ಮನೆ ದೇವರ ನಾಮ ಕಲ್ಯಾಣಂ ತುಳಸಿ ಕಲ್ಯಾಣಂ

ಕಲ್ಯಾಣಂ ತುಳಸಿ ಕಲ್ಯಾಣಂ

0

ಕಲ್ಯಾಣಂ ತುಳಸಿ ಕಲ್ಯಾಣಂ         

ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ ಬಲ್ಲಿದ ಶ್ರೀ ವಾಸುದೇವನಿಗೆ   

ಅಂಗಳದೊಳಗೆಲ್ಲ ತುಳಸಿಯ ವನಮಾಡಿ ಶೃಂಗಾರವ ಮಾಡಿ ಶೀಘ್ರದಿಂದ ಕಂಗಳ ಪಾಪವ ಪರಿಹರಿಸುವ ಮುದ್ದುರಂಗ ಬಂದಲ್ಲಿ ತಾ ನೆಲೆಸಿದನು

ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟುತಂದ ಶ್ರೀಗಂಧಾಕ್ಷತೆಗಳಿಂದ ಸಿಂಧುಶಯನನ ವೃಂದಾವನದಿ ಪೂಜಿಸೆಕುಂದದ ಭಾಗ್ಯವ ಕೊಡುತಿಹಳು   

ಭಕ್ಷ್ಯ ಭೋಜ್ಯಂಗಳ ನೈವೇದ್ಯವನಿತ್ತು ಲಕ್ಷ ಬತ್ತಿಯ ದೀಪವ ಹಚ್ಚಿ ಅಧೋಕ್ಷಜ ಸಹಿತ ವೃಂದಾವನ ಪೂಜಿಸೆ ಸಾಕ್ಷಾತ್ ಮೋಕ್ಷವ ಕೊಡುತಿಹಳು

ಉತ್ಥಾನ ದ್ವಾದಶಿ ದಿವಸದಿಂದಲಿ ಕೃಷ್ಣಉತ್ತಮ ತುಳಸಿಗೆ ವಿವಾಹವ ಚಿತ್ತನಿರ್ಮಲರಾಗಿ ಮಾಡಿದವರಿಗೆ ಉತ್ತಮ ಗತಿ ಈವ ಪುರಂದರವಿಠಲ

ಹಿಂದಿನ ಲೇಖನಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ
ಮುಂದಿನ ಲೇಖನಹೊಟ್ಟೆಯ ಬೊಜ್ಜು ಕರಗಿಸಲು ಈ ಯೋಗಾಸನ ಪ್ರಯತ್ನಿಸಿ