ಮನೆ ಆರೋಗ್ಯ ನಿಂಬೆಹಣ್ಣಿಗಿಂತಲೂ ಅದರ ಸಿಪ್ಪೆಯಿಂದಲೇ ದುಪ್ಪಟ್ಟು ಪ್ರಯೋಜನ

ನಿಂಬೆಹಣ್ಣಿಗಿಂತಲೂ ಅದರ ಸಿಪ್ಪೆಯಿಂದಲೇ ದುಪ್ಪಟ್ಟು ಪ್ರಯೋಜನ

0

ನಮಗೆಲ್ಲಾ ಗೊತ್ತೇ ಇದೆ, ಕೊರೊನಾ ವೈರಸ್ ಕಾಣಿಸಿಕೊಂಡ ಬಳಿಕ, ಸಿಟ್ರಿಸ್ ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿ ಬಿಟ್ಟಿತು! ಅದರಲ್ಲೂ ವಿಟಮಿನ್ ಸಿ ಅಂಶ ಇರುವ ಹಣ್ಣುಗಳಿಗೆ ಅಂತೂ ಎಲ್ಲಿಲ್ಲದ ಬೇಡಿಕೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ನಿಂಬೆ ಹಣ್ಣು.

ಪ್ರಮುಖವಾಗಿ ಇದರಲ್ಲಿ ವಿಟಮಿನ್ ಸಿ ಅಂಶದ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ, ಇದೊಂದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಒಂದು ಆಹಾರ ಪದಾರ್ಥ ಎಂದು ಪರಿಗಣಿಸಲಾಗಿದೆ.

• ನಿಮಗೆ ಗೊತ್ತಿರಲಿ, ಕೇವಲ ನಿಂಬೆ ಹಣ್ಣು ಮಾತ್ರವಲ್ಲ, ನಿಂಬೆ ಹಣ್ಣಿನ ರಸ ಹಿಂಡಿದ ಬಳಿಕ ಸಿಗುವ ಇದರ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿರುತ್ತದೆ.

• ಹೌದು ಹೆಚ್ಚಿನವರಿಗೆ ಈ ನಿಂಬೆ ಹಣ್ಣಿನ ಸಿಪ್ಪೆಯ ಬಗ್ಗೆ ಮಾಹಿತಿ ಇಲ್ಲ! ನಿಂಬೆ ಹಣ್ಣಿನಿಂದ ರಸ ಹಿಂಡಿದ ಬಳಿಕ ಸಿಪ್ಪೆಯನ್ನು ಕಸದ ಬುಟ್ಟಿಗೆ ಬಿಸಾಡಿ ಬಿಡುತ್ತೇವೆ. ಆದರೆ ಇನ್ನು ಮುಂದೆ ಹೀಗೆ ಬಿಸಾಡುವ ಮುನ್ನ ಸ್ವಲ್ಪ ಆಲೋಚಿಸಿ! ಯಾಕೆಂದ್ರೆ ಇದರಿಂದ ಆರೋಗ್ಯಕ್ಕೆ ಸಾಕಷ್ಟು ಆರೋಗ್ಯ ಕಾರಿ ಪ್ರಯೋಜನಗಳಿವೆ…

ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಕಂಡು ಬರುವ ಆಂಟಿಆಕ್ಸಿಡೆಂಟ್ ಅಂಶಗಳು

ಪ್ರಮುಖವಾಗಿ ನಿಂಬೆಹಣ್ಣಿನ ಸಿಪ್ಪೆಯಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಕಂಡು ಬರುವುದರಿಂದ, ದೇಹದಲ್ಲಿ ಕಂಡುಬರುವ ಸೋಂಕುಗಳ ವಿರುದ್ಧ ಹೋರಾಡುವುದು ಮಾತ್ರವಲ್ಲದೆ, ದೇಹದಿಂದ ವಿಷಕಾರಿ ತ್ಯಾಜ್ಯಗಳನ್ನು ಹೊರಹಾಕಿ, ಉರಿಯೂತಕ್ಕೆ ಕಾರಣವಾಗುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುತ್ತದೆ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತಾ ಹೆಚ್ಚಾಗುತ್ತದೆ.

ಕ್ಯಾನ್ಸರ್ ಜೀವಕೋಶಗಳನ್ನು ನಾಶಪಡಿಸುವ ಗುಣವಿದೆ

ಅಧ್ಯಾಯನದ ವರದಿಯ ಪ್ರಕಾರ, ಈ ಹಣ್ಣಿನ ಸಿಪ್ಪೆಯಲ್ಲಿ ದೇಹದಲ್ಲಿ ಕಂಡು ಬರುವ ಕ್ಯಾನ್ಸರ್ ಜೀವ ಕೋಶಗಳನ್ನು ನಿರ್ಮೂಲನೆ ಮಾಡುವ ಎಲ್ಲಾ ಗುಣಲಕ್ಷಣಗಳು ಕೂಡ ಕಂಡುಬರುತ್ತದೆಯಂತೆ! ಹೀಗಾಗಿ ಇದರ ಸಂಪೂರ್ಣ ಪ್ರಯೋಜನಗಳನ್ನು ಪಡೆದು ಕೊಳ್ಳಬೇಕು ಎಂದರೆ ನಿಂಬೆ ಹಣ್ಣಿನ ಸಿಪ್ಪೆಯನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಬಳಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು

ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ ಇದ್ದವರಿಗೆ

• ಮೊದಲೇ ಹೇಳಿದ ಹಾಗೆ ನಿಂಬೆ ಸಿಪ್ಪೆಯಲ್ಲಿ ವಿಟಮಿನ್ ಸಿ ಅಂಶ ಸಮೃದ್ಧವಾಗಿರುವುದರ ಜೊತೆಗೆ ಆಂಟಿಆಕ್ಸಿಡೆಂಟ್ ಪ್ರಮಾಣ ಕೂಡ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ.

• ಇವು ದೇಹದಲ್ಲಿ ಕಂಡು ಬರುವ ಉರಿಯೂತವನ್ನು ದೂರಮಾಡುವುದು ಮಾತ್ರವಲ್ಲದೆ, ಫ್ರೀ ರ್ಯಾಡಿಕಲ್ ನಿಂದಾಗಿ ರಕ್ತನಾಳಗಳಿಗೆ ಆಗುವ ಹಾನಿ ತಪ್ಪಿಸುವುದು. ಇದರಂದ ದೇಹದ ರಕ್ತನಾಳದಲ್ಲಿ ರಕ್ತಪರಿಚಲನೆ ಸರಿಯಾಗಿ ನಡೆದು ಪಾರ್ಶ್ವವಾಯು ಹಾಗೂ ಇತರ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ದೂರವಾಗುವುದು.

ಮಧುಮೇಹ ನಿಯಂತ್ರಣಕ್ಕೆ

ಪ್ರಮುಖವಾಗಿ ನಿಂಬೆಹಣ್ಣಿನ ಸಿಪ್ಪೆಯಲ್ಲಿ ಪಾಲಿಫಿನಾಲ್ ಅಂಶದ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವು ಹೊಟ್ಟೆಯ ಭಾಗದ ಬೊಜ್ಜಿನ ಅಂಶವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ನೋಡಿಕೊಂಡು ಮಧುಮೇಹ ವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.

ಸೇವನೆ ಹೇಗೆ?

• ನಿಂಬೆ ರಸವನ್ನು ಹಿಂಡಿದ ಬಳಿಕ, ಅದರ ಸಿಪ್ಪೆಯನ್ನು ಸರಿಯಾಗಿ ಬಿಸಿಲಿನಲ್ಲಿ ಒಣಗಿಸಿ. ಬಳಿಕ ಅದನ್ನು ರುಬ್ಬಿಕೊಂಡು ಸರಿಯಾಗಿ ಹುಡಿ ಮಾಡಿ. ಇದರ ಬಳಿಕ ಗಾಳಿಯಾಡದೆ ಇರುವ ಡಬ್ಬದಲ್ಲಿ ಹಾಕಿಟ್ಟುಕೊಂಡು ಬಳಸಬಹುದು.

• ಇದನ್ನು ಉಪ್ಪಿನಕಾಯಿಯ ರೂಪದಲ್ಲಿ ಬಳಕೆ ಮಾಡಬಹುದು.

• ಮಾರುಕಟ್ಟೆಯಲ್ಲಿ ನಿಂಬೆ ಸಿಪ್ಪೆಯಿಂದ ತಯಾರಿಸಿರುವಂತಹ ಕೆಲವೊಂದು ಕ್ಯಾಂಡಿಗಳು ಕೂಡ ಇವೆ. ಇದನ್ನು ಬಳಕೆ ಮಾಡಬಹುದು

• ಚಿಕನ್ ಅಥವಾ ಮೀನಿನ ರೆಸಿಪಿಗೆ ನಿಂಬೆ ಹಣ್ಣಿನ ಜ್ಯೂಸ್ ಬದಲು ತುರಿದ ನಿಂಬೆ ಹಣ್ಣಿನ ಸಿಪ್ಪೆಯನ್ನು ಹಾಕಿ ಮಿಶ್ರಣ ಮಾಡಬಹುದು.

ಹಿಂದಿನ ಲೇಖನಮಾ.15ರೊಳಗೆ ಸೈನಿಕರಿಗೆ ಬಾಕಿ ಇರುವ ಪಿಂಚಣಿ ನೀಡಿ: ಸುಪ್ರೀಂ ಕೋರ್ಟ್‌
ಮುಂದಿನ ಲೇಖನಕೃಷಿಕರನ್ನು ಭೂಮಿಯಿಂದ ಕಿತ್ತು ಬೀದಿಗೆ ಎಸೆಯುವುದು ಸುಧಾರಣೆಯೇ?: ದೇವನೂರ ಮಹಾದೇವ ಪ್ರಶ್ನೆ