ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಮೇಷ್ಟ್ರು : ನಿನ್ನೆ ಕ್ಲಾಸ್ ಮೇಟ್ ಗಳೆಲ್ಲ ಸರಿಯಾದ ಟೈಮ್ ಗೆ ಕ್ಲಾಸಿಗೆ ಬಂದಿದ್ದಾರೆ. ನೀನೊಬ್ಬ ಯಾಕೋ ಲೇಟು?

ಬಾಲು : ಗುಂಪಾಗಿ ಬರೋದು ಕುರಿಗಳು, ಸಿಂಹ ಯಾವಾಗಲೂ ಸಿಂಗಲ್ಲಾಗೆ ಬರೋದು ಸರ್.

***

ಅಜ್ಜಿ : ಯಾಕೆ ರಾಜಿ ನಿನ್ನ ಒಪ್ಪಿದ್ನಲ್ಲ ಹುಡುಗ ಅವನನ್ನ ಬೇಡ ಎಂದು ಬಿಟ್ಟೆಯಂತೆ?

ರಾಜಿ : ನಾಲ್ಕು ದಿನ ಅವನು ಓಡಾಡಿದ ಮೇಲೆ ತಿಳಿಯಿತು ಅವನು ಶತಮೂರ್ಖ ಅಂತ ಅದಕ್ಕೆ ಬೇಡ ಅಂದೆ.

ಅಜ್ಜಿ : ಈ ಕಾಲದವರೆ ಅದೃಷ್ಟವಂತರು ನಮ್ಮ ಕಾಲದಲ್ಲಿ ಮದುವೆಗೆ ಮುಂಚೆ ಗಂಡ ಆಗುವವನು ಪೆದ್ದನೋ, ಬುದ್ಧಿವಂತನೋ ಒಂದು ಗೊತ್ತಾಗುತ್ತಿರಲಿಲ್ಲ.

ರಾಜಿ : ಬರೀ ಸುಳ್ಳು ನಿನಗೆ ಗೊತ್ತಾಗಿರಬೇಕು.

ಅಜ್ಜಿ : ನಿಜವಾಗಿಯೂ ಇಲ್ಲ ರಾಜಿ.

ರಾಜಿ : ಏನಜ್ಜಿ ನೀನು ಹೇಳೋದು. ನಿನ್ನಂತಹವಳನ್ನು ಮದುವೆಯಾಗಲು ಒಪ್ಪಿದ ಅಂದಮೇಲೂ ತಾತನ್ನ ಬುದ್ದಿವಂತ ಅಂತ ಕರೆಯಕ್ಕಾಗುತ್ತಾ?

***

ಸುಮ : ನಾನೇನೇ ಆದರೂ ಗೊರಕೆ ಹೊಡೆಯುವವರನ್ನು ಮದುವೆ ಮಾಡಿಕೊಳ್ಳಲ್ಲ.

ಗೆಳತಿ : ಅದೇನು ಒಳ್ಳೆಯದೇ, ಆದರೆ…. (ರಾಗ ಎಳೆದಳು)

ಸುಮಾ : ಆದರೆ ಏನೇ ?

ಗೆಳತಿ : ಅದಕ್ಕೆ ಮದುವೆ ಮುಂಚೆ ಎಷ್ಟು ಜನರ ಜೊತೆ ಮಲಗಬೇಕಾಗುತ್ತದೆ ಏನೋ.

***

ಇಬ್ಬರು ಹುಡುಗರು ಕ್ಲಿನಿಕ್ ನಲ್ಲಿ ಕುಳಿತು ವೈದ್ಯರು ಮಾಡುವ ಕೆಲಸ ಗಮನಿಸುತ್ತಿದ್ದರು.

“ಅವರು ಸ್ಪೆಥಾಸ್ಕೋಪ್ ಮೈಮೇಲೆ ಇಟ್ಟಾಗ ಏನು ತಿಳಿಯುತ್ತೆ?” ಒಬ್ಬ ಕೇಳಿದ.

“ಮೈಯೊಳಗೆ ಇರೋ ಬ್ಯಾಕ್ಟೀರಿಯಾ ಗಳು ಪರಸ್ಪರ ಮಾತನಾಡುವುದು ಕೇಳಿಸುತ್ತೆ ಕಣೋ.”

***

ರಾಮು : ನಮ್ಮ ಗೋಪಿ ಹೆಂಡ್ತಿ ಸಕ್ಕತ್ ಕಿರಿಕ್ಕಂತೆ. ಅಡಿಗೆ, ತಿಂಡಿ, ಕಾಫಿ ಒಂದು ಸರಿಯಾಗಿ ಮಾಡಲ್ವಂತೆ.

ಶಿವ : ಹೌದಾ… ನಿನ್ ಹೆಂಡ್ತಿ ಹೇಗೆ ?

ರಾಮು : ನನ್ ಹೆಂಡ್ತಿದು ಆ ವಿಚಾರದಲ್ಲಿ ಕಿರಿಕ್ಕೇ ಇಲ್ಲಯ್ಯ. ಯಾಕಂದ್ರೆ ನಮ್ಮಲ್ಲಿ ತಿಂಡಿ, ಕಾಫಿ, ಮಾಡೋದು ನಾನೇ.