ಮನೆ ಶಿಕ್ಷಣ ಜೆಇಇ ಪರೀಕ್ಷೆ ಸೆಷನ್​ 1 ಫಲಿತಾಂಶ ಪ್ರಕಟ: 20 ಪುರುಷ ಅಭ್ಯರ್ಥಿಗಳಿಗೆ 100 ಅಂಕ

ಜೆಇಇ ಪರೀಕ್ಷೆ ಸೆಷನ್​ 1 ಫಲಿತಾಂಶ ಪ್ರಕಟ: 20 ಪುರುಷ ಅಭ್ಯರ್ಥಿಗಳಿಗೆ 100 ಅಂಕ

0

ನವದೆಹಲಿ: ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ-ಮೇನ್ಸ್‌ನ ಜನವರಿ ಆವೃತ್ತಿಯಲ್ಲಿ ಇಪ್ಪತ್ತು ಅಭ್ಯರ್ಥಿಗಳು ಪರಿಪೂರ್ಣ 100 ಅಂಕಗಳನ್ನು ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌’ಟಿಎ) ಮಂಗಳವಾರ ತಿಳಿಸಿದೆ.

100 ಅಂಕ ಗಳಿಸಿದವರೆಲ್ಲರೂ ಪುರುಷರ ಅಭ್ಯರ್ಥಿಗಳು. 50 ಅಭ್ಯರ್ಥಿಗಳ ಅಂಕಗಳನ್ನು ತಡೆಹಿಡಿಯಲಾಗಿದೆ. ಅವರು ಪರಿಶೀಲನೆಯಲ್ಲಿದ್ದಾರೆ ಎಂದು ಎನ್‌’ಟಿಎನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಅಭ್ಯರ್ಥಿಗಳು ಫಲಿತಾಂಶವನ್ನು ವೀಕ್ಷಿಸಲು jeemain.nta.nic.in ಅಥವಾ ntaresults.nic.in. ವೆಬ್’​ಸೈಟ್’​ಗೆ ಭೇಟಿ ನೀಡಬಹುದು.

ಪರೀಕ್ಷೆಯ ಎರಡನೇ ಆವೃತ್ತಿಯು ಏಪ್ರಿಲ್‌’ನಲ್ಲಿ ನಡೆಯಲಿದೆ.

ಹಿಂದಿನ ಲೇಖನವೃದ್ಧ ತಂದೆಯಿಂದ ಹೇಬಿಯಸ್ ಕಾರ್ಪಸ್ ಅರ್ಜಿ: ಕುಟುಂಬ ಸಮೇತ ಹಾಜರಾದ ಪುತ್ರ
ಮುಂದಿನ ಲೇಖನಬ್ರಾಹ್ಮಣ ಸಮುದಾಯದ ಅವಹೇಳನ ಮಾಡಿರುವ ಹೆಚ್.ಡಿ.ಕುಮಾರಸ್ವಾಮಿ ಕ್ಷಮೆಯಾಚಿಸಬೇಕು: ಡಾ.ಸಿ.ಎನ್. ಅಶ್ವತ್ಥನಾರಾಯಣ