ್ಕಳು ಗಾಬರಿಯಿಂದ ಓಡಿ ಹೋಗಿದ್ದಾರೆ. ಪರಿಣಾಮ ಕಾಲ್ತುಳಿತದಿಂದಾಗಿ ಒಂದು ಮಗು ಸೇರಿದಂತೆ 6 ಮಕ್ಕಳು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಸರ್ಕಾರಿ ವಾಹನದಲ್ಲಿ ಬಂದ ಸಚಿವರ ಮಗನನ್ನು ಗ್ರಾಮಸ್ಥರು ಅಟ್ಟಿಸಿಕೊಂಡು ಹೋಗಿದ್ದು, ಸಚಿವರ ಹೆಸರಿನ ನಾಮಕಫಲಕವನ್ನೂ ಸಹ ಗ್ರಾಮಸ್ಥರು ಒಡೆದು ಹಾಕಿದ್ದಾರೆ. ಇದನ್ನು ಕಂಡ ಸಚಿವರ ಮಗ ವಾಹನವನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಶಾ, ತಮ್ಮ ಮಗನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆರೋಪಗಳು ಆಧಾರ ರಹಿತವಾಗಿದ್ದು, ನನ್ನ ಮಾನಹಾನಿ ಮಾಡುವ ರಾಜಕೀಯ ಷಡ್ಯಂತ್ರ ಇದಾಗಿದೆ ಎಂದಿದ್ದಾರೆ.ಹಲ್ಲೆಗೊಳಗಾದ ಸಚಿವರ ಮಗ ಅವರ ಸಹಚರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ಹಾರಿಸಿದ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ಬಳಿಕ ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ವರ್ಮಾ ತಿಳಿಸಿದ್ದಾರೆ.

ಹಿಂದಿನ ಲೇಖನಕ್ರೆಡಿಟ್ ಕಾರ್ಡ್‌ ಕಾಲ್‌ಸೆಂಟರ್ ಹೆಸರಿನಲ್ಲಿ 85 ಜನರಿಗೆ ವಂಚನೆ
ಮುಂದಿನ ಲೇಖನಎರಡು ಬೈಕ್‌ ಗಳ ನಡುವೆ ಅಪಘಾತ: ಓರ್ವ ಸಾವು: ಇನ್ನೋರ್ವನಿಗೆ ಗಂಭೀರ ಗಾಯ