ಮನೆ ಅಪರಾಧ ಹಾವೇರಿ: ಗುಂಡು ಹಾರಿಸಿ ಮಹಿಳೆಯ ಹತ್ಯೆಗೆ ಯತ್ನ

ಹಾವೇರಿ: ಗುಂಡು ಹಾರಿಸಿ ಮಹಿಳೆಯ ಹತ್ಯೆಗೆ ಯತ್ನ

0

ಹಾವೇರಿ(Haveri): ಮನೆ ಮುಂದೆ ಕುಳಿತಿದ್ದ ಮಹಿಳೆ ಮೇಲೆ ಬೈಕ್ ನಲ್ಲಿ ಬಂದ ಮುಸುಕುದಾರಿಗಳು ಗುಂಡು ಹಾರಿಸಿ ಹತ್ಯಗೆ ಯತ್ನಿಸಿರುವ ಘಟನೆ ಶಿಗ್ಗಾವಿಯಲ್ಲಿ ನಡೆದಿದೆ.

ತಾಲೂಕಿನ ಹುಲಗೂರು ಗ್ರಾಮದ ಆಜಾದ ಗಲ್ಲಿಯಲ್ಲಿರುವ ಸಲ್ಮಾ ಎಂಬ ಮಹಿಳೆಯ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಮುಸುಕುಧಾರಿಗಳು ಬಂದೂಕು ತೆಗೆಯುತ್ತಿದ್ದಂತೆ ಮಹಿಳೆ ಮನೆಯೊಳಗೆ ಓಡಿ ಹೋಗಿದ್ದಾರೆ. ಅದೃಷ್ಟವೆಂಬಂತೆ ಆ ಸಮಯದಲ್ಲಿ ವಿದ್ಯುತ್ ಕೂಡ ಹೋಗಿದೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಸುತ್ತಮುತ್ತಲಿನ ಜನರು ಮನೆ ಬಳಿ ಜಮಾಯಿಸಿದ್ದು, ಅಷ್ಟರಲ್ಲಿ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ. ಸಲ್ಮಾರಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು ಮೂವರು ಮಕ್ಕಳಿದ್ದಾರೆ. ಪತಿ ಜೊತೆ ಜಗಳ ಮಾಡಿಕೊಂಡಿದ್ದರಿಂದ ಸಲ್ಮಾ ಎರಡು ವರ್ಷಗಳಿಂದ ಹುಲಗೂರು ಗ್ರಾಮದ ತವರು ಮನೆಯಲ್ಲೇ ವಾಸವಿದ್ದಾರೆ.

ಕರೆಂಟ್ ಹೋಗಿ ಕತ್ತಲಾಗಿದ್ದರಿಂದ ಗುಂಡುಗಳು ಗೋಡೆಗೆ ತಾಗಿವೆ. ಗೋಡೆಯ ಮೇಲೆ ಆರು ಗುಂಡಿನ ಕಲೆಗಳು ಕಂಡುಬಂದಿವೆ.

ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಹಿಂದಿನ ಲೇಖನ3 ಲೋಕಸಭಾ, 7 ವಿಧಾನಸಭಾ ಸ್ಥಾನಗಳಿಗೆ ಜೂನ್‌ 23 ರಂದು ಉಪಚುನಾವಣೆ
ಮುಂದಿನ ಲೇಖನಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನ ಬರ್ಬರ ಹತ್ಯೆ