ಮನೆ ಸುದ್ದಿ ಜಾಲ ಮುಸ್ಲಿಮರ ವಾಹನ ಬಾಡಿಗೆಗೆ ಪಡೆಯದಂತೆ ಕರೆ

ಮುಸ್ಲಿಮರ ವಾಹನ ಬಾಡಿಗೆಗೆ ಪಡೆಯದಂತೆ ಕರೆ

0

ಹಿಜಾಬ್ , ಹಲಾಲ್ ವರ್ಸಸ್ ಜಟ್ಕಾ ಕಟ್ , ದೇವಸ್ಥಾನ, ಜಾತ್ರಗಳಲ್ಲಿ  ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೀಗೆ ಹಲವು ವಿವಾದಗಳು ಮುಂದುವರೆದು ಇದೀಗ ಟ್ರಾವೆಲ್ಸ್ ಕ್ಷೇತ್ರಗಳಲ್ಲೂ ಮುಸ್ಲಿಮರನ್ನು ಬ್ಯಾನ್ ಮಾಡಬೇಕು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದ್ದು, ಆದರೆ ಟ್ರಾವೆಲ್ಸ್ ಕ್ಷೇತ್ರ ಒಗ್ಗಟ್ಟಾಗಿ ನಿಂತಿದೆ.

ಆರಂಭದಲ್ಲಿ ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದ ಕಾಡ್ಗಿಚ್ಚಿನಂತೆ ದೇಶವ್ಯಾಪಿ ಚರ್ಚೆಗೆ ಗ್ರಾಸವಾಯ್ತು. ಅದಾಗಿ ಹಿಜಾಬ್ ವಿಚಾರ ತಣ್ಣಗಾಗುತ್ತಿದ್ದಂತೆ ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಆರ್ಥಿಕ ನಿರ್ಬಂಧ ಹೇರುವ ಅಭಿಯಾನ ಶುರುವಾಯಿತು. ಅಲ್ಲಿಂದ ಒಂದರ ಹಿಂದೆ ಮತ್ತೊಂದು ವಿವಾದಗಳು ಅಭಿಯಾನದ ರೂಪದಲ್ಲಿ ಹುಟ್ಟಿಕೊಳ್ಳಲಾರಂಭಿಸಿತು. ಅದರದ್ದೇ ಭಾಗವಾಗಿ ಈಗ ಮುಸ್ಲಿಮರು ಚಾಲಕರು ಅಥವಾ ಮಾಲೀಕರು ಆಗಿರುವ ವಾಹನಗಳನ್ನು ಬಾಡಿಗೆಗೆ ಪಡೆಯದಂತೆ ಹಿಂದೂ ಸಂಘಟನೆಗಳು ಹಿಂದೂಗಳಿಗೆ ಕರೆ ಕೊಟ್ಟಿದೆ.

ಕರಾವಳಿ ಭಾಗದ ಭಾರತ ರಕ್ಷಣಾ ವೇದಿಕೆ ಎಂಬ ಹಿಂದೂ ಸಂಘಟನೆಯ ಮುಖಂಡ ಪ್ರಶಾಂತ್ ಬಂಗೇರಾ ಎಂಬಾತ ಹಿಂದೂಗಳು, ಹಿಂದೂಗಳ ವಾಹನದಲ್ಲೇ ದೇವಾಲಯಕ್ಕೆ ಹೋಗಲಿ, ಮುಸ್ಲಿಮರ ವಾಹನ ಬಾಡಿಗೆಗೆ ಬಳಕೆ ಬೇಡ ಎಂದು ಹೊಸದೊಂದು‌ ವಿವಾದಕ್ಕೆ ನಾಂದಿ ಹಾಡಿದ್ದಾನೆ.‌ ಈ ಬಗ್ಗೆ ಒಂದು ವೀಡಿಯೋ ಮಾಡಿ ಹರಿ ಬಿಟ್ಟಿದ್ದು, ಈಗಾಗಲೇ ಹಿಂದೂ ಸಮಾಜ ಒಂದಾಗಿ ಸಾಕಷ್ಟು ಅಭಿಯಾನ ಮಾಡಿ ಯಶಸ್ವಿಯಾಗಿದೆ.

ಹಿಂದೂ ಸಂಘಟನೆಗಳು ಟ್ರಾವೆಲ್ಸ್ ಕ್ಷೇತ್ರದಿಂದ ಮುಸ್ಲಿಮರ ಬಹಿಷ್ಕಾರಕ್ಕೆ ಕೊಟ್ಟ ಕರೆಗೆ ಇಡೀ ಟ್ರಾವೆಲ್ಸ್ ಕ್ಷೇತ್ರವು ಒಕ್ಕೊರಲಿನಿಂದ ಖಂಡಿಸಿದೆ. ರಾಜ್ಯ ಟ್ರಾವೆಲ್ಸ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, ಓಲಾ ಊಬರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷಾ ಸೇರಿದಂತೆ ಎಲ್ಲಾ ಸಂಘಟನೆಗಳ ಮುಖಂಡರು ಹಿಂದೂ ಸಂಘನಟೆಗಳ ಅಭಿಯಾನಕ್ಕೆ ಸೆಡ್ಡು ಹೊಡೆದಿದ್ದಾರೆ‌. ಅಲ್ಲದೆ ನಮಗೆ ವಾಹನವೇ ಮಸೀದಿ, ಮಂದಿರ, ಚರ್ಚ್ ಎಂದು ಹೇಳಿದೆ.

ಹಿಂದಿನ ಲೇಖನಏ.12ರಿಂದ ಬಿಜೆಪಿ ನಾಯಕರಿಂದ ರಾಜ್ಯ ಪ್ರವಾಸ
ಮುಂದಿನ ಲೇಖನಬೂಸ್ಟರ್ ಡೋಸ್ ಲಸಿಕೆ ಬೆಲೆ ಬಗ್ಗೆ ತಿಳಿದಿದೆಯೇ?