ಮನೆ ರಾಜಕೀಯ ಹಿಂದಿ ಭಾಷೆಯ ಹೇರಿಕೆ ಖಂಡಿಸುತ್ತೇನೆ: ಸಿದ್ದರಾಮಯ್ಯ

ಹಿಂದಿ ಭಾಷೆಯ ಹೇರಿಕೆ ಖಂಡಿಸುತ್ತೇನೆ: ಸಿದ್ದರಾಮಯ್ಯ

0

ಬೆಂಗಳೂರು(Bengaluru): ಕೇಂದ್ರದ ಬಿಜೆಪಿ ಸರ್ಕಾರ ಹಿಂದಿ ದಿವಸ ಆಚರಿಸಿ ಹಿಂದಿ ಭಾಷೆಯ ಹೆಸರಲ್ಲಿ ಆರ್‌ಎಸ್‌ಎಸ್ ಹಿಂದುತ್ವ ಹೇರುವುದನ್ನು ನಾನು ಖಂಡಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಯಾವ ಭಾಷೆಯ ಕಲಿಕೆಯನ್ನೂ ವಿರೋಧಿಸುವುದಿಲ್ಲ, ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ ಎಂದು ಉಲ್ಲೇಖಿಸಿದ್ದಾರೆ.

ಭಾಷಾ ಹೇರಿಕೆ ಆರ್’ಎಸ್’ಎಸ್’ನ ಕುತಂತ್ರ : ಹರಿಪ್ರಸಾದ್

ನಾನು ಸದಾ ಭಾಷೆ ಕಲಿಯುವ ವಿದ್ಯಾರ್ಥಿ. ಆರು ಭಾಷೆ ಮಾತನಾಡುತ್ತೇನೆ. ಹಲವು ಭಾಷೆಗಳನ್ನ ಅರ್ಥ ಮಾಡಿಕೊಳ್ಳುತ್ತೇನೆ. ಹಿಂದಿ ಸೇರಿದಂತೆ ಎಲ್ಲ ಭಾಷೆಯ ಮೇಲೆ ಗೌರವ ಇದೆ. ಹಾಗೇ ಹಿಂದಿ ಹೇರಿಕೆಯ ವಿರುದ್ಧ ನನ್ನ ಧಿಕ್ಕಾರವಿದೆ. ಭಾಷೆ ಹೇರಿಕೆಯ ಹಿಂದಿನ ಆರ್‌ಎಸ್‌ಎಸ್‌ನ ಕುತಂತ್ರ, ಸಾವಿರಾರು ಭಾಷೆಗಳಿಗೆ ಜನ್ಮಕೊಟ್ಟ ಈ ನೆಲದಲ್ಲಿ ನಡೆಯುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಹಿಂದಿನ ಲೇಖನಜಮ್ಮು- ಕಾಶ್ಮೀರ: ಕಂದಕಕ್ಕೆ ಉರುಳಿದ ಬಸ್ – 9 ಮಂದಿ ಸಾವು
ಮುಂದಿನ ಲೇಖನಪಿಎಸ್‌ಐ ನೇಮಕಾತಿ ಹಗರಣ: ನಾಲ್ವರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ಎಸಿಎಂಎಂ ನ್ಯಾಯಾಲಯ