ನವದೆಹಲಿ : ರಾಷ್ಟ್ರರಾಜಧಾನಿಯಲ್ಲಿ ಹೆಚ್ಚುತ್ತಿರುವ ಬಿಸಿಲು ಹಾಗೂ ಹೀಟ್ವೇವ್ನಿಂದಾಗಿ ದೆಹಲಿ ಶಾಲೆಗಳಲ್ಲಿ ಪ್ರತಿ ಗಂಟೆಗೊಮ್ಮೆ ನೀರಿನ ಬ್ರೇಕ್ ಹಾಗೂ ಬೆಳಗಿನ ಜಾವ ಹೊರಾಂಗಣದಲ್ಲಿ ಪ್ರಾರ್ಥನೆ ಮಾಡುವುದನ್ನು ರದ್ದುಗೊಳಿಸಿದೆ. ವಿದ್ಯಾರ್ಥಿಗಳು ಹೆಚ್ಚಾಗಿ ಬಿಸಿಲಿನಲ್ಲಿರುವುದನ್ನು ತಪ್ಪಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ದೆಹಲಿ ಶಾಲೆಗಳಲ್ಲಿ ಬೆಳಗಿನ ಜಾವ ಹೊರಾಂಗಣದಲ್ಲಿ ಪ್ರಾರ್ಥನೆ ಮಾಡುವುದನ್ನು ರದ್ದುಗೊಳಿಸಿದೆ. ಇದರ ಬದಲಿಗೆ ನೆರಳಿನಲ್ಲಿ ಅಥವಾ ಒಳಾಂಗಣ ಪ್ರದೇಶದಲ್ಲಿ ಪ್ರಾರ್ಥನೆ ಮಾಡಬಹುದು ಎಂದು ತಿಳಿಸಿದೆ.
ಕ್ಲಾಸ್ ನಡೆಯುತ್ತಿರುವ ಸಮಯದಲ್ಲಿ ಮಕ್ಕಳು ಪದೇ ಪದೇ ನೀರು ಕುಡಿಯುವುನ್ನು ಮರೆಯುತ್ತಾರೆ. ಹೀಗಾಗಿ ಮಕ್ಕಳಿಗೆ ನೆನಪಿಸಲು ತರಗತಿಗಳ ಮಧ್ಯೆ ಪ್ರತಿ 45 ರಿಂದ 60 ನಿಮಿಷಗಳಿಗೊಮ್ಮೆ ವಾಟರ್ ಬೆಲ್ ಬಾರಿಸುವುದಂತೆ ಸೂಚಿಸಲಾಗಿದೆ. ಶಾಖ ಸಂಬಂಧಿತ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುವುದು ಮತ್ತು ನಿರ್ಜಲೀಕರಣದ ಅಪಾಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಕ್ಕಳು ಹೆಚ್ಚಿನ ಸಮಯ ಹೊರಾಂಗಣದಲ್ಲಿ ಸಮಯ ಕಳೆಯದಂತೆ ನೋಡಿಕೊಳ್ಳಬೇಕು.
ಜೊತೆಗೆ ವಿದ್ಯಾರ್ಥಿಗಳಿಗೆ ಹೀಟ್ ವೇವ್ ಹಾಗೂ ಅದರಿಂದ ರಕ್ಷಿಸಿಕೊಳ್ಳಲು ಜಾಗೃತಿ ಮೂಡಿಸಬೇಕು. ಅಗತ್ಯವಿರುವಾಗ ತಕ್ಷಣದ ಪ್ರಥಮ ಚಿಕಿತ್ಸೆ ಮತ್ತು ವೈದ್ಯಕೀಯ ಆರೈಕೆಯನ್ನು ನೀಡಬೇಕು ಎಂದು ತಿಳಿಸಿದೆ. ಪೋಷಕರು ತಮ್ಮ ಮಕ್ಕಳನ್ನು ಬಿಸಿ ವಾತಾವರಣಕ್ಕೆ ಸೂಕ್ತವಾದ ಹಗುರವಾದ, ಹತ್ತಿ ಬಟ್ಟೆಯಲ್ಲಿ ಶಾಲೆಗೆ ಕಳುಹಿಸಲು ಸೂಚಿಸಲಾಗಿದೆ.















