ಮನೆ ಸುದ್ದಿ ಜಾಲ ಒಂದೇ ತಿಂಗಳಲ್ಲಿ ಕೋಟಿ ಒಡತಿಯಾದ ಚಾಮುಂಡೇಶ್ವರಿ

ಒಂದೇ ತಿಂಗಳಲ್ಲಿ ಕೋಟಿ ಒಡತಿಯಾದ ಚಾಮುಂಡೇಶ್ವರಿ

0

ಮೈಸೂರು (Mysuru) : ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಒಂದೇ ತಿಂಗಳಲ್ಲಿ ಕೋಟಿ ಒಡತಿಯಾಗಿದ್ದಾಳೆ. ಆಷಾಡ ಮಾಸದಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ ದಾಖಲೆ ಆದಾಯ ಬಂದಿದೆ.

2,33,51,270 ರೂ. ಹುಂಡಿ ಕಾಣಿಕೆಯಲ್ಲಿ ಸಂದಾಯವಾಗಿದೆ. ಅಲ್ಲದೆ 270 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ, 1,36,69,270 ರೂ. ಪ್ರವೇಶದ ಟಿಕೆಟ್ ನಿಂದ ಸಂದಾಯವಾಗಿದೆ.

ಇದು ಇತಿಹಾಸದಲ್ಲೇ ಒಂದೇ ತಿಂಗಳಲ್ಲಿ ಸಂದಾಯವಾದ ಆದಾಯವಾಗಿದೆ. ಆ ಮೂಲಕ ಹಿಂದಿನ ಆಷಾಢ ಮಾಸದ ದಾಖಲೆಯನ್ನು ಈ ಬಾರಿಯ ಆಷಾಢ ಹಿಂದಿಕ್ಕಿದೆ.

ಹುಂಡಿ ಸೇರಿದ ರದ್ದಾದ ನೋಟುಗಳು:

ರದ್ದಾಗಿರುವ 500, 1000 ರೂ. ಮುಖ ಬೆಲೆಯ ನೋಟುಗಳು ಹುಂಡಿ ಸೇರಿದೆ. ಒಂದು ಲಕ್ಷಕ್ಕೂ ಅಧಿಕ ಬೆಲೆಯ ರದ್ದಾದ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿವೆ. ವಿದೇಶಿಯರಿಂದಲೂ ಹುಂಡಿಗೆ ಕಾಣಿಕೆ ಸಲ್ಲಿಕೆಯಾಗಿದೆ.

ಚಾಮುಂಡಿಬೆಟ್ಟದ ದೇವಾಲಯದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ದಾಖಲೆ ಪ್ರಮಾಣದಲ್ಲಿ ಆದಾಯ ಸಂದಾಯವಾಗಿರುವುದು ತಿಳಿದುಬಂದಿದೆ. 250 ಮಂದಿಯಿಂದ ದಿನವಿಡೀ ನಡೆದ ಹುಂಡಿ ಎಣಿಕೆ ನಡೆದಿದೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಸಮ್ಮುಖದಲ್ಲಿ ನಡೆದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. ಹುಂಡಿ ಕಾಣಿಕೆ ಹಣ ಚಾಮುಂಡಿಬೆಟ್ಟದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ಸಂದಾಯವಾಗಿದೆ.

ಹಿಂದಿನ ಲೇಖನಸಿ-ಸೆಕ್ಷನ್‌ ಡೆಲಿವರಿ ಬಳಿಕ ಮಾಡಬೇಕಾದ ಯೋಗಾಸನಗಳು
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ