ಮನೆ ರಾಜ್ಯ ವರುಣಾದಲ್ಲಿ ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ: ಬಿ.ವೈ ವಿಜಯೇಂದ್ರ

ವರುಣಾದಲ್ಲಿ ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ: ಬಿ.ವೈ ವಿಜಯೇಂದ್ರ

0

ಬೆಂಗಳೂರು:  ಶಿಕಾರಿಪುರ ಕ್ಷೇತ್ರದಲ್ಲಿ ನಾನು ಓಡಾಡುತ್ತಿದ್ದೇನೆ. ವರುಣಾದಲ್ಲಿ ನನ್ನ ಸ್ಪರ್ಧೆ ಬಗ್ಗೆ ವರಿಷ್ಠರು ಹೇಳುತ್ತಾರೆ. ಅದನ್ನು  ಕೇಂದ್ರದ ನಾಯಕತ್ವ ತೀರ್ಮಾನಿಸಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ತಮ್ಮ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಕೂಟದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಶಿಕಾರಿಪುರದಲ್ಲಿ ಒಂದು ಸುತ್ತು ಪ್ರವಾಸ ಮಾಡಿದ್ದೇನೆ. ಮತ್ತೊಂದು ಸುತ್ತು ಪ್ರವಾಸ ಮಾಡುವೆ ಎಂದು ಹೇಳಿದರು.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನು ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ಅವರಿಗೆ ಪಕ್ಷ ಎಲ್ಲವನ್ನೂ ನೀಡಿದೆ. ಅಮಿತ್ ಶಾ ಅವರು ಪ್ರೀತಿಯಿಂದ ಮಾತನಾಡಿಸಿದ್ರು. ಅಮಿತ್ ಶಾ ನಡೆಯಿಂದ ಆನೆ ಬಲ ಬಂದಂತಾಗಿದೆ. ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುತ್ತೇನೆ ಎಂದರು.

ಬಿಎಸ್ ವೈ ಹಿಂದಿನಿಂದಲೂ ಉತ್ಸಾಹದಲ್ಲಿದ್ದಾರೆ . ಬಿಎಸ್ ವೈ ಯಾರ ಜೊತೆ ಮಾತನಾಡಬೇಕೋ ಅವರ ಜೊತೆ ಮಾತನಾಡಿದ್ದಾರೆ. ಬಿಎಸ್ ವೈ ಮತ್ತು ಅಮಿತ್ ಶಾ ಅವರು ನಡುವೆ ರಾಜಕೀಯ ವಿಚಾರ ಚರ್ಚೆಯಾಗಿದೆ. ಈ ಬಾರಿ ಅತಂತ್ರ ಸರ್ಕಾರ ಬರಲು ಬಿಡಲ್ಲ. ಬಿಜೆಪಿ ಸರ್ಕಾರ ಬಹುಮತ ಪಡೆಯುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.

ಹಿಂದಿನ ಲೇಖನಕೇಂದ್ರಿಯ ತನಿಖಾ ಸಂಸ್ಥೆಗಳ ದುರ್ಬಳಕೆ: ಕೇಂದ್ರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು
ಮುಂದಿನ ಲೇಖನಕರ್ನಾಟಕ ವಿಧಾನಸಭೆ ಚುನಾವಣೆ: ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿ ಪತ್ರ