ಮನೆ ರಾಜ್ಯ ಪ್ರಧಾನಿಗೆ ಭದ್ರತೆ ಕೊಡಲು ಕಾಂಗ್ರೆಸ್ ವಿಫಲ; ರಾಜ್ಯ ತಲೆ ತಗ್ಗಿಸುವ ವಿಷಯ – ಅರಗ ಜ್ಞಾನೇಂದ್ರ

ಪ್ರಧಾನಿಗೆ ಭದ್ರತೆ ಕೊಡಲು ಕಾಂಗ್ರೆಸ್ ವಿಫಲ; ರಾಜ್ಯ ತಲೆ ತಗ್ಗಿಸುವ ವಿಷಯ – ಅರಗ ಜ್ಞಾನೇಂದ್ರ

0

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಾಗ ಜಿಲೆಟಿನ್ ಪತ್ತೆ ಆಗಿರೋದು ನಮ್ಮ ರಾಜ್ಯ ತಲೆತಗ್ಗಿಸೋ ವಿಷಯ ಅಂತ ಮಾಜಿ ಸಚಿವ ಅರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ. ಮೋದಿ ಕಾರ್ಯಕ್ರಮದಲ್ಲಿ ಜಿಲೆಟಿನ್ ಪತ್ತೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ಅವರು ಬೆಂಗಳೂರಿಗೆ ಬಂದಾಗ ಸರಿಯಾದ ಭದ್ರತೆ ಈ ಸರ್ಕಾರ ಕೊಟ್ಟಿಲ್ಲ. ಇದು ನಮ್ಮ ರಾಜ್ಯ ತಲೆ ತಗ್ಗಿಸುವಂತಹ ವಿಷಯವಾಗಿದೆ. ದೇಶದ ಪ್ರಧಾನಿಗೂ ರಕ್ಷಣೆ ಕೊಡದಂತದಹ ಸ್ಥಿತಿ ಈ ಸರ್ಕಾರಕ್ಕೆ ಎದುರಾಗಿದೆ ಅಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಿಬಿಎ ಚುನಾವಣೆ ಮುಂದೂಡಿಕೆಗೆ ಸರ್ಕಾರ ಮನವಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವದ ವಿರೋಧಿ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಮಾಡುವ ಧೈರ್ಯ ಇವರಿಗೆ ಇಲ್ಲ. ಪಂಚರಾಜ್ಯ ಚುನಾವಣೆ ಫಲಿತಾಂಶಕ್ಕೆ ಕಾಂಗ್ರೆಸ್ ದೃತಿಗೆಟ್ಟು ಹೋಗಿದೆ. ಕಾಂಗ್ರೆಸ್ ಜನರ ಆಕ್ರೋಶವನ್ನು ಎದುರಿಸುತ್ತಿದೆ. ಎಲ್ಲರಿಗೂ ಅರ್ಥ ಆಗುತ್ತೆ ಚುನಾವಣೆ ಮುಂದೂಡುವ ತಂತ್ರ ಎಂದಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಮಿತ ಬಳಕೆ ಹೇಳಿಕೆ ಬಗ್ಗೆ ಮಾತನಾಡಿ, ದೇಶದ ಆರ್ಥಿಕ ದೃಷ್ಟಿಯಿಂದ ಮೋದಿ ಹೇಳಿದ್ದು ಸರಿಯಾಗಿದೆ.

ಕಾಂಗ್ರೆಸ್ ನಾಯಕರು ಕೀಳುಮಟ್ಟದ ಹೇಳಿಕೆ ಕೊಟ್ಟಿದ್ದಾರೆ. ಇವರಿಗೆ ದೇಶ ಮೊದಲು ಅನ್ನೋದಕ್ಕಿಂತ ರಾಜಕೀಯ ಚಟವೇ ಮೊದಲಾಗಿದೆ ಎಂದು ಕಿಡಿಕಾರಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಒಂದು ಹೊತ್ತಿನ ಊಟ ಬಿಡಿ ಎಂದಿದ್ರು. ಇಂದಿರಾಗಾಂಧಿಯವ್ರು ಚಿನ್ನ ಖರೀದಿ ಮಾಡದಂತೆ ಮನವಿ ಮಾಡಿದ್ರು. ಪಿ. ಚಿದಂಬರಂ ಅವ್ರು ಚಿನ್ನ ಖರೀದಿ ಮಾಡಬಾರದು ಎಂದಿದ್ರು. ಆಮದು ಸುಂಕವನ್ನು ಮೂರು ಪಟ್ಟು ಹೆಚ್ಚಿಸಿದ್ರು. ಮಾಂಗಲ್ಯ ಕಟ್ಟೋದು ಬೇಡ ಎಂದು ಪ್ರಧಾನಿ ಹೇಳಿಲ್ಲ. ಕಾಂಗ್ರೆಸ್ ಬೌದ್ಧಿಕ ದಿವಾಳಿತನದ ವರ್ತನೆಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.