ಮನೆ ಸುದ್ದಿ ಜಾಲ ಅಮೃತ ಸರೋವರ ಕೆರೆ ಅಂಗಳದಲ್ಲಿ ಜಲ ಸಂಜೀವಿನಿ: ರೈತ ಸಂವಾದ

ಅಮೃತ ಸರೋವರ ಕೆರೆ ಅಂಗಳದಲ್ಲಿ ಜಲ ಸಂಜೀವಿನಿ: ರೈತ ಸಂವಾದ

0

ಮೈಸೂರು(Mysuru): ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಗ್ರಾಮ ಪಂಚಾಯಿತಿಯ ಕಾಮಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಅಮೃತ ಸರೋವರ ಕೆರೆ ಅಂಗಳದಲ್ಲಿ ಜಲ ಸಂಜೀವಿನಿ ರೈತ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ರಾಷ್ಟ್ರೀಯ ರೈತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ನರೇಗಾ ಯೋಜನೆ ಅಡಿ ರಾಜ್ಯದಲ್ಲಿ ಮುಂದಿನ ಆರ್ಥಿಕ ವರ್ಷದಿಂದ ಜಲ ಸಂಜೀವಿನಿ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಉದ್ದೇಶಿಸಿದ್ದು, ಇದರಿಂದ ಗೋಮಾಳ ಅಭಿವೃದ್ಧಿ, ವಿಪ್ಪತ್ತು ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಹಾಗೂ ಸುಸ್ಥಿರಜೀವನೋಪಾಯಕ್ಕೆ ಅನುಕೂಲಕರವಾಗಲಿದೆ ಎಂದರು.

ಇಡೀ ವಿಶ್ವಕ್ಕೆ ಅನ್ನ ನೀಡುವ ರೈತರು, ದೇಶಕ್ಕೆ ಬೆನ್ನುಲುಬಾಗಿದ್ದಾರೆ. ರೈತರಿಗೆ ಅನುಕೂಲವಾಗುವಂತ ಅನೇಕ ಕಾಮಗಾರಿಗಳು ನರೇಗಾ ಯೋಜನೆಯಲ್ಲಿ ಇವೆ. ಇದನ್ನು ಸದುಪಯೋಗಪಡಿಸುಕೊಳ್ಳುವಂತೆ ತಿಳಿಸಿದರು.

ಇದೇ ವೇಳೆ, ತಾಲ್ಲೂಕು ಯೋಜನಾಧಿಕಾರಿ ಹಾಗೂ ನರೇಗಾ ಸಹಾಯಕ ನಿರ್ದೇಶಕರು ಆದ ಗುರುಮಹದೇವು ಅವರು, ಅನ್ನದಾತರಿಗೆ ಉಪಹಾರ ಬಡಿಸುವ ಮೂಲಕ ರೈತರಿಗೆ ರೈತರ ದಿನಾಚರಣೆಯ ಶುಭಾಷಯ ಕೋರಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಅಧಿಕಾರಿ ವಿರೂಪಾಕ್ಷ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ್, ನರೇಗಾ ತಾಂತ್ರಿಕ ಸಂಯೋಜಕ ನಾಗಸುಂದರ್, ಐ.ಇ.ಸಿ ಸಂಯೋಜಕಿ ಕಾವ್ಯ, ತಾಂತ್ರಿಕ ಸಹಾಯಕ ಇಂಜಿನಿಯರ್ ಮಂಜುನಾಥ್, ಬಿ.ಎಫ್.ಟಿ ಜಗಧೀಶ್, ಪ್ರವೀಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. .

ಹಿಂದಿನ ಲೇಖನರಾಜ್ಯದಲ್ಲಿ ಕೊರೋನಾ ತಡೆಗಟ್ಟಲು ರಾಜ್ಯ ಸರ್ಕಾರದಿಂದ ಮಾರ್ಗಸೂಚಿಗಳ ಜಾರಿ: ಡಾ.ಕೆ.ವಿ.ರಾಜೇಂದ್ರ
ಮುಂದಿನ ಲೇಖನಗುತ್ತಿಗೆದಾರರ ಸಂಘದ ವಿರುದ್ಧ ಮುನಿರತ್ನರಿಂದ ಕ್ರಿಮಿನಲ್ ಮಾನಹಾನಿ ದಾವೆ: ಪ್ರತಿವಾದಿಗಳಿಗೆ ಜಾಮೀನುರಹಿತ ವಾರೆಂಟ್