ಮನೆ ರಾಷ್ಟ್ರೀಯ ದೆಹಲಿಯಲ್ಲಿ 1367 ಕೋವಿಡ್‌ ಪಾಸಿಟಿವ್

ದೆಹಲಿಯಲ್ಲಿ 1367 ಕೋವಿಡ್‌ ಪಾಸಿಟಿವ್

0

ನವದೆಹಲಿ (New Delhi)-ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 1,367  ಹೊಸ ಕೋವಿಡ್‌ (Covid) ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಇದರಿಂದ ಸೋಂಕಿತರ ಸಂಖ್ಯೆ 18,78,458 ಆಗಿದೆ. ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 26,170 ಕ್ಕೆ ತಲುಪಿದೆ.

ಈ ಹೊಸ ಪ್ರಕರಣಗಳು ನಿನ್ನೆಯ ಸಂಖ್ಯೆ(1,204)ಗಿಂತ ಶೇ.13 ರಷ್ಟು ಹೆಚ್ಚಾಗಿದೆ. ದೆಹಲಿ ಆರೋಗ್ಯ ಇಲಾಖೆ ಹಂಚಿಕೊಂಡ ಮಾಹಿತಿಯ ಪ್ರಕಾರ, ರಾಜಧಾನಿಯಲ್ಲಿ ಸತತ ಆರನೇ ದಿನ 1,000ಕ್ಕೂ ಹೆಚ್ಚು ಹೊಸ ದೈನಂದಿನ ಪ್ರಕರಣಗಳು ವರದಿಯಾಗಿದ್ದು, ಕೋವಿಡ್ ಪಾಸಿಟಿವಿಟಿ ದರ ಶೇಕಡಾ 4.50 ರಷ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವರ್ಚುವಲ್ ಸಭೆಯಲ್ಲಿ ದೇಶದಲ್ಲಿ ಹಿಂದಿನ ಕೋವಿಡ್ ಅಲೆಗಳ ಸಮಯದಲ್ಲಿ ಮಾಡಿದ ರೀತಿ ‘ಪರೀಕ್ಷೆ, ಟ್ರ್ಯಾಕ್ ಮತ್ತು ಚಿಕಿತ್ಸೆ ಅನುಷ್ಠಾನಕ್ಕೆ ಒತ್ತು ನೀಡಿದರು.

ಹಿಂದಿನ ಲೇಖನಐಪಿಎಲ್‌: ಗುಜರಾತ್‌ ಗೆ ರೋಚಕ ಜಯ; ಅಂಕಪಟ್ಟಿಯಲ್ಲಿ ಅಗ್ರಸ್ಥಾನ
ಮುಂದಿನ ಲೇಖನರಾಜ್ಯದಲ್ಲಿ ಕೊರೊನಾ ಹೆಚ್ಚಳ: 126 ಮಂದಿಗೆ ಕೋವಿಡ್‌ ದೃಢ