ಮನೆ ದೇವರ ನಾಮ ಸೂರ್ಯ ದೇವನ ಪೂಜಿಸಿದರೆ ಕಷ್ಟಗಳು ದೂರ

ಸೂರ್ಯ ದೇವನ ಪೂಜಿಸಿದರೆ ಕಷ್ಟಗಳು ದೂರ

0

ಸೂರ್ಯದೇವ ಎಂದು ಕರೆಯಲ್ಪಡುವ ಸೂರ್ಯನು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನು. 9 ಗ್ರಹಗಳ ಅಧಿಪತಿ ಕೂಡ ಸೂರ್ಯದೇವನೇ ಆಗಿದ್ದಾನೆ. ಸೂರ್ಯದೇವನನ್ನು ಪೂಜಿಸಿದರೆ ಪ್ರತಿನಿತ್ಯದ ಕಷ್ಟವು ದೂರಾಗುತ್ತದೆ. ಸೂರ್ಯ ದೇವನನ್ನು ಪೂಜಿಸಲು ಇಲ್ಲಿವೆ ಕೆಲವು ಸ್ತೋತ್ರಗಳು.

ಸೂರ್ಯ ಮಂತ್ರ

ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ
ಆಯುರ್‌ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ

ಈ ಮಂತ್ರವು ಸೂರ್ಯದೇವನನ್ನು ಹೊಗಳುವ ಮಂತ್ರವಾಗಿದೆ. ಈ ಮಂತ್ರದಲ್ಲಿ ಸೂರ್ಯನನ್ನು ಬ್ರಹ್ಮಾಂಡದ ಅಧಿಪತಿಯೆಂದು ಹೊಗಳಲಾಗುತ್ತದೆ. ಉತ್ತಮ ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿಗಾಗಿ ಭಕ್ತರು ಸೂರ್ಯದೇವನನ್ನು ಪ್ರಾರ್ಥಿಸಲಾಗುತ್ತದೆ. ಮಾನವನ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಮಂತ್ರಕ್ಕಿದೆ ಎಂದು ನಂಬಲಾಗಿದೆ.

ಸೂರ್ಯ ಗಾಯತ್ರಿ ಮಂತ್ರ

ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡಾಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್

ಸೂರ್ಯನಿಗೆ ಸಂಬಂಧಿಸಿದ ಈ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸಬೇಕು. ಈ ಮಂತ್ರವನ್ನು ದಿನನಿತ್ಯ ಜಪಿಸುವುದರಿಂದ ಕಣ್ಣುಗಳ ಆರೋಗ್ಯ ವೃದ್ಧಿಸುವುದಲ್ಲದೇ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಬಗೆಹರಿಯುತ್ತದೆ. ಅಷ್ಟು ಮಾತ್ರವಲ್ಲ, ಈ ಸೂರ್ಯ ಗಾಯತ್ರಿ ಮಂತ್ರವನ್ನು ದಿನನಿತ್ಯ ಪಠಿಸಿದರೆ ಸೂರ್ಯನನ್ನು ಹೊರತುಪಡಿಸಿ ಇತರೆ ಗ್ರಹಗಳಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಹಿಂದಿನ ಲೇಖನಸರ್ಕಾರ ಆರ್‌ಎಸ್‌ಎಸ್‌ ಮಾರ್ಗದರ್ಶನದಲ್ಲಿ ನಡೆಯುತ್ತಿದೆ, ಬೊಮ್ಮಾಯಿ ನೆಪ ಮಾತ್ರ: ಸಿದ್ದರಾಮಯ್ಯ
ಮುಂದಿನ ಲೇಖನಮಂಕಿಪಾಕ್ಸ್:‌ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ಡಬ್ಲ್ಯುಎಚ್‌ಒ