ಎಲ್ಲಿ ಹನುಮನೊ ಅಲ್ಲಿ ರಾಮನು ||
ಎಲ್ಲಿ ರಾಮನು ಅಲ್ಲಿ ಹನುಮನು |
ಎಲ್ಲಿ ಹನುಮನೋ ಅಲ್ಲಿ ರಾಮನು|
ರಾಮನ ಉಸಿರೇ ಹನುಮ||
ಹನುಮಾನ ಪ್ರಾಣವೇ ರಾಮ ||ಎಲ್ಲಿ ಹನುಮನು||
ಎಲ್ಲೇ ನೆನೆದರೂ ಅಲ್ಲಿಯೇ ಇರುವನು |
ಏನೇ ಕರೆದರೂ ಅಲ್ಲಿ ಬರುವನು ||
ನೆರಳಿನಂತೆಯೇ ಬಳಿಯಲಿರುವನು||
ಕರುಣೆಯಿಂದ ಸುಖ ಶಾಂತಿ ನೀಡುವ ಮುಖ್ಯಪ್ರಾಣ ||ಎಲ್ಲಿ ಹನುಮನು||
ಮಂತ್ರ ಕೇಳನೂ, ತಂತ್ರ ಕೇಳನೂ ||
ಸ್ತೋತ್ರ ಮಾಡುತ ನನ್ನ ಹೊಗಳು ಎನ್ನನ್ನು ||
ಪ್ರೇಮದಿಂದ ನೀ ಕರೆಯ ಬರುವನು||
ಭಕ್ತನೊಬ್ಬನೇ ಅವನ ಗೆಲುವನ್ನು ಎಂದೆಂದೂ ||ಎಲ್ಲಿ ಹನುಮನು ||
ಸ್ಮರಣೆ ಮಾತ್ರದಿ ಮನದಿ ಬೆರೆವನು ||
ಕಾಮ,ಕ್ರೋಧ ಕ್ಷಣದಲ್ಲಿ ಧಯಿಸಿಬಿಡುವನು ||
ಶಾಂತಿ ಕೊಡುವನು ನೆಮ್ಮದಿಯ ತರುವನು||
ಮನಸ್ಸಿಗೆ ಮಹಾದಾನಂದ ನೀಡುವ ಮುಖ್ಯ ಪ್ರಾಣ ||ಎಲ್ಲಿ ಹನುಮಮ||