ಮನೆ ಕಾನೂನು ಚಾಮರಾಜನಗರ: ಪತ್ನಿ ಹತ್ಯೆಗೈದಿದ್ದ ಆರೋಪಿಗೆ 5 ವರ್ಷ ಜೈಲು ಶಿಕ್ಷೆ, 1 ಲಕ್ಷ ದಂಡ

ಚಾಮರಾಜನಗರ: ಪತ್ನಿ ಹತ್ಯೆಗೈದಿದ್ದ ಆರೋಪಿಗೆ 5 ವರ್ಷ ಜೈಲು ಶಿಕ್ಷೆ, 1 ಲಕ್ಷ ದಂಡ

0

ಚಾಮರಾಜನಗರ: ಪತ್ನಿ ಮೇಲೆ ಹಲ್ಲೆ ಮಾಡಿ ಹತ್ಯೆಗೈದಿದ್ದ ಆರೋಪಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ  ಚಾಮರಾಜನಗರ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ  ಆದೇಶಿಸಿದೆ.

ಆರೋಪಿ ಮಹೇಶ್  ಎಂಬಾತನೇ ಜೈಲುಶಿಕ್ಷೆಗೆ ಒಳಗಾಗಿರುವ ಆರೋಪಿ.

ಚಾಮರಾಜನಗರ ಜಿಲ್ಲೆ ಕಿಲಗೆರೆ ಗ್ರಾಮದ ಗುರುನಂಜಮ್ಮ ಎಂಬುವವರ ಮಗಳು ಪಾರ್ವತಮ್ಮ ಎಂಬುವವರನ್ನು ಗುಂಡ್ಲುಪೇಟೆ ತಾಲ್ಲೂಕು ಭರಟಹಳ್ಳಿ ಗ್ರಾಮದ ಮಹೇಶ ಎಂಬುವವರಿಗೆ ಮದುವೆಯಾಗಿದ್ದನು.  ಮಹೇಶ ವಿನಾ, ಕಾರಣ ತನ್ನ ಪತ್ನಿಯಾದ ಪಾರ್ವತಮ್ಮನೊಂದಿಗೆ ಜಗಳ ತೆಗೆದು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ 2018ರ ಅಕ್ಟೋಬರ್ 2 ರಂದು ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಆರೋಪಿ ಮಹೇಶನು ತನ್ನ ಪತ್ನಿ ಪಾರ್ವತಮ್ಮನ ಜೊತೆ ಜಗಳ ತೆಗೆದು ಕೈಗಳಿಂದ ಮತ್ತು ಮರದ ರಿಪೀಸ್ ಪಟ್ಟಿಯಿಂದ ಮೈ ಕೈಗೆ ಮತ್ತು ತಲೆಗೆ ಹೊಡೆದು  ಹಲ್ಲೆ ಮಾಡಿದ್ದನು. ಪಾರ್ವತಮ್ಮ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಅಕ್ಟೋಬರ್ 7 ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಬರಟಳ್ಳಿಯ ಮನೆಗೆ ಬಂದಿದ್ದರು, ಆಗಲೂ ಸಹ ಆರೋಪಿ ಮನೆಗೆ ಬಂದು ಇನ್ನೂ ಸತ್ತಿಲ್ಲವಾ ಎಂದು ಕೈಗಳಿಂದ ಹಲ್ಲೆ ಮಾಡಿದ್ದು, ಅಕ್ಟೋಬರ್ 08/9 ರಂದು ಬೆಳಗಿನ ಜಾವ 2 ಗಂಟೆ ಸಮಯದಲ್ಲಿ ಪಾರ್ವತಮ್ಮ ಮೃತಪಟ್ಟಿದ್ದಾರೆ.

ಈ ಕುರಿತು ಅವರ ತಾಯಿ ಚಾಮರಾಜನಗರ ಜಿಲ್ಲೆ ಕಿಲಗೆರೆ ಗ್ರಾಮದ ಗುರುನಂಜಮ್ಮ ಎಂಬುವವರು ತೆರಕಣಾಂಬಿ ಪೊಲೀಸ್‌ ಠಾಣೆಯಲ್ಲಿ  ದೂರು ದಾಖಲು ಮಾಡಿದ್ದರು. ತೆರಕಣಾಂಬಿ ಪೊಲೀಸರು ಆರೋಪಿ ವಿರುದ್ಧ ಭಾರತ ದಂಡ ಸಂಹಿತೆ ಕಲಂ. 498(ಎ), ಅನುಸಾರ ಶಿಕ್ಷಾರ್ಹ ಅಪರಾಧಕ್ಕಾಗಿ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಘನ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಚಾಮರಾಜನಗರ (ಪೀಠಾಸೀನ ಕೊಳ್ಳೆಗಾಲ), ಇಲ್ಲಿ ಆರೋಪಿಯ ವಿರುದ್ಧ ಅಧಿ ವಿಚಾರಣೆ ನಡೆದು ಆರೋಪ ಸಾಭೀತಾದ ಕಾರಣ ಸದರಿ ಆರೋಪಿಗೆ ನ್ಯಾಯಾಲಯವು  ಭಾರತ ದಂಡ ಸಂಹಿತೆ ಕಲಂ. 498(ಎ)ರ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ಹಾಗೂ ರೂ.50.000/- ದಂಡ ವಿಧಿಸಲಾಗಿದೆ, ದಂಡ ಪಾವತಿಸಲು ವಿಫಲರಾದರೆ ಮತ್ತೆ ಮೂರು ತಿಂಗಳ ಜೈಲು ಶಿಕ್ಷೆ, ಹಾಗೂ ಭಾರತ ದಂಡ ಸಂಹಿತೆ ಕಲಂ. 304(1)ಅಪರಾಧಕ್ಕಾಗಿ 5 ವರ್ಷ ಜೈಲು ಶಿಕ್ಷೆ ಹಾಗೂ ರೂ.1,00,000/- ದಂಡ  ವಿಧಿಸಿದೆ. ದಂಡ ಪಾವತಿಸಲು ವಿಫಲರಾದರೆ ಮತ್ತೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ವಿಧಿಸಿರುವ ದಂಡದ ಹಣದಲ್ಲಿ ಪಾರ್ವತಮ್ಮನವರ ಇಬ್ಬರು ಮಕ್ಕಳುಗಳಿಗೆ ತಲಾ ರೂ. 70,000/- ಹಣವನ್ನು ಪಾವತಿಸುವುದು ಹಾಗೂ ಉಳಿದ ರೂ.10,000/-ಹಣವನ್ನು ಸರ್ಕಾರಕ್ಕೆ ಪಾವತಿಸಲು ಆದೇಶಿಸಿದೆ.

ಹಿಂದಿನ ಲೇಖನಜ.05 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ: ಡಾ. ಕೆ.ವಿ ರಾಜೇಂದ್ರ
ಮುಂದಿನ ಲೇಖನನಕಲಿ ದಾಖಲೆ ಸೃಷ್ಠಿಸಿ ಮುಡಾ ನಿವೇಶನ ಅಡವಿಟ್ಟು 14 ಕೋಟಿ ರೂ. ಸಾಲ ಪಡೆದ ಭೂಗಳ್ಳರು: ದೂರು ದಾಖಲು