ಬಿಡುವಿಲ್ಲದ ಜೀವನದಲ್ಲಿ ಒಂದಿಷ್ಟು ಹಾಸ್ಯ ರಸಾಯನ ಇದ್ದರೆ ಚಂದ. ಅಂತೆಯೇ ಒದುಗರ ಮನ ಮುದ ಗೊಳಿಸಲು ಇಲ್ಲಿವೆ ಕೆಲವೊಂದು ಹಾಸ್ಯ ಚಟಾಕಿಗಳು.
ಗಣೇಶ ಮತ್ತು ಮಳೆ:
“ಮೊದಲೆಲ್ಲಾ ಗಣೇಶನ ಬಿಡಲು ಕೆರೆ, ಕಟ್ಟೆ, ಹೊಳೆಗೆ ಹೋಗಬೇಕಾಗಿತ್ತು. ಈಗ ಕೆರೆಗಳೇ ಮನೆ ಬಳಿ ಬರುತ್ತಿವೆ.”
“ಶಿವ ಶಿವ, ಹಬ್ಬಕ್ಕೆ ಗೌರಮ್ಮನ ಕಳುಹಿಸು ಎಂದರೆ ಗಂಗಮ್ಮನೂ ಕಳುಹಿಸಿಕೊಟ್ಟಿದ್ದೀಯಲ್ಲಪ್ಪ…. ಏಕೋ ಈ ಕೋಪ ಶಂಕರಾ, ಶಿವಶಂಕರ…”
ಲಾಟರಿ ಮತ್ತು ಹೆಂಡತಿ
ಗಂಡ: ನಂಗೆ ಲಾಟರಿ ಹೊಡೆದ್ರೆ ಏನ್ ಮಾಡ್ತೀಯ?
ಹೆಂಡತಿ: ಲಾಟರಿ ದುಡ್ಡಲ್ಲಿ ನಂಗೆ ಅರ್ಧ ಕೊಟ್ ಬಿಡ್ರಿ. ನಾನು ಪರ್ಮನೆಂಟ್ ಆಗಿ ಅಮ್ಮನ ಮನೆಗೆ ಹೋಗಿ ಇದ್ ಬಿಡ್ತೀನಿ.
ಗಂಡ: ನೂರು ರೂಪಾಯಿ ಲಾಟರಿ ಹೊಡ್ತಿದೆ. 50 ರೂಪಾಯಿ ತಗೊಂಡು ನಿನ್ ಮನೆಗ್ ಹೋಗು.
Saval TV on YouTube