ಮನೆ ಸುದ್ದಿ ಜಾಲ ಎಸ್‌ಆರ್‌ಹೆಚ್‌ಗೆ ಗುಡ್‌ನ್ಯೂಸ್ – ಪ್ಯಾಟ್ ಕಮಿನ್ಸ್ ಫಿಟ್ನೆಸ್ ಟೆಸ್ಟಲ್ಲಿ ಪಾಸ್, ಆಡಲು ಅನುಮತಿ

ಎಸ್‌ಆರ್‌ಹೆಚ್‌ಗೆ ಗುಡ್‌ನ್ಯೂಸ್ – ಪ್ಯಾಟ್ ಕಮಿನ್ಸ್ ಫಿಟ್ನೆಸ್ ಟೆಸ್ಟಲ್ಲಿ ಪಾಸ್, ಆಡಲು ಅನುಮತಿ

0

ಹೈದರಾಬಾದ್ : ಎಸ್‌ಆರ್‌ಹೆಚ್ ತಂಡದ ಆಟಗಾರ ಪ್ಯಾಟ್ ಕಮಿನ್ಸ್ ಫಿಟ್ನೆಸ್ ಟೆಸ್ಟಲ್ಲಿ ಪಾಸ್ ಆಗಿದ್ದು, ಆಡಲು ಅನುಮತಿ ದೊರೆತಿದೆ. ಈ ಮೂಲಕ ಹೈದರಾಬಾದ್ ತಂಡಕ್ಕೆ ಆವೃತ್ತಿ ಮಧ್ಯದಲ್ಲಿ ಗುಡ್‌ನ್ಯೂಸ್ ಸಿಕ್ಕಿದೆ.

ಐಪಿಎಲ್ 2026ರ ಆವೃತ್ತಿ ಆರಂಭಕ್ಕೂ ಮುನ್ನ ಕಮ್ಮಿನ್ಸ್ ಭಾರತಕ್ಕೆ ಆಗಮಿಸಿದ್ದರು. ಆದರೆ ಒಂದೇ ಒಂದು ಪಂದ್ಯದಲ್ಲಿಯೂ ಆಡಿರಲಿಲ್ಲ. ಏ.2ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಸ್‌ಆರ್‌ಹೆಚ್ 65 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದ ಬಳಿಕ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾಕ್ಕೆ ವಾಪಸ್ಸಾಗಿದ್ದರು. ಅಲ್ಲಿ ಕೆಲವು ಸ್ಕ್ಯಾನಿಂಗ್‌ಗೆ ಒಳಪಟ್ಟಿದ್ದಾರೆ. ಗಾಯ ವಾಸಿಯಾಗಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಒಂದೆರಡು ದಿನದಲ್ಲಿ ಪ್ಯಾಟ್ ಕಮಿನ್ಸ್ ಭಾರತಕ್ಕೆ ಮರಳಲಿದ್ದು, ಏ.25ರಂದು ಜೈಪುರದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಈ ಬಗ್ಗೆ ಸ್ವತಃ ಪ್ಯಾಟ್ ಕಮಿನ್ಸ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಕಮಿನ್ಸ್ ಅನುಪಸ್ಥಿತಿಯಲ್ಲಿ, ಇಶಾನ್ ಕಿಶನ್ ಅವರು ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ, ಈವರೆಗೆ ತಂಡವು ಐದು ಪಂದ್ಯಗಳ ಪೈಕಿ ಎರಡರಲ್ಲಿ ಗೆಲವು ಸಾಧಿಸಿದೆ. ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ.

ಏ.18ರಂದು ಐದು ಬಾರಿ ಚಾಂಪಿಯನ್ ವಿಜೇತ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎಸ್‌ಆರ್‌ಹೆಚ್ ತಮ್ಮ ತವರು ಮೈದಾನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎದುರಿಸಲಿದೆ.