ಮನೆ ತಂತ್ರಜ್ಞಾನ ಸಣ್ಣ ಉದ್ದಿಮೆಗೆ ‘ಎಚ್‌ ಪಿ ಸ್ಮಾರ್ಟ್‌ ಟ್ಯಾಂಕ್‌ ಪ್ರಿಂಟರ್ಸ್‌’ ಸೂಕ್ತ

ಸಣ್ಣ ಉದ್ದಿಮೆಗೆ ‘ಎಚ್‌ ಪಿ ಸ್ಮಾರ್ಟ್‌ ಟ್ಯಾಂಕ್‌ ಪ್ರಿಂಟರ್ಸ್‌’ ಸೂಕ್ತ

0

ಬೆಂಗಳೂರು(Bengaluru): ಎಚ್‌ ಪಿ ಇಂಡಿಯಾ ಕಂಪನಿಯು ಮನೆಯಲ್ಲಿ ಬಳಸಬಹುದಾದ ಮತ್ತು ಸಣ್ಣ ಉದ್ದಿಮೆಗಳಿಗೆ ಸೂಕ್ತವಾದ ಸ್ಮಾರ್ಟ್‌ ಟ್ಯಾಂಕ್‌ ಪ್ರಿಂಟರ್‌’ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಪ್ರಿಂಟ್‌, ಸ್ಕ್ಯಾನ್‌, ಕಾಪಿ ಮತ್ತು ಫ್ಯಾಕ್ಸ್‌ ಆಯ್ಕೆಗಳನ್ನು ಇದು ಒಳಗೊಂಡಿದೆ. ಐ.ಡಿ. ಕಾರ್ಡ್‌’ಗಳನ್ನು ಪ್ರಿಂಟ್‌ ಮಾಡಲು ಪ್ರತ್ಯೇಕವಾದ ಐ.ಡಿ. ಕಾಪಿ ಬಟನ್‌ ಹೊಂದಿದೆ. ಸ್ಮಾರ್ಟ್‌ ಆ್ಯಪ್‌ ಮತ್ತು ಸ್ಮಾರ್ಟ್‌ ಅಡ್ವಾನ್ಸ್‌ ಮೂಲಕ ಪ್ರಿಂಟರ್‌ ಸಂಪರ್ಕಿಸುವುದನ್ನು ಸುಲಭಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಎಚ್‌ ಪಿಯ ಹೊಸ ಇಂಕ್‌ ಟ್ಯಾಂಕ್‌ ಪ್ರಿಂಟರ್‌’ಗಳಲ್ಲಿ ಭರ್ತಿ ಮಾಡಿರುವ ಇಂಕ್‌’ಗಳ ಮೂಲಕ 18 ಸಾವಿರ ಪೇಜ್‌’ವರೆಗೆ ಬ್ಲಾಕ್‌ ಮತ್ತು 6 ಸಾವಿರ ಪೇಜ್‌’ವರೆಗೆ ಕಲರ್‌ ಪ್ರಿಂಟ್‌ ಮಾಡಬಹುದು.

ಈ ಪ್ರಿಂಟರ್‌’ಗಳು ಆಟೊ ಆನ್‌/ಆಫ್‌ ವ್ಯವಸ್ಥೆ ಹೊಂದಿರುವುದರಿಂದ ವಿದ್ಯುತ್ ಬಳಕೆ ಕಡಿಮೆ ಆಗಲಿದೆ. ಸೈಬರ್ ದಾಳಿಯನ್ನು ತಡೆಯುವ ಸೆಲ್ಫ್‌ ಹೀಲಿಂಗ್‌ ವೈ–ಫೈ ವ್ಯವಸ್ಥೆಯನ್ನು ಇದು ಹೊಂದಿದೆ ಎಂದು ಕಂಪನಿಯು ಹೇಳಿದೆ.

ಇಂದಿನ ಹೈಬ್ರಿಡ್‌ ಜಗತ್ತಿನಲ್ಲಿ ಭಾರತೀಯರು ಮನೆಗೆ ಮತ್ತು ಸಣ್ಣ ಉದ್ದಿಮೆಗೆ ಬಳಸಲು, ಸುಲಭ ಮತ್ತು ಸ್ಮಾರ್ಟ್‌ ಆಗಿರುವ ಕಡಿಮೆ ಬೆಲೆಯ ಪ್ರಿಂಟರ್‌’ಗಳನ್ನು ಬಯಸುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು HP Smart Tank ಪ್ರಿಂಟರ್‌’ಗಳನ್ನು ಬಿಡುಗಡೆ ಮಾಡಲಾಗಿದೆ.

ಬೆಲೆ: HP Smart Tank 580-₹18,848. HP Smart Tank 520-₹15,980. HP Smart Tank 210-₹13,326

ಹಿಂದಿನ ಲೇಖನಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಸೇನೆ ಆಸ್ಪತ್ರೆ ಬಳಿ ಉಗ್ರರ ದಾಳಿ: ಇಬ್ಬರ ಸಾವು
ಮುಂದಿನ ಲೇಖನಶಿವಮೊಗ್ಗ: ಹೊತ್ತಿ ಉರಿದ ಕಾರು,  ಪೊಲೀಸರಿಂದ ಮಾಲೀಕರ ಹುಡುಕಾಟ