ಮನೆ ತಂತ್ರಜ್ಞಾನ ನಿಮ್ಮ ವಾಟ್ಸ್​ ಆ್ಯಪ್ ಮೆಸೇಜ್ ಅನ್ನು ಬೇರೆಯವರು ಕದ್ದು ಓದುತ್ತಿದ್ದಾರೆಂದು ತಿಳಿಯುವುದು ಹೇಗೆ?

ನಿಮ್ಮ ವಾಟ್ಸ್​ ಆ್ಯಪ್ ಮೆಸೇಜ್ ಅನ್ನು ಬೇರೆಯವರು ಕದ್ದು ಓದುತ್ತಿದ್ದಾರೆಂದು ತಿಳಿಯುವುದು ಹೇಗೆ?

0

ಮೆಟಾ ಒಡೆತನದ ವಾಟ್ಸ್ ​ಆ್ಯಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್ ​ಗಳನ್ನು ಪರಿಚಯಿಸಿ ಪ್ರಸಿದ್ಧಿ ಪಡೆದುಕೊಂಡಿದೆ.

Join Our Whatsapp Group

ಇದರ ನಡುವೆ ಬಳಕೆದಾರರ ಖಾತೆ ಸುರಕ್ಷತೆಗೆ ಕೆಲವು ಫೀಚರ್ಸ್‌ ಇದ್ದರೂ ಕೆಲವೊಮ್ಮೆ ವಾಟ್ಸ್​ ಆ್ಯಪ್​​ ಹ್ಯಾಕ್‌ ಆಗುವ ಸಾಧ್ಯತೆಗಳು ಇರುತ್ತವೆ. ಅನೇಕ ಬಾರಿ ಬಳಕೆದಾರರಿಗೆ ಗೊತ್ತಿಲ್ಲದೇ ಅವರ ವಾಟ್ಸ್​ಆ್ಯಪ್​​ ಚಾಟ್ ಅನ್ನು ಬೇರೆಯವರು ಜಾಲಾಡುವ ಸಾಧ್ಯತೆಗಳಿವೆ.

ಕಂಪ್ಯೂಟರ್ ​ಗಳಲ್ಲಿಯೂ ಈಗೀಗ ವಾಟ್ಸ್​ ಆ್ಯಪ್​​ ಬಳಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ನಮ್ಮ ಖಾತೆ ಎಲ್ಲಿ ಲಾಗಿನ್ ಆಗಿರುತ್ತದೆ ಎಂಬುದು ಅರಿವಿಗೆ ಬರುವುದಿಲ್ಲ.

ಮೊದಲಿಗೆ ನಿಮ್ಮ ವಾಟ್ಸ್​ಆ್ಯಪ್​​ ಅಪ್ಲಿಕೇಶನ್ ಅನ್ನು ತೆರೆಯಿರಿ. ನಂತರ ಬಲ ಭಾಗದಲ್ಲಿ ಕಾಣಿಸುವ ಮೂರು ಡಾಟ್‌ ಸೆಲೆಕ್ಟ್ ಮಾಡಿರಿ. ಬಳಿಕ ಅಲ್ಲಿ ಕಾಣುಸಿವ ವಾಟ್ಸ್​ ಆ್ಯಪ್​​ ವೆಬ್ / ಲಿಂಕ್‌ ಡಿವೈಸ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಲ್ಯಾಪ್‌ ಟಾಪ್ ಅಥವಾ ಡೆಸ್ಕ್‌ ಟಾಪ್‌ ನಲ್ಲಿ ವಾಟ್ಸ್​ಆ್ಯಪ್​​ ತೆರೆಯದಿದ್ದರೂ ಲಿಂಕ್ ಆಗಿದೆ ಎನ್ನುವುದನ್ನು ತೋರಿಸುತ್ತಿದ್ದರೆ ನಿಮ್ಮ ವಾಟ್ಸ್​ ಆ್ಯಪ್​​ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂದರ್ಥ.

ಹಿಂದಿನ ಲೇಖನಹುಣಸೂರು: ಹೊಲದಲ್ಲಿ ಬೆಳೆದಿದ್ದ ಶುಂಠಿ ಕದ್ದೊಯ್ದ ಕಳ್ಳರು
ಮುಂದಿನ ಲೇಖನಕಾಂಗ್ರೆಸ್ ವರ್ಗಾವಣೆ ದಂಧೆ ಮೂಲಕ ಹಣ ಸಂಗ್ರಹಿಸಿ ಹೈಕಮಾಂಡ್ ​ಗೆ ಕಳಿಸಲಿದೆ: ಆರ್.ಅಶೋಕ್ ಆರೋಪ