ಬೆಂಗಳೂರು : ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ಗಾಗಿ 7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ಗೆಲ್ಲಿಸಿಕೊಂಡು ಬರದಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂತ ಕೆಪಿಸಿಸಿ ಸಭೆಯಲ್ಲಿ ಡಿಕೆ ಶಿವಕುಮಾರ್, ಸುರ್ಜೇವಾಲಾ ಅವರ ಎದುರಲ್ಲೇ ಓಪನ್ ಆಗಿ ಹೇಳಿದ್ದೆ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ಟಿಕೆಟ್ ಕೊಡದಿದ್ದಕ್ಕೆ ಅಸಮಾಧಾನ ಇದ್ದದ್ದು ನಿಜ, ಆ ನಂತರ ಎಲ್ಲವೂ ಸರಿಹೋಗಿದೆ. ಜಬ್ಬಾರ್ ಜೊತೆಗೆ 7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ಆದ್ರೆ ಜಬ್ಬಾರ್ಗೆ ಟಿಕೆಟ್ ಕೊಡಿ ಅಂತ ಕೇಳಲಿಲ್ಲ. ಯಾವುದೇ ಮುಚ್ಚುಮರೆ ಮಾಡಿಲ್ಲ. ಓಪನ್ ಆಗಿ ಕೆಪಿಸಿಸಿ ಸಭೆಯಲ್ಲೇ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.
ದಾವಣಗೆರೆ ಟಿಕೆಟ್ ಬಗ್ಗೆ ಓಪನ್ ಆಗಿ ನಾನು ಕೆಪಿಸಿಸಿ ಸಭೆಯಲ್ಲಿ ಡಿಕೆ ಶಿವಕುಮಾರ್, ಸುರ್ಜೇವಾಲಾ ಅವರ ಮುಂದೆಯೇ ಹೇಳಿದ್ದೆ. ಜಬ್ಬಾರ್ಗೆ ಟಿಕೆಟ್ ಕೊಡಿ ಅನ್ನಲಿಲ್ಲ, ಏಕೆಂದ್ರೆ ಜಬ್ಬಾರ್ ಎಂಎಲ್ಸಿ ಇದ್ದಾರೆ, ಅವರಿಗೆ ಟಿಕೆಟ್ ಕೇಳಿದ್ದು ತಪ್ಪು ಅಂತ ಗೊತ್ತಾಯ್ತು. ಜಬ್ಬಾರ್ ಬದಲು 7 ಮಂದಿ ಮುಸ್ಲೀಮರಲ್ಲಿ ಯಾರಿಗಾದ್ರೂ ಟಿಕೆಟ್ ಕೊಡಿ ಅಂದಿದ್ದೆ. ನಾನು ಗೆಲ್ಲಿಸಿಕೊಂಡು ಬರದಿದ್ರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂದಿದ್ದೆ. ಆದ್ರೂ ಟಿಕೆಟ್ ಕೊಡಲಿಲ್ಲ. ಅದಕ್ಕೆ ಅಸಮಾಧಾನ ಇದ್ದಿದ್ದು ನಿಜ, ಆಮೇಲೆ ಎಲ್ಲವೂ ಸರಿ ಆಗಿದೆ ಎಂದರು.
ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಬ್ಬಾರ್ ರಾಜೀನಾಮೆ ಕೊಟ್ಟಾಗ ನಾನಿರಲಿಲ್ಲ. ನಸೀರ್ ಅಹ್ಮದ್ಗೆ ಡ್ರಾಪ್ ಮಾಡ್ತೀನಿ ಅಂದಿದ್ದಾರೆ ಏನು ಕಾರಣ ಗೊತ್ತಿಲ್ಲ. ದಾವಣೆಗೆರೆಗೆ ಹೋಗಿಲ್ಲ ಅಂತ ವಿಷಯ ತೆಗೆದಿದ್ದಾರೆ, ಆದ್ರೆ ಯಾರಾದ್ರೂ ಹೆಸರು ಹೇಳಿದ್ದಾರಾ? ಸ್ಥಳೀಯ ಮುಸ್ಲಿಮರಲ್ಲಿ ಅಸಮಾಧಾನ ಇದ್ದಿದ್ದು ನಿಜ. ಆಮೇಲೆ ಸರಿ ಹೋಗಿದ್ದಾರೆ, 100% ಒಳ್ಳೆ ಲೀಡಲ್ಲಿ ಗೆಲ್ತೀವಿ ದಾವಣೆಗೆರೆ, ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಜನಗಳ ಮಧ್ಯೆ ಇರುವವನು, ನಾನು ಯಾವತ್ತೂ ಲೀಡರ್ ಆಗೋದಕ್ಕೆ ಹೊರಟಿಲ್ಲ. ನಾನೇ ಲೀಡರ್ ಅಂತಲೂ ಹೇಳಿಕೊಂಡಿಲ್ಲ. ನಾನು ಜನ ಸೇವಕ ಅಷ್ಟೇ ಎಂದರು. ಕಾಂಗ್ರೆಸ್ ಶಾಸಕರ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲರಿಗೂ ಮಂತ್ರಿಯಾಗುವ ಆಸೆ ಇರೋದು ಸಹಜ. ನನಗೂ ಆಸೆಯಿಲ್ವಾ? ಎಲ್ಲರಿಗೂ ಆಸೆ ಇರೋದು ಸಹಜ. ನನ್ನ ಕೆಲಸ ನಾನು ನಿಭಾಯಿಸಿದ್ದೇನೆ.
ದಾವಣಗೆರೆಗೆ ಹೋಗಿ ರೋಡ್ ಶೋ ನಡೆಸಿ, ಸುದ್ದಿಗೋಷ್ಠಿ ಮಾಡಿದ್ದೇನೆ. ಮಲ್ಲಿಕಾರ್ಜುನ ಮನೆಯಲ್ಲಿ ಊಟ ಕೂಡ ಮಾಡಿದೆ, ಅಗತ್ಯಬಿದ್ರೆ ಬಾಗಲಕೋಟೆಗೂ ಹೋಗ್ತೀನಿ ಅಂತ ಹೇಳಿದ್ದೆ. ನಸೀರ್ ಅಹಮದ್ಗೆ ಬಾಗಲಕೋಟೆ ಜವಾಬ್ದಾರಿ ಕೊಟ್ಟಿದ್ದರು, ಬಾಗಲಕೋಟೆಯಲ್ಲಿ 10 ದಿನ ನಸೀರ್ ಕೆಲಸ ಮಾಡಿದ್ದಾರೆ. ಆರೋಪ ಮಾಡುವುದಾದರೆ ಹೆಸರು ಹೇಳಬೇಕು ತಾನೇ? ಅಂತ ಪ್ರಶ್ನೆ ಮಾಡಿದ್ದಾರೆ.
ನನಗೆ ಹೈಕಮಾಂಡ್ ನಿಂದ ಸ್ಟಾರ್ ಕ್ಯಾಂಪೇನರ್ ಆಗಿ ಕೇರಳ ಜವಾಬ್ದಾರಿ ಕೊಟ್ಟಿದ್ರು. ಏ.7 ರ ತನಕ ಕೇರಳದಲ್ಲಿ ಇರಬೇಕಿತ್ತು, ಆದ್ರೆ ಸಿಎಂ ಸೂಚನೆ ಮೇರೆಗೆ 5ನೇ ತಾರೀಖಿಗೆ ಬಂದೆ. ಪ್ರಚಾರದಲ್ಲಿ ಭಾಗಿಯಾಗಿದ್ದೇನೆ, ಎಲ್ಲರೂ ಅವರವರ ಪ್ರಯತ್ನ ಮಾಡಿದ್ದಾರೆ. ಈಗ ಸಿಎಂ ಕರೆದಿದ್ದಾರೆ. ಯಾವ ಕಾರಣಕ್ಕೆ ಅಂತ ಕೇಳ್ತೇನೆ ಎಂದು ತಿಳಿಸಿದ್ದಾರೆ.















