ಮನೆ ಸುದ್ದಿ ಜಾಲ ಒಂದೇ ಕುಟುಂಬದ ನಾಲ್ವರು ಶವ ನದಿಯಲ್ಲಿ ಪತ್ತೆ

ಒಂದೇ ಕುಟುಂಬದ ನಾಲ್ವರು ಶವ ನದಿಯಲ್ಲಿ ಪತ್ತೆ

0

ಕಾಲಿಂಪಾಂಗ್ (ಪಶ್ಚಿಮ ಬಂಗಾಳ): ಗ್ಯಾಂಗ್ಟಾಕ್‌ನಿಂದ ಸಿಲಿಗುರಿಗೆ ಪ್ರಯಾಣಿಸುತ್ತಿದ್ದಾಗ ಕಾಣೆಯಾಗಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರ ಮೃತ ದೇಹಗಳು ಮತ್ತು ವಾಹನ ಭಾನುವಾರ ಬೆಳಗ್ಗೆ ಪತ್ತೆಯಾಗಿವೆ. ಸಬ್ಯ ನ್ಯೂಪಾನೆ (27), ಸ್ಮರಿಕಾ ನ್ಯೂಪಾನೆ (29), ಟಿಕಾ ಮಾಯಾ ದಹಾಲ್ (31) ಮತ್ತು ದಿತ್ಯ ಛೆಟ್ರಿ (5) ಮೃತರು. ಪೊಲೀಸ್ ಮೂಲಗಳ ಪ್ರಕಾರ, ಸಿಕ್ಕಿಂನ ಕುಟುಂಬವು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಕರನ್ನು ಭೇಟಿ ಮಾಡಲು ಗ್ಯಾಂಗ್ಟಾಕ್‌ನಿಂದ ಸಿಲಿಗುರಿಗೆ ಕಪ್ಪು ಬಣ್ಣದ ಟಾಟಾ ನೆಕ್ಸಾನ್‌ನಲ್ಲಿ ಪ್ರಯಾಣಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 10 ರಲ್ಲಿ ಪ್ರಯಾಣಿಸುತ್ತಿದ್ದ ಅವರು ಕೊನೆಯ ಬಾರಿಗೆ ಮಧ್ಯಾಹ್ನದ ಸುಮಾರಿಗೆ ರೊಂಬಿ ಮತ್ತು ಬಾಗ್‌ಪೂಲ್ ನಡುವೆ ಇರುವ ವೇಲಾಬರಿ ಪ್ರದೇಶದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿದರು ಎನ್ನಲಾಗಿದೆ.

ಆದರೆ ಸ್ವಲ್ಪ ಸಮಯದ ನಂತರ, ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿತು. ಭೂಕುಸಿತದಿಂದ ವಾಹನವು ನಿಯಂತ್ರಣ ಕಳೆದುಕೊಂಡು ತೀಸ್ತಾ ನದಿ ಕಮರಿಗೆ ಉರುಳಿದೆ. ಸಂಬಂಧಿಕರು ನೀಡಿದ ದೂರಿನ ಮೇರೆಗೆ, ಎನ್‌ಡಿಆರ್‌ಎಫ್ ತಂಡವು ಶನಿವಾರ ಬೆಳಗ್ಗೆ ಪಶ್ಚಿಮ ಬಂಗಾಳ ಪೊಲೀಸರು ಮತ್ತು ಸಿಕ್ಕಿಂ ಆಡಳಿತದ ನೆರವಿನೊಂದಿಗೆ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಎನ್‌ಡಿಆರ್‌ಎಫ್ ಸಿಬ್ಬಂದಿ ಉಪ ಕಮಾಂಡೆಂಟ್ ಸಂಜಯ್ ರಂಜನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದರು. ಹುಡುಕಾಟದ ಆರಂಭದಲ್ಲಿಯೇ ವಾಹನದ ಬ್ಯಾಟರಿ ಮತ್ತು ಕೆಲವು ಮುರಿದ ಭಾಗಗಳು ನದಿಯ ದಡದಲ್ಲಿ ಕಂಡುಬಂದವು.

ಈ ಪ್ರಕರಣ ಭಾನುವಾರ ಬೆಳಗ್ಗೆ ನದಿಪಾತ್ರದಿಂದ ಕಾರು ಮತ್ತು ನಾಲ್ವರು ನಾಲ್ವರು ಕುಟುಂಬ ಸದಸ್ಯರ ಮೃತದೇಹಗಳನ್ನು ಹೊರತೆಗೆದರು. ಉತ್ತರ ಬಂಗಾಳ ವಿಪತ್ತು ನಿರ್ವಹಣಾ ತಂಡದ ಕಮಾಂಡೆಂಟ್ ಅಜಯ್ ಕುಮಾರ್ ಮಾತನಾಡಿ, “ನಿನ್ನೆಯಿಂದ ಶೋಧ ಕಾರ್ಯ ನಡೆಯುತ್ತಿತ್ತು. ರಾತ್ರಿಯಿಡೀ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು ಮತ್ತು ಇಂದು ಬೆಳಗ್ಗೆ ಮತ್ತೆ ಪ್ರಾರಂಭಿಸಲಾಯಿತು. ಡೈವರ್‌ಗಳನ್ನು ನಿಯೋಜಿಸಲಾಯಿತು ಮತ್ತು ಕಲಿಬರಿ ಬಳಿ ವಾಹನದಿಂದ ಮೃತದೇಹಗಳನ್ನು ಹೊರತೆಗೆಯಲಾಯಿತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಳಿಗಾಗಿ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಿದರು ಎನ್ನಲಾಗಿದೆ.