ಮನೆ ರಾಜ್ಯ ಕರಕುಶಲ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆಗೆ ಚಾಲನೆ

ಕರಕುಶಲ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆಗೆ ಚಾಲನೆ

0

ಮೈಸೂರು(Mysuru): ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ‘’ಕರಕುಶಲ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ’ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮಕ್ಕಳ ಪ್ರತಿಭೆಯನ್ನು ಗುರುತಿಸುವುದಕ್ಕೆ ದಸರಾ ಚಿತ್ರಕಲಾ ಪ್ರದರ್ಶನವು ಉತ್ತಮ ವೇದಿಕೆಯಾಗಿದೆ. ಪೋಷಕರು ಹಾಗೂ ಶಿಕ್ಷಕರಿಗೂ ಮಕ್ಕಳ ಚಿತ್ರಕಲಾ ಪ್ರದರ್ಶನವು ಸಂತೋಷನ್ನುಂಟು ಮಾಡಲಿದೆ ಎಂದರು.

ಸುಮಾರು 300ಕ್ಕೂ ಹೆಚ್ಚು ಮಕ್ಕಳ ಭಾಗವಹಿಸಿರುವುದು ಸಂತೋಷದ ವಿಚಾರ. ಬಹಳ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ ಎಂದು ತಿಳಿಸಿದರು.

ಶಾಸಕ ಎಲ್.ನಾಗೇಂದ್ರ ಅವರು ಮಾತನಾಡಿ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

300ಕ್ಕೂ ಹೆಚ್ಚು ಮಂದಿ ಮಕ್ಕಳು ಭಾಗಿ: ಚಿತ್ರಕಲಾ ಸ್ಪರ್ಧೆಗೆ ಸುಮಾರು 300ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. 1-4ರವರೆಗೆ(ಪ್ರಾಣಿ,ಪಕ್ಷಿ,ಪರಿಸರ), 5-7ರವರೆಗೆ(ಮೈಸೂರಿನ ಸುಂದರ ತಾಣಗಳು,ಸ್ಮಾರಕಗಳು, ಸಾಧಕರು),8-10ರವರೆಗೆ(75ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ)ಹೀಗೆ ಮೂರು ವಿಭಾಗದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕರಕುಶಲ ಪ್ರಾತ್ಯಕ್ಷಿಕೆ : ವೇದಿಕೆ ಕಾರ್ಯಕ್ರಮದ ಬಳಿಕ ಕಲಾಮಂದಿರ ಆವರಣದಲ್ಲಿ ಆಯೋಜಿಸಿದ್ದ ಕಿನ್ನಾಳ ಕಲೆ, ಕೌದಿ ಮತ್ತು ಕಸೂತಿ ಕಲೆ, ಕುಂಬಾರಿಕೆ, ಇನ್ಲೆ ಕಲೆ ಚರಕದಿಂದ ನೂಲುವಿಕೆ, ಕೈಮಗ್ಗದ ನೇಕಾರಿಕೆ, ವರ್ಲಿ ಕಲೆ, ಚನ್ನಪಟ್ಟಣ ಗೊಂಬೆ ತಯಾರಿಕೆ, ಬಿದಿರು ಬೆತ್ತದ ಬುಟ್ಟಿ ಹೆಣಿಗೆ, ಮದರಂಗಿ ಕಲೆ, ವ್ಯಂಗ್ಯ ಚಿತ್ರಕಲೆ, ಸೂಕ್ಷö್ಮ ಕಲೆ ಪ್ರದರ್ಶನ ಕರಕುಶಲ ಪ್ರಾತ್ಯಕ್ಷಿಕೆ ಮಳಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು. ಮಳಿಗೆಗಳಿಗೆ ಭೇಟಿ ನೀಡಿ, ಚರಕದಿಂದ ತಯಾರಿಸಿದ 23 ಟವೆಲ್‌ಗಳು ಸೇರಿದಂತೆ ಗೊಂಬೆಗಳು, ಮಣ್ಣಿನ ದೀಪಗಳು, ಬಿದಿರಿನಿಂದ ತಯಾರಿಸಿದ ಕೀ ಬಂಚ್‌ಗಳನ್ನು ಖರೀದಿಸಿ ಸಮಿತಿಯ ಸದಸ್ಯರಿಗೆ ಉಡುಗೊರೆಯಾಗಿ ನೀಡಿದರು.

ಈ ಸಂದರ್ಭ ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಹಿಂದಿನ ಲೇಖನರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ
ಮುಂದಿನ ಲೇಖನಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯ ನಾಡಗೀತೆಗೆ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌