ಸಂಶೋಧನಾ ಫಲಶ್ರುತಿ :
ಆ ರೋಗಿಗಳ ಮೇಲೆ ನಡೆದ ಪ್ರಯೋಗಗಳ ಫಲ :
ಅಗ್ನಿ ಮಾಂದ್ಯಾ ಅಜೀರ್ಣ ವ್ಯಾದಿಯನ್ನು ವಾಸಿ ಮಾಡುವ ಗುಣ :
ಬೆಟ್ಟದ ನೆಲ್ಲಿಕಾಯಿ,ಅಗ್ನಿ ಮಾಂದ್ಯ ನಿವಾರಣೆಗೆ ಬಹಳ ಉಪಯುಕ್ತ ಎಂದು 38 ಮಂದಿ ರೋಗಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ.
ಅತಿಯಾಗಿ ಬೆವರುವುದನ್ನು ತಡೆಯುವ ಗುಣ:
ಕೆಲವರಿಗೆ ಇವರಿಗಿಂತ ಹೆಚ್ಚಾಗಿ ಅಂಗೈ,ಅಂಗಾಲು ಮತ್ತು ಕಂಕುಳ ಬೆವರು ಬರುತ್ತದೆ. ಅಂತಹವರಿಗೆ ಕಾಗದದ ಮೇಲೆ ಬರೆಯಲು, ರಬ್ಬರ್ ಚಪ್ಪಲಿ ಧರಿಸುವುದು ಮತ್ತು ಇತರ ವಸ್ತುಗಳನ್ನು ಹಿಡಿಯಲು ಕಷ್ಟವಾಗುತ್ತದೆ. ಈ ತೊಂದರೆ ಇರುವವರು ಇತರರಿಗೆ ಹಸ್ತಲಾಘವ ಕೊಡಲು ಮುಜುಗರ ಪಡೆಯುತ್ತಾರೆ. ಇಂತಹ ತೊಂದರೆಯನ್ನು ಹೈಪರ್ ಹೈಡ್ರೋಸಿಸ್ ಎಂದು ಕರೆಯುತ್ತಾರೆ.
ಇಂತಹ ತೊಂದರೆ ಇದೆಯೆಂದು ಖಚಿತವಾದ 40 ರೋಗಿಗಳನ್ನು ಆಯ್ಕೆ ಮಾಡಿ, ಕೆಲವು ದಿನಗಳವರೆಗೆ ಬೆಟ್ಟದ ನೆಲ್ಲಿಕಾಯಿಯ ರಸ ಕುಡಿಯಲು ಸೂಚಿಸಿ ನಂತರ ಪರೀಕ್ಷಿಸಿದಾಗ 29 ರೋಗಿಗಳಲ್ಲಿ ಉತ್ತಮ ಫಲಿತಾಂಶ ಕಂಡುಬಂದಿತೆಂದು ವರದಿಯಾಗಿದೆ.
ಆಮ್ಲ ಪಿತ್ತವನ್ನು ವಾಸಿ ಮಾಡುವ ಗುಣ:
ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು, ಪ್ರತಿ ಬಾರಿಗೆ 3-5 ಗ್ರಾಂ ಪ್ರಾಮಾಣದಂತೆ ಆಮ್ಲ ಪಿತ್ತವಿದೆಯೆಂದು ಖಚಿತವಾದ ರೋಗಿಗಳಿಗೆ 7-14 ವಾರಗಳವರೆಗೆ ಸೇವಿಸಲು ಕೊಟ್ಟಾಗ ಉತ್ತಮ ಫಲಿತಾಂಶ ಕಂಡುಬಂದಿತೆಂದು ವರದಿಯಾಗಿದೆ.
ಇದೇ ಗುಣ 5 ಗ್ರಾಂ ಬೆಟ್ಟದ ನೆಲ್ಲಿಕಾಯಿ ಚೂರ್ಣವನ್ನು 80 ಮಿ.ಲೀ ನೀರಿಗೆ ಮಿಶ್ರಣ ಮಾಡಿ ಕುದಿಸಿ 20 ಮಿ.ಲೀ. ಕಷಾಯ ಉಳಿದ ನಂತರ, ಒಟ್ಟು ಕಷಾಯವನ್ನು ಎರಡು ಸಮ ಭಾಗ ಮಾಡಿ ದಿನಕ್ಕೆ ಎರಡು ಬಾರಿಯಂತೆ ಮೂರು ದಿನಗಳವರೆಗೆ ಸೇವಿಸಿದಾಗಲೂ ಕಂಡುಬಂದಿದೆ .
ಕರುಳಿನ ಹುಣ್ಣನ್ನು ವಾಸಿ ಮಾಡುವ ಗುಣ
ಬೆಟ್ಟದ ನೆಲ್ಲಿಕಾಯಿಯ ಚೂರ್ಣವನ್ನು,ಬೆಟ್ಟದ ನೆಲ್ಲಿಕಾಯಿಯ ರಸದಲ್ಲಿ 21 ಬಾರಿ ಭಾವನೆ ಕೊಟ್ಟು ಒಣಗಿಸಿ ತಯಾರಿಸಿದ ಚೂರ್ಣವನ್ನು ಆಮ್ಲಕ್ಕಿ ರಸಾಯನ ಎಂದು ಕರೆಯುತ್ತಾರೆ. ಹೀಗೆ ತಯಾರಿಸಿದ ಆಮ್ಲಕ್ಕಿ, ರಸಾಯನದ ಮೂರು ಗ್ರಾಂ ಚೂರ್ಣವನ್ನು 30 ಮಂದಿ ಕರುಳಿನಲ್ಲಿ ಹುಣ್ಣಿಯಿದೆಯೆಂದು ಖಚಿತವಾದ ರೋಗಿಗಳಿಗೆ, ದಿನಕ್ಕೆ ಮೂರು ಬಾರಿಯಂತೆ ಮೂರು ತಿಂಗಳು ಸೇವಿಸಲು ಕೊಡಲಾಯಿತು.ಅವಧಿಯ ನಂತರ ರೋಗಿಗಳನ್ನು ಪರೀಕ್ಷಿಸಿದಾಗ,ಆಮ್ಲಕ್ಕಿ ರಸಾಯನಕ್ಕೆ ಕರುಳಿನ ಹುಣ್ಣನ್ನು ವಾಸಿ ಮಾಡುವ ಗುಣವಿದೆಯೆಂದು ವರದಿಯಾಗಿದೆ.
ಬುಟನಾಲ್ ದ್ರಾವಣ ಉಪಯೋಗಿಸಿ ಬೆಟ್ಟದ ನೆಲ್ಲಿಕಾಯಿಯಿಂದ ತಯಾರಿಸಿದ ಸತ್ವವವನ್ನು ನೀರಿನಲ್ಲಿ ಕರಗಿಸಲಾಯಿತು. ನೀರಿನಲ್ಲಿ ಕರಗಿದಂತಹ ಸತ್ವವನ್ನು ಬೇರ್ಪಡಿಸಿ ಒಣಗಿಸಲಾಯಿತು.ಹೀಗೆ ತಯಾರಿಸಿದ ಸತ್ವದ ಪುಡಿಯನ್ನು ಪ್ರತಿ ಬಾರಿಗೆ 3 ಗ್ರಾಂ ನಂತೆ ದಿನಕ್ಕೆ ಎರಡು ಬಾರಿ ಸೇವಿಸಲು ಕೊಡಲಾಯಿತು 15 ದಿನಗಳ ಚಿಕಿತ್ಸೆಯನ್ನು ಮುಂದುವರೆಸಿದ ನಂತರ ಪರೀಕ್ಷಿಸಿದಾಗ ಸತ್ವಕ್ಕೆ ಕರುಳಿನ ಹುಣ್ಣನ್ನು ವಾಸಿ ಮಾಡುವ ಗುಣವಿದೆ.