ಮನೆ ಸುದ್ದಿ ಜಾಲ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ ಶಿವಕುಮಾರ್ : 13 ಸಚಿವರ ಪಟ್ಟಿ ಇಂತಿದೆ

ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ ಶಿವಕುಮಾರ್ : 13 ಸಚಿವರ ಪಟ್ಟಿ ಇಂತಿದೆ

0

ಬೆಂಗಳೂರು: ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆ ಪೂರ್ಣಗೊಂಡಿದೆ. ಅತ್ತ ಕಾಂಗ್ರೆಸ್ ಹೈಕಮಾಂಡ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ. ಡಿಕೆಶಿ ಅವರೊಂದಿಗೆ ಒಟ್ಟು 13 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು ಮತ್ತೊಂದೆಡೆ, ಜಿ ಪರಮೇಶ್ವರ್ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಮೂಲಗಳ ಪ್ರಕಾರ, ಬೆಂಗಳೂರಿನ ಲೋಕಭವನದಲ್ಲಿ ಸಂಜೆ 4.05 ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಸಚಿವರ ಪಟ್ಟಿಯನ್ನು ಹೈಕಮಾಂಡ್​ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.

ಸಂಪುಟ ಸೇರುವ ಸಚಿವರ ಪಟ್ಟಿ

ಡಿ.ಕೆ.ಶಿವಕುಮಾರ್, ಸಿಎಂ

ಜಿ.ಪರಮೇಶ್ವರ್, ಡಿಸಿಎಂ

ಕ್ಯಾಬಿನೆಟ್ ದರ್ಜೆ ಸಚಿವರು

ಎಂ.ಬಿ.ಪಾಟೀಲ್

ಕೆ.ಜೆ.ಜಾರ್ಜ್

ಕೆ.ಎಚ್.ಮುನಿಯಪ್ಪ

ರಾಮಲಿಂಗಾರೆಡ್ಡಿ

ಸತೀಶ್ ಜಾರಕಿಹೊಳಿ‌

ಯು.ಟಿ.ಖಾದರ್

ಕೃಷ್ಣಬೈರೇಗೌಡ

ಪ್ರಿಯಾಂಕ್ ಖರ್ಗೆ

ಯತೀಂದ್ರ ಸಿದ್ದರಾಮಯ್ಯ

ಶರಣಪ್ರಕಾಶ್ ಪಾಟೀಲ್

ಬೈರತಿ ಸುರೇಶ್

ಈಶ್ವರ್ ಖಂಡ್ರೆ

ಬಹುತೇಕ ಇದೇ ಅಂತಿಮ ಎಂದು ಮೂಲಗಳು ಖಚಿತ ಪಡಿಸಿವೆ ಎಂಬುದ್ದಾಗಿದೆ.

ಈದರ ಕುರಿತ್ತಾಗಿ ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್, ತಮ್ಮನ್ನು ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ದೃಢಪಡಿಸಿದ್ದಾರೆ. ಮುಖ್ಯಮಂತ್ರಿ ಆಗಿ ನಿಯೋಜಿತಗೊಂಡಿರುವ ಡಿಕೆ ಶಿವಕುಮಾರ್ ನನಗೆ ಮಾಹಿತಿ ನೀಡಿದ್ದಾರೆ. ಸಚಿವರಾಗಿ ಆಯ್ಕೆಯಾಗಿದ್ದಕ್ಕಾಗಿ ಅವರು ನನ್ನನ್ನು ಅಭಿನಂದಿಸಿದ್ದಾರೆ. ಅವರಿಗೆ ಶುಭ ಹಾರೈಸುತ್ತೇನೆ ಮತ್ತು ಈ ಸಂಪುಟದಲ್ಲಿ ನನ್ನನ್ನು ಪರಿಗಣಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.

ಹಾಗೂ ಶಿವಕುಮಾರ್ ಅವರ ಹೊಸ ಸಚಿವ ಸಂಪುಟದಲ್ಲಿ ಇಬ್ಬರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದೆಂಬ ಊಹಾಪೋಹಗಳ ನಡುವೆಯೇ, ಕಾಂಗ್ರೆಸ್ ಹಿರಿಯ ನಾಯಕ ಜಿ. ಪರಮೇಶ್ವರ ಅವರು ಇಂದು ಮುಂಜಾನೆ ಅವರ ನಿವಾಸದಲ್ಲಿ ಅವರನ್ನು ಭೇಟಿಯಾದರು. ಆದರೆ ಈಗ ಬಂದ ಸುದ್ದಿಯಂತೆ ಪರಮೇಶ್ವರ್​ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.