ಮನೆ ವ್ಯಾಯಾಮ ಕ್ಯಾಲೋರಿ ಕರಗಿಸಲು ವ್ಯಾಯಾಮಗಳು

ಕ್ಯಾಲೋರಿ ಕರಗಿಸಲು ವ್ಯಾಯಾಮಗಳು

0

ಹೆಚ್ಚು ಕ್ಯಾಲೋರಿಗಳನ್ನು ಸುಡಲು ಸಹಕಾರಿಯಾಗುವ 5 ವ್ಯಾಯಾಮಗಳ ಮಾಹಿತಿ ಇಲ್ಲಿದೆ. ಈ ವ್ಯಾಯಾಮಗಳನ್ನು ಮಾಡಿ ಕ್ಯಾಲೋರಿಗಳನ್ನು ಕರಗಿಸಿ ಆರೋಗ್ಯವಾಗಿರಿ.

ಜಂಪಿಂಗ್ ಲಂಗ್ಸ್

ನಿಂತು ಮಾಡುವ ವ್ಯಾಯಾಮ ಕೂಡ ಹೆಚ್ಚಿನ ಕ್ಯಾಲೋರಿಯನ್ನು ಸುಡುತ್ತದೆ. ಅವುಗಳಲ್ಲಿ ಈ ಜಂಪಿಂಗ್ ಲಂಗ್ಸ್ ಕೂಡ ಒಂದು. ಈ ವ್ಯಾಯಾಮವನ್ನು ಒಂದು ಕಾಲನ್ನು ಮುಂದಕ್ಕೆ ಮತ್ತು ಇನ್ನೊಂದು ಸ್ವಲ್ಪ ಹಿಂದಕ್ಕೆ ಪ್ರಾರಂಭ ಮಾಡಬಹುದು. ಈ ವ್ಯಾಯಾಮ ಮಾಡುವುದರಿಂದ ಫ್ಲೈ ಮೆಟ್ರಿಕ್ ಚಲನೆಯು ಬಲದೊಂದಿಗೆ ವೇಗವನ್ನು ಸಂಯೋಜಿಸುತ್ತದೆ. ಇದರ ಮೂಲಕ ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹೃದಯದ ಬಡಿತವನ್ನು ಸುಧಾರಿಸುತ್ತದೆ.

ಬರ್ಪೀಸ್

ಇದೊಂದು ಪ್ಲೈಯೊಮೆಟ್ರಿಕ್ ವ್ಯಾಯಾಮವಾಗಿದ್ದು, ಬೇಗನೆ ಆಯಾಸಗೊಳಿಸುತ್ತವೆ. ಈ ವ್ಯಾಯಾಮ ಮಾಡುವುದರಿಂದ ನಿಮ್ಮ ಎಲ್ಲಾ ಸ್ನಾಯುಗಳು ಕೂಡ ಕೆಲಸ ಮಾಡುತ್ತದೆ. ಮುಖ್ಯವಾಗಿ ಈ ವ್ಯಾಯಾಮವು ಅಲ್ಪಾವಧಿಯಲ್ಲಿಯೇ ಸಾಕಷ್ಟು ಕ್ಯಾಲೋರಿಗಳನ್ನು ಸುಡಲು ಅನುವು ಮಾಡಿಕೊಡುತ್ತದೆ. ಈ ವ್ಯಾಯಾಮದಲ್ಲಿ ಜಿಗಿತ, ಪುಶ್ ಗಳನ್ನು ಒಳಗೊಂಡಿರುತ್ತದೆ.

ಜಂಪ್ ಸ್ಕ್ವಾಟ್

ಜಂಪಿಗ್ ಸ್ಕ್ವಾಟ್ ಕೂಡ ಅತ್ಯುತ್ತಮವಾದ ವ್ಯಾಯಾಮವಾಗಿದ್ದು, ತ್ವರಿತವಾಗಿ ತೂಕ ಇಳಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ವ್ಯಾಯಾಮದಿಂದ ನಿಮ್ಮ ದೇಹಕ್ಕೆ ಸರಿಯಾದ ಶೇಪ್ ಮಾಡಿಕೊಳ್ಳಬಹುದು. ಹೆಚ್ಚಿನ ಕ್ಯಾಲ್ಯೋರಿ ಬರ್ನ್ ಮಾಡುವುದರಲ್ಲಿ ಈ ವ್ಯಾಯಾಮ ಬೆಸ್ಟ್ ಎಂದೇ ಹೇಳಬಹುದು.

ಮೌಂಟೇನ್ ಕ್ಲೈಂಬರ್

ಹೆಸರೇ ಸೂಚಿಸುವಂತೆ ಪರ್ವತವನ್ನು ಏರುವ ವ್ಯಾಯಾಮ. ಇದು ಕೂಡ ಹೆಚ್ಚು ಕ್ಯಾಲೋರಿಗಳನ್ನು ಸುಡುವುದಲ್ಲದೇ, ತ್ವರಿತವಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಪ್ಲ್ಯಾಂಕ್ ಸ್ಥಾನದಲ್ಲಿ ಈ ವ್ಯಾಯಾಮ ಪ್ರಾರಂಭ ಮಾಡಬೇಕು. ಒಂದು ಕಾಲನ್ನು ಮೇಲಕ್ಕೆತ್ತಿ, ನಿಮ್ಮ ಎದೆಯ ಮುಂದಕ್ಕೆ ತಳ್ಳಬೇಕು. ಇದೇ ವ್ಯಾಯಾಮವನ್ನು ಮತ್ತೊಂದು ಕಾಲಿಗೂ ಪುನರಾವರ್ತಿಸಬೇಕು. ನೀವು ನಿಧಾನವಾಗಿ ಪ್ರಾರಂಭ ಮಾಡಿ ನಂತರ ವೇಗವನ್ನು ಹೆಚ್ಚಿಸಬಹುದು. ಈ ವ್ಯಾಯಾಮವು ಪರ್ವತವನ್ನು ಏರುವ ರೀತಿಯಾಗಿರುತ್ತದೆ. ಎರಡು ಕಾಲಿಗೂ ವ್ಯಾಯಾಮ ದೊರೆಯುವುದರಿಂದ ಬೇಗ ತೂಕ ಕಡಿಮೆಯಾಗಲು ಕಾರಣವಾಗುತ್ತದೆ.

ಸ್ಕೇಟರ್

ಸ್ಕೇಟರ್ ವ್ಯಾಯಾಮವು ಹೆಚ್ಚಿನ ಕ್ಯಾಲೋರಿಗಳನ್ನು ಇಳಿಸಿಕೊಳ್ಳಲು ಬೆಸ್ಟ್ ಎಂದೇ ಹೇಳಬಹುದು. ಇದು ಜಿಗಿತಗಳೊಂದಿಗೆ ಕೈಯಲ್ಲಿ ಭಾರವಾದ ವಸ್ತುವಿನಿಂದ ಮಾಡುವ ದೈಹಿಕ ಚಟುವಟಿಕೆಯಾಗಿದೆ. ವಿಶೇಷವಾಗಿ ಕಾಲುಗಳ ಮೂಲಕ ಜಂಪಿಂಗ್ ಮಾಡಬೇಕಾಗುತ್ತದೆ. ಇದು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುವುದಲ್ಲದೇ, ಹೆಚ್ಚಿನ ಕ್ಯಾಲೋರಿಗಳನ್ನು ಸುಡಲು ಸಹಾಯ ಮಾಡುತ್ತದೆ.

ಹಿಂದಿನ ಲೇಖನರಾಜ್ಯದಲ್ಲಿ 1680 ಮಂದಿಗೆ ಕೋವಿಡ್‌ ಸೋಂಕು
ಮುಂದಿನ ಲೇಖನಮುಚ್ಚಿಟ್ಟಿದ್ದ ಸುಮಾರು 5 ಸಾವಿರ ಕೋಟಿ ರೂ. ಮೌಲ್ಯದ ಮುಡಾದ ಆಸ್ತಿ ಪತ್ತೆ