ಮನೆ ರಾಷ್ಟ್ರೀಯ ನೀರಿನ ಸಂರಕ್ಷಣೆಗೆ ಮದ್ಯ ಕುಡಿಯಿರಿ, ಗುಟ್ಕಾ ತಿನ್ನಿ: ಜನರಿಗೆ ಬಿಜೆಪಿ ಸಂಸದನ ವಿಚಿತ್ರ ಸಲಹೆ

ನೀರಿನ ಸಂರಕ್ಷಣೆಗೆ ಮದ್ಯ ಕುಡಿಯಿರಿ, ಗುಟ್ಕಾ ತಿನ್ನಿ: ಜನರಿಗೆ ಬಿಜೆಪಿ ಸಂಸದನ ವಿಚಿತ್ರ ಸಲಹೆ

0

ರೆವಾ (ಮಧ್ಯ ಪ್ರದೇಶ): ನೀರಿನ ಸಂರಕ್ಷಣೆಗೆ ‘ಮದ್ಯ ಕುಡಿಯಿರಿ’, ‘‌ಗುಟ್ಕಾ ತಿನ್ನಿ’ ಎಂದು  ಬಿಜೆಪಿ ಸಂಸದ ಜನಾರ್ದನ ಮಿಶ್ರಾ ಜನರಿಗೆ ಸಲಹೆ ನೀಡಿದ್ದಾರೆ.

ರೆವಾದ ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ ನಡೆದ ಜಲ ಸಂರಕ್ಷಣಾ ಕಾರ್ಯಾಗಾರದಲ್ಲಿ ‘ಅಂತರ್ಜಲ ಬರಿದಾಗುತ್ತಿದೆ’ ಎಂಬ ವಿಷಯದ ಕುರಿತು ಮಾತನಾಡಿದ ಅವರು,  ನೀರು ಸಿಗದೆ ಭೂಮಿ ಬರಡಾಗುತ್ತಿದೆ. ನಾವು ಅದನ್ನು ಉಳಿಸಬೇಕಾಗಿದೆ. ಬೇಕಿದ್ರೆ ಗುಟ್ಕಾ ತಿನ್ನಿ, ಮದ್ಯ ಕುಡಿಯಿರಿ. ಸಲ್ಯೂಷನ್‌ (ಒಂದು ರೀತಿಯ ಅಂಟು) ಅಥವಾ ಅಯೋಡೆಕ್ಸ್‌ ಬೇಕಿದ್ರೆ ತಿನ್ನಿ. ಆದರೆ ನೀರಿನ ಮಹ‌ತ್ವವನ್ನು ಅರಿತುಕೊಳ್ಳಿ ಎಂದು ಮಿಶ್ರಾ ಹೇಳಿದ್ದಾರೆ.

ಯಾವ ಸರ್ಕಾರವಾದರೂ ನೀರಿನ ಮೇಲಿನ ತೆರಿಗೆ ರದ್ದು ಮಾಡಿದರೆ, ನಮಗೆ ಅದು ಬೇಡ ಎಂದು ಹೇಳಿ. ವಿದ್ಯುತ್‌ ಬಿಲ್‌ ಸಹಿತ ಇನ್ನಿತರ ತೆರಿಗೆಗಳನ್ನು ರದ್ದು ಮಾಡಲು ಅವರಿಗೆ ಹೇಳಿ ಎಂದು ಮಿಶ್ರಾ ಜನರಿಗೆ ಸಲಹೆ ನೀಡಿದ್ದಾರೆ.

ಈ ವಿವಾದಿತ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಿಶ್ರಾ ವಿಚಿತ್ರ ಹೇಳಿಕೆ, ವರ್ತನೆಗೆ ಸುದ್ದಿಯಾಗುತ್ತಿರುವುದು ಇದು ಮೊದಲಲ್ಲ. ಇತ್ತೀಚೆಗಷ್ಟೇ, ಇವರು ಬರಿಗೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

ಹಿಂದಿನ ಲೇಖನದೇಶದ 576 ಮಾತೃಭಾಷೆಗಳ ಸಮೀಕ್ಷೆ ಪೂರ್ಣಗೊಳಿಸಿದ ಕೇಂದ್ರ ಗೃಹ ಸಚಿವಾಲಯ
ಮುಂದಿನ ಲೇಖನರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರ ಸಾವು