ಮನೆ ಅಪರಾಧ ಚುನಾವಣಾ ಅಕ್ರಮ: ರಾಜ್ಯದಲ್ಲಿ ಇದುವರೆಗೆ 44 ಕೋಟಿ ನಗದು ಸೇರಿ 288 ಕೋಟಿ ಮೌಲ್ಯದ ವಸ್ತುಗಳು...

ಚುನಾವಣಾ ಅಕ್ರಮ: ರಾಜ್ಯದಲ್ಲಿ ಇದುವರೆಗೆ 44 ಕೋಟಿ ನಗದು ಸೇರಿ 288 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ

0

ಬೆಂಗಳೂರು: ಚುನಾವಣಾ ಅಕ್ರಮದ ಮೇಲೆ ನಿಗಾವಹಿಸಿರುವ ವಿವಿಧ ತನಿಖಾ ತಂಡಗಳು ಸೋಮವಾರ ಒಟ್ಟು 2.68 ಕೋಟಿ ರೂ. ನಗದು, 7.06 ಕೋಟಿ ರೂ. ಮೌಲ್ಯದ ಮೂರು ಕೆಜಿ ಚಿನ್ನಾಭರಣ, 68 ಕೆಜಿ ಬೆಳ್ಳಿ, 103 ಕೆಜಿ ಹಳೆ ಬೆಳ್ಳಿಯನ್ನು ಜಪ್ತಿ ಮಾಡಿವೆ.

Join Our Whatsapp Group

ಲೋಕಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾದ ಬಳಿಕ ಇದುವರೆಗೆ 44.09 ಕೋಟಿ ರೂ. ನಗದು ಸೇರಿ 288 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇದರಲ್ಲಿ 134 ಕೋಟಿ ರೂ. ಮೌಲ್ಯದ 1.39 ಕೋಟಿ ಲೀಟರ್‌ ಮದ್ಯ, 9.54 ಕೋಟಿ ರೂ. ಮೌಲ್ಯದ 339 ಕೆಜಿ ಮಾದಕ ವಸ್ತುಗಳು, 10.56 ಕೋಟಿ ರೂ. ಮೌಲ್ಯದ 19 ಕೆಜಿ ಚಿನ್ನ, 69.23 ಲಕ್ಷ ರೂ. ಮೌಲ್ಯದ 230 ಕೆಜಿ ಬೆಳ್ಳಿ ಸೇರಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 7.06 ಕೋಟಿ ರೂ. ಮೌಲ್ಯದ 3 ಕೆಜಿ ಚಿನ್ನ, 68 ಕೆಜಿ ಬೆಳ್ಳಿ, 103 ಕೆಜಿ ಹಳೇ ಬೆಳ್ಳಿ, 5.60 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 10 ಲಕ್ಷ ರೂ. ಮೌಲ್ಯದ 1,411 ಫ್ಯಾನ್ಸ್ ಪರಿಕರಗಳ ಜಪ್ತಿ ಮತ್ತು ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 2.62 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಕಚೇರಿ ಮಾಹಿತಿ ನೀಡಿದೆ.

ಹಿಂದಿನ ಲೇಖನಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗಿಯಾದರೂ ಮುಖಾಮುಖಿಯಾಗದ ಈಶ್ವರಪ್ಪ-ಬಿ.ವೈ.ಆರ್.
ಮುಂದಿನ ಲೇಖನಚಿನ್ನಸ್ವಾಮಿ ಕ್ರೀಡಾಂಗಣದ ಸ್ಟಾಂಡ್​ ಗಳಿಗೆ ರಾಜ್ಯದ ದಿಗ್ಗಜ ಕ್ರಿಕೆಟಿಗರ ಹೆಸರಿಡುವಂತೆ ಸಿಎಂ ಮನವಿ