ಮನೆ ಕಾನೂನು ಇಬ್ಬರು ರೌಡಿಶೀಟರ್‌’ಗಳ ಗಡಿಪಾರು: ಮೈಸೂರು ನಗರ ಪೊಲೀಸ್ ಕಮಿಷನರ್‌

ಇಬ್ಬರು ರೌಡಿಶೀಟರ್‌’ಗಳ ಗಡಿಪಾರು: ಮೈಸೂರು ನಗರ ಪೊಲೀಸ್ ಕಮಿಷನರ್‌

0

ಮೈಸೂರು(Mysuru): ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಬನ್ನಿಮಂಟಪದ ರೌಡಿ ಮನು ಅಲಿಯಾಸ್‌ ಆರ್‌’ಎಕ್ಸ್ ಮನು ಮತ್ತು ಗೌಸಿಯಾ ನಗರದ ಅಕ್ಮಲ್‌ ಪಾಷಾ ಅಲಿಯಾಸ್‌ ಪೋಕ್ಲೈನ್ ಎಂಬುವರನ್ನು ಗಡಿಪಾರು ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ರಮೇಶ್‌ ಬಾನೋತ್‌ ತಿಳಿಸಿದರು.

ಮನು ಎಂಬುವರ ವಿರುದ್ಧ 10 ಪ್ರಕರಣಗಳಿದ್ದು, ಕೆಲವು ತನಿಖೆಯಲ್ಲಿದ್ದವು. ಕಾನೂನು ಉಲ್ಲಂಘಿಸಿ ಪ್ರಕರಣಗಳ ಸಾಕ್ಷ್ಯಧಾರರನ್ನು ಬೆದರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ 3 ತಿಂಗಳು ಮಂಡ್ಯ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ  ಎಂದು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಅಕ್ಮಲ್‌ ಪಾಷಾ ವಿರುದ್ಧ 9 ಪ್ರಕರಣಗಳಿದ್ದು, ಸಹಚರರೊಂದಿಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರು. ಸಾರ್ವಜನಿಕರ ಜೀವಹಾನಿ, ಆಸ್ತಿ ನಷ್ಟ ಮಾಡುವ ಸಂಭವದ ಹಿನ್ನೆಲೆಯಲ್ಲಿ ನಗರದಿಂದ ರಾಮನಗರ ಜಿಲ್ಲೆಗೆ 6 ತಿಂಗಳಿಗೆ ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಚಾರ ನಿಯಮಗಳ  ಕಟ್ಟುನಿಟ್ಟಿನ ಜಾರಿ

ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದರಿಂದ ಚೆಕ್‌ಪೋಸ್ಟ್‌’ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ರಮೇಶ್‌ ತಿಳಿಸಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಮಾರಕಾಸ್ತ್ರಗಳನ್ನು ಸಾಗಣೆ ಮಾಡುತ್ತಿರುವ ಅನುಮಾನವಿದ್ದರೆ ತಪಾಸಣೆ ಮಾಡಲಾಗುತ್ತಿದೆ. ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತಿದೆ ಎಂದರು.

ಹಿಂದಿನ ಲೇಖನಮೈಸೂರು: ಸಾರಿಗೆ ಅಧಿಕಾರಿಗಳಿಗೆ ಮಚ್ಚು ತೋರಿಸಿ ಹೆದರಿಸಿದ್ದ ದಂಪತಿಗಳ ಬಂಧನ
ಮುಂದಿನ ಲೇಖನದೆಹಲಿ, ಮುಂಬೈನಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಗುರಿಯಾಗಿಸಿ ಬ್ಲ್ಯಾಕ್’ಮೇಲ್ ತಂತ್ರವಾಗಿ ಪಿಐಎಲ್ ಬಳಕೆ: ಸುಪ್ರೀಂ