ಮನೆ ಸುದ್ದಿ ಜಾಲ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

0

ನವದೆಹಲಿ: ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಗಡಿ ಭದ್ರತಾ ಪಡೆ ಸೋಮವಾರ ಮಾಹಿತಿ ನೀಡಿದೆ.

ಫಿರೋಜ್‌ಪುರ ಸೆಕ್ಟರ್‌ನಲ್ಲಿ ಯೋಧರಿಗೆ ಅನುಮಾನಾಸ್ಪದವಾಗಿ ಏನೋ ಹಾರಾಟ ನಡೆಸುತ್ತಿದ್ದ ಶಬ್ಧ ಕೇಳಿಸಿದ್ದು, ಈ ಸಂದರ್ಭದಲ್ಲಿ ಪಾಕಿಸ್ತಾನ ಕಡೆಯಿಂದ ಭಾರತದ ಕಡೆಗೆ ಬರುತ್ತಿದ್ದ ಡ್ರೋನ್ ಅನ್ನು ಕಂಡಿದ್ದು, ಕೂಡಲೇ ಎಚ್ಚೆತ್ತ ಪಡೆ ಡ್ರೋನ್ ಅನ್ನು ಹೊಡೆದುರುಳಿಸಿದೆ.

ಡ್ರೋನ್‌ಗೆ ಸಣ್ಣ ಚೀಲವನ್ನು (ಹಸಿರು ಬಣ್ಣ) ಅಲವಡಿಸಲಾಗಿತ್ತು. ಅದರಲ್ಲಿ 4 ಹಳದಿ ಮತ್ತು ಒಂದು ಕಪ್ಪು ಬಣ್ಣದ ಚಿಕ್ಕ ಪ್ಯಾಕೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದು ನಿಷಿದ್ಧ ಸರಕು ಎಂದು ಶಂಕಿಸಲಾಗಿದೆ ಎಂದು ಬಿಎಸ್‌ಎಫ್ ಸಿಬ್ಬಂದಿ ತಿಳಿಸಿದ್ದಾರೆ.

ಪಂಜಾಬ್ ಮತ್ತು ಜಮ್ಮು ಸೆಕ್ಟರ್‌ಗಳಿಗೆ ನೆರೆ ದೇಶವು ಈ ರೀತಿಯ ನಿಷಿದ್ಧ ಸರಕನ್ನು ಕಳುಹಿಸುತ್ತಿರುವುದು ಇದೇ ಮೊದಲೇನಲ್ಲ. ಭಾರತದ ಗಡಿ ಕಾವಲು ಪಡೆ ರಕ್ಷಣಾ ಸಚಿವಾಲಯದ ಸಂಶೋಧನಾ ವಿಭಾಗ ಡಿಆರ್‌ಡಿಒ ಸಹಯೋಗದೊಂದಿಗೆ ಆ್ಯಂಟಿ ಡ್ರೋನ್ ತಂತ್ರಜ್ಞಾನ ಹೊಂದಲು ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ ಪಾಕಿಸ್ತಾನದ ಕಡೆಯಿಂದ ಕ್ವಾಡ್‌ಕಾಪ್ಟರ್ ಭಾರತದ ಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಈ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.

ಹಿಂದಿನ ಲೇಖನಶಿಕ್ಷಕನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ 2ನೇ ಕ್ಲಾಸ್ ಬಾಲಕ
ಮುಂದಿನ ಲೇಖನಶ್ರೀನಗರ ಗ್ರೇನೆಡ್ ದಾಳಿ: ಮತ್ತೋರ್ವ ಯುವತಿ ಸಾವು