ಚೆನ್ನೈ : ಇಂದು (ಮೇ 4) ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಫಲಿತಾಂಶ ಹೊರಬೀಳಲಿದೆ. ಇದೇ ಹೊತ್ತಲ್ಲಿ ನಟಿ ತ್ರಿಷಾ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ.
ನಟಿ ತ್ರಿಷಾ ಕೃಷ್ಣನ್ ಅವರಿಂದು ತಮ್ಮ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿ, ಪಾರ್ಥನೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಇಂದು ತಮಿಳುನಾಡು ವಿಧಾನಸಭೆಯ ಫಲಿತಾಂಶ ಹೊರಬೀಳಲಿದ್ದು, ವಿಜಯ್ ಗೆಲುವಿಗಾಗಿ ನಟಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪಾರ್ಥಿಸಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಟಿ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಫಲಿತಾಂಶದ ದಿನವೇ ನಟಿ ತಿರುಪತಿಗೆ ಭೇಟಿ ಕೊಟ್ಟಿರುವುದು ಇನ್ನಷ್ಟು ಲಿಂಕ್ ಸಿಕ್ಕಂತಾಗಿದೆ.
ಇದಕ್ಕೂ ಮುನ್ನ ಮಾರ್ಚ್‌ನಲ್ಲಿ, ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ವಿಜಯ್ ಹಾಗೂ ತ್ರಿಶಾ ಕೃಷ್ಣನ್ ಒಟ್ಟಿಗೆ ಒಂದೇ ತರಹದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ 2025ರ ಡಿಸೆಂಬರ್‌ನಲ್ಲಿ ವಿಜಯ್ ಹಾಗೂ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏ.23 ರಂದು ಮತದಾನ ನಡೆದಿತ್ತು. ರಾಜ್ಯದಲ್ಲಿ ದಾಖಲೆಯ 4,654 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ 3,579 ಪುರುಷ ಮತ್ತು 443 ಮಹಿಳಾ ಮತದಾರರು ಸ್ಪರ್ಧಿಸಿದ್ದರು. 84.69% ಮತದಾನ ನಡೆದಿತ್ತು. ರಾಜ್ಯದಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕಿದ್ದವು. ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ನಟ ವಿಜಯ್ ನೇತೃತ್ವದ ಟಿವಿಕೆ, ಎನ್‌ಟಿಕೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು.
ಕಳೆದ ಚುನಾವಣೆಯಲ್ಲಿ 10 ವರ್ಷಗಳ ನಂತರ ಎಐಎಡಿಎಂಕೆ ಆಡಳಿತವನ್ನು ಅಂತ್ಯಗೊಳಿಸಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತು. ಡಿಎಂಕೆ ಮೈತ್ರಿಕೂಟ: 159 ಸ್ಥಾನಗಳು (ಡಿಎಂಕೆ ಏಕಾಂಗಿಯಾಗಿ 133 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆಯಿತು). ಎಐಎಡಿಎಂಕೆ ಮೈತ್ರಿಕೂಟ: 75 ಸ್ಥಾನ ಗೆದ್ದಿದ್ದವು.














