ಮನೆ ಕ್ರೀಡೆ ಭಾರತ – ನ್ಯೂಜಿಲೆಂಡ್‌ ಏಕದಿನ ಪಂದ್ಯ: ಶತಕ ಸಿಡಿಸಿದ ರೋಹಿತ್ ಶರ್ಮಾ, ಶುಭಮನ್ ಗಿಲ್

ಭಾರತ – ನ್ಯೂಜಿಲೆಂಡ್‌ ಏಕದಿನ ಪಂದ್ಯ: ಶತಕ ಸಿಡಿಸಿದ ರೋಹಿತ್ ಶರ್ಮಾ, ಶುಭಮನ್ ಗಿಲ್

0

ಇಂದೋರ್: ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆಹಾಕಿದ್ದು, ನ್ಯೂಜಿಲೆಂಡ್’ಗೆ ಕಠಿಣ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಆರಂಭಿಕ ಬ್ಯಾಟರ್‌’ಗಳಾದ ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಸಿಡಿಸಿದ ಬಿರುಸಿನ ಶತಕಗಳು ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸ್ಫೋಟಕ ಅರ್ಧಶತಕದ ಬಲ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಗಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ರೋಹಿತ್‌ ಮತ್ತು ಗಿಲ್‌ ಮೊದಲ ವಿಕೆಟ್‌ಗೆ 212ರನ್ ಕಲೆಹಾಕಿದರು.

ಇವರಿಬ್ಬರ ಸೊಗಸಾದ ಬ್ಯಾಟಿಂಗ್‌ ಬಲದಿಂದ ಭಾರತ ತಂಡ 30 ಓವರ್‌ಗಳಲ್ಲಿಯೇ 243ರನ್‌ ಕಲೆಹಾಕಿತ್ತು.

ರೋಹಿತ್‌, 85 ಎಸೆತಗಳಲ್ಲಿ 6 ಬೌಂಡರಿ ಮತ್ತು 9 ಸಿಕ್ಸರ್‌ ಸಹಿತ 101 ರನ್‌ ಗಳಿಸಿ ಔಟಾದರು. ಗಿಲ್‌, 78 ಎಸೆತಗಳಲ್ಲಿ 13 ಬೌಂಡರಿ ಮತ್ತು 5 ಸಿಕ್ಸರ್‌ ಸಹಿತ 112 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ವಿರಾಟ್‌ ಕೊಹ್ಲಿ (36) ಅಲ್ಪ ಕಾಣಿಕೆ ನೀಡಿದರು. ಆದರೆ, ಇಶಾನ್‌ ಕಿಶನ್‌ (17), ಸೂರ್ಯಕುಮಾರ್‌ ಯಾದವ್‌ (14) ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ, 400ಕ್ಕಿಂತ ಹೆಚ್ಚು ರನ್‌ ಗಳಿಸುವ ಅವಕಾಶ ಅಲ್ಪದರಲ್ಲೇ ತಪ್ಪಿತು.

ಆದಾಗ್ಯೂ ಕೆಳ ಕ್ರಮಾಂಕದ ಬ್ಯಾಟರ್‌’ಗಳೊಂದಿಗೆ ಬಿರುಸಿನ ಆಟವಾಡಿದ ಹಾರ್ದಿಕ್‌ ಪಾಂಡ್ಯ ತಂಡದ ಮೊತ್ತ 380ರ ಗಡಿ ದಾಟಲು ನೆರವಾದರು. 38 ಎಸೆತಗಳನ್ನು ಎದುರಿಸಿದ ಪಾಂಡ್ಯ, ಏಕದಿನ ಕ್ರಿಕೆಟ್‌ನಲ್ಲಿ 9ನೇ ಅರ್ಧಶತಕ ಪೂರೈಸಿ ಔಟಾದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 50 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್‌ಗಳನ್ನು ಕಳೆದುಕೊಂಡು 385 ರನ್ ಕೆಲಹಾಕಿತು.

ಹಿಂದಿನ ಲೇಖನಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಹೋರಾಟಕ್ಕೆ ಪ್ರತಿಫಲ: ಪರವಾನಿಗೆ ಇಲ್ಲದೇ ಸಂಚರಿಸುತ್ತಿದ್ದ ಸೆಂಟ್ ಲಾರೆನ್ಸ್ ವಿದ್ಯಾಸಂಸ್ಥೆಯ ಬಸ್ ವಶ
ಮುಂದಿನ ಲೇಖನಬೆಂಬಲ ಬೆಲೆಯಲ್ಲಿ ರಾಗಿ ಮತ್ತು ಭತ್ತ ಖರೀದಿಗೆ ಚಾಲನೆ: ಸಚಿವ ಎಸ್.ಟಿ.ಸೋಮಶೇಖರ್